ಕಾನ್ಬೆರಾ: ಭಾರತೀಯ ಬೌಲರ್‌ಗಳು ಐಪಿಎಲ್ನಲ್ಲಿ ಸಾಕಷ್ಟು ಪಂದ್ಯಗಳನ್ನಾಡಿರುವುದರಿಂದ ಕೆಲಸದ ಹೊರೆ ಹೆಚ್ಚಾಗಿತ್ತು. ಅವರು ಟಿ-20 ಪಂದ್ಯಗಳನ್ನಾಡಿರುವುದರಿಂದ 50 ಓವರ್ಗಳ ಕ್ರಿಕೆಟ್ಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಐಯ್ಯರ್ ಹೇಳಿದ್ದಾರೆ.
ಭಾರತ ತಂಡ ಆಸೀಸ್ ವಿರುದ್ಧದ ಮೊದಲೆರಡು ಪಂದ್ಯಗಲ್ಲಿ 66 ರನ್ ಮತ್ತು 51 ರನ್ಗಳಿಂದ ಸೋಲು ಕಂಡಿದೆ. ಎರಡು ಪಂದ್ಯಗಳಲ್ಲಿ ಬೌಲಿಂಗ್ ಮತ್ತು ಫೀಲ್ಡಿಂಗ್ ವೈಫಲ್ಯ ಭಾರಿ ಟೀಕೆಗೆ ಒಳಗಾಗಿತ್ತು. ಮೂರನೇ ಪಂದ್ಯ ಮನುಕಾ ಓವೆಲ್ನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಟಿ-20 ಮತ್ತು ಟೆಸ್ಟ್ ಸರಣಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಭಾರತ ಬಯಸಿದೆ.
"ಇದು ಕೇವಲ ಟಿ-20ಯಿಂದ ಏಕದಿನ ಪಂದ್ಯಕ್ಕೆ ಪರಿವರ್ತನೆಯ ಹಂತವಾಗಿದೆ ಎಂದು ಖಾತ್ರಿಪಡಿಸುತ್ತೇನೆ. 50 ಓವರ್ಗಳ ಪಂದ್ಯಕ್ಕೆ ಬದಲಾಗುವುದು ತುಂಬಾ ಕಷ್ಟ. ವಿಶೇಷವಾಗಿ ಬೌಲರ್‌ಗಳು 10 ಓವರ್‌ಗಳನ್ನು ಟ್ರೊಟ್‌ನಲ್ಲಿ ಬೌಲ್ ಮಾಡುವುದು ನಿಜವಾಗಿಯೂ ಕಷ್ಟ. ಆದ್ದರಿಂದ ಬೌಲರ್ಗಳ ದೃಷ್ಟಿಕೋನದಲ್ಲಿ ನೋಡುವುದಾದರೆ ಪರಿವರ್ತನೆ ಸುಲಭದ ಮಾತಲ್ಲ" ಎಂದು ಐಯ್ಯರ್ ಹೇಳಿದ್ದಾರೆ.