ಮೆಲ್ಬೋರ್ನ್ :ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಬೌಲಿಂಗ್ ಮಾಡುವ ವೇಳೆ ಭಾರತದ ವೇಗಿ ಉಮೇಶ್ ಯಾದವ್ ಗಾಯಕ್ಕೆ ತುತ್ತಾಗಿದ್ದಾರೆ.
ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸುತ್ತಿರುವ ಆಸ್ಟ್ರೇಲಿಯಾ ವಿರುದ್ಧ 8ನೇ ಓವರ್ನಲ್ಲಿ ದಾಳಿಗಿಳಿದ ಉಮೇಶ್ 3 ಎಸೆತಗಳನ್ನು ಎಸೆದರು. ನಂತರ ತೀವ್ರ ಮೊಣಕಾಲು ನೋವಿನಿಂದಾಗಿ ಮೈದಾನದಿಂದ ಹೊರ ನಡೆದಿದ್ದಾರೆ. ನಂತರ ವೇಗಿ ಮೊಹಮ್ಮದ್ ಸಿರಾಜ್ ಎಂಟನೇ ಓವರ್ ಪೂರ್ಣಗೊಳಿಸಿದರು.
ಓದಿಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ರನ್ಔಟ್ ಆದ ಅಜಿಂಕ್ಯಾ: ಅಂದು ದ್ರಾವಿಡ್- ಗಂಗೂಲಿ, ಇಂದು ಕೊಹ್ಲಿ-ರಹಾನೆ
ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಉಮೇಶ್, ಇನ್ನಿಂಗ್ಸ್ನ 4 ನೇ ಓವರ್ನಲ್ಲಿ ಆರಂಭಿಕ ಆಟಗಾರ ಬರ್ನ್ಸ್ ವಿಕೆಟ್ ಪಡೆದುಕೊಂಡಿದ್ರು. ಟೀಂ ಇಂಡಿಯಾದ ನುರಿತ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಅವರ ಅಲಭ್ಯತೆ ಟೀಂ ಇಂಡಿಯಾದ ಹಿನ್ನಡೆಗೆ ಕಾರಣವಾಗಿದೆ. ಇದೀಗ ಉಮೇಶ್ ಯಾದವ್ ಕೂಡ ಗಾಯಕ್ಕೆ ತುತ್ತಾಗಿರುವುದು ಆತಂಕಕ್ಕೀಡು ಮಾಡಿದೆ.