ಕರ್ನಾಟಕ

karnataka

ETV Bharat / sports

7 ವರ್ಷಗಳ ನಂತರ ಭಾರತದ ಪರ ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಸಿರಾಜ್​ - ಅಶ್ವಿನ್​ ದಾಖಲೆ

ಸಿರಾಜ್​ ಮೊದಲ ಇನಿಂಗ್ಸ್​ನಲ್ಲಿ 2 ಮತ್ತು 2ನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಪಡೆದರು. ಅವರು ಈ ಪಂದ್ಯದಲ್ಲಿ ಕ್ಯಾಮರೋನ್ ಗ್ರೀನ್ ಅವ​ರನ್ನು 2 ಇನ್ನಿಂಗ್ಸ್​ನಲ್ಲೂ, ಮತ್ತು ಲಾಬುಶೇನ್​ರನ್ನು ಮೊದಲ ಇನ್ನಿಂಗ್ಸ್​ನಲ್ಲಿ , ನಥನ್ ಲಿಯೋನ್ ಮತ್ತು ಟ್ರಾವಿಸ್​ ಹೆಡ್​ರನ್ನು 2ನೇ ಇನ್ನಿಂಗ್ಸ್​ನಲ್ಲಿ ಪೆವಿಲಿಯನ್​ಗೆ ಅಟ್ಟಿದ್ದರು.

Siraj first India debutant to pick 5 wickets
ಮೊಹ್ಹಮದ್ ಸಿರಾಜ್​ ದಾಖಲೆ

By

Published : Dec 29, 2020, 5:24 PM IST

ಮೆಲ್ಬೋರ್ನ್​​: ಆಸ್ಟ್ರೇಲಿಯಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡಿದ ಮೊಹಮ್ಮದ್ ಸಿರಾಜ್​ 7 ವರ್ಷಗಳ ಬಳಿ ಭಾರತದ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲಿ 5 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ.

ಸಿರಾಜ್​ ಗಾಯಾಳು ಮೊಹಮ್ಮದ್​ ಶಮಿ ಜಾಗಕ್ಕೆ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಅವರು ಈ ಪಂದ್ಯದಲ್ಲಿ ಒಟ್ಟಾರೆ 36.3 ಓವರ್​ ಎಸೆದಿದ್ದು, 77 ರನ್​ ನೀಡಿ ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮೊಹಮ್ಮದ್ ಸಿರಾಜ್​

ಮೊದಲ ಇನಿಂಗ್ಸ್​ನಲ್ಲಿ ಸಿರಾಜ್ 2 ಮತ್ತು 2ನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಪಡೆದರು. ಅವರು ಈ ಪಂದ್ಯದಲ್ಲಿ ಕ್ಯಾಮರೋನ್ ಗ್ರೀನ್​ ಅವರನ್ನು 2 ಇನ್ನಿಂಗ್ಸ್​ನಲ್ಲೂ, ಮತ್ತು ಲಾಬುಶೇನ್​ರನ್ನು ಮೊದಲ ಇನ್ನಿಂಗ್ಸ್​ನಲ್ಲಿ , ನಥನ್ ಲಿಯೋನ್ ಮತ್ತು ಟ್ರಾವಿಸ್​ ಹೆಡ್​ರನ್ನು 2ನೇ ಇನ್ನಿಂಗ್ಸ್​ನಲ್ಲಿ ಪೆವಿಲಿಯನ್​ಗಟ್ಟಿದ್ದರು.

ಹಿಂದೆ ಅಂದರೆ 2013 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವೆಸ್ಟ್ ಇಂಡೀಸ್​ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಮೊಹಮ್ಮದ್ ಶಮಿ 9 ವಿಕೆಟ್ ಪಡೆದಿದ್ದರು. ಈ ಪಂದ್ಯದ ನಂತರ ಭಾರತದ ಪರ ಯಾವುದೇ ಬೌಲರ್ ಪದಾರ್ಪಣೆ ಟೆಸ್ಟ್​ನಲ್ಲೇ 5 ವಿಕೆಟ್ ಪಡೆಯುವಲ್ಲಿ ಸಫಲರಾಗಿರಲಿಲ್ಲ. 2011ರಲ್ಲಿ ಆರ್ ಅಶ್ವಿನ್​ ವೆಸ್ಟ್​ ಇಂಡೀಸ್ ವಿರುದ್ಧ 9 ವಿಕೆಟ್​ ಪಡೆದಿದ್ದರು.

ಇನ್ನು ಈ ಪಂದ್ಯದಲ್ಲಿ ಅಶ್ವಿನ್​ 5(3+2), ಬುಮ್ರಾ 6 (4+2), ಜಡೇಜಾ 3(2+1) ಉಮೇಶ್ ಯಾದವ್​ ಒಂದು ವಿಕೆಟ್ ಪಡೆದಿದ್ದಾರೆ.

ABOUT THE AUTHOR

...view details