ಅಡಿಲೇಡ್(ಆಸ್ಟ್ರೇಲಿಯಾ): ಡಿಸೆಂಬರ್ 17 ರಂದು ನಡೆಯಲಿರುವ ಬಹು ನಿರೀಕ್ಷಿತ ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾದ ಅನುಭವಿ ಲೆಗ್-ಸ್ಪಿನ್ನರ್ ಶೇನ್ ವಾರ್ನ್, ಆಡುವ ಹನ್ನೊಂದು ಆಟಗಾರರನ್ನು ಆಯ್ಕೆ ಮಾಡಿದರು.
ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ 11 ಆಟಗಾರರ ಆಸೀಸ್ ತಂಡವನ್ನು ಆಯ್ಕೆ ಮಾಡಿರುವ ಶೇನ್ ವಾರ್ನ್, ಆರಂಭಿಕ ಆಟಗಾರರಾಗಿ ಹೊಸ ಜೋಡಿ ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಹ್ಯಾರಿಸ್ ಅವರನ್ನು ಹೆಸರಿಸಿದ್ದಾರೆ.
ವಾರ್ನ್, ಕ್ಯಾಮೆರಾನ್ ಗ್ರೀನ್‌ಗೆ ಬದಲಿಯಾಗಿ ಶಾನ್ ಮಾರ್ಷ್ರನ್ನು ಆಯ್ಕೆ ಮಾಡಿದ್ದಾರೆ. ಭಾರತದ ವಿರುದ್ಧದ ಅಭ್ಯಾಸ ಪಂದ್ಯದ ಸಮಯದಲ್ಲಿ ತಲೆಗೆ ಪೆಟ್ಟಾದ ಪರಿಣಾಮ ಗ್ರೀನ್ ಬದಲಿಗೆ ಪ್ಯಾಟ್ ರೋವ್ ಕಣಕ್ಕಿಳಿದಿದ್ದರು.
ಓದಿ:ಟೆಸ್ಟ್ ಸರಣಿಗೆ ಆರಂಭಿಕ ಆಟಗಾರರ ಆಯ್ಕೆ ಕಗ್ಗಂಟು: ಮಯಾಂಕ್, ರಾಹುಲ್ಗೆ ನೆಹ್ರಾ ಮಣೆ
ಮಧ್ಯಮ ಕ್ರಮಾಂಕದಲ್ಲಿ, ಟೆಸ್ಟ್ ತಂಡದ ಸ್ಟಾರ್ ಆಟಗಾರರಾದ ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್ ಮತ್ತು ನಾಯಕ ಟಿಮ್ ಪೈನ್ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗಕ್ಕೆ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ನೇತೃತ್ವ ವಹಿಸಲಿದ್ದು, ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹೆಜಲ್ವುಡ್ ಸಾಥ್ ನೀಡಲಿದ್ದಾರೆ. ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕಾಗಿ ಆಡುವ 11 ಆಟಗಾರರಲ್ಲಿ ಏಕೈಕ ಸ್ಪಿನ್ನರ್ ನಾಥನ್ ಲಿಯಾನ್ಗೆ ಸ್ಥಾನ ನೀಡಿದ್ದಾರೆ.
ಓದಿ:ಉತ್ತಮ ಫಾರ್ಮ್ನಲ್ಲಿ ಸಹಾ, ಪಂತ್: ಟೀಂ ಇಂಡಿಯಾಕ್ಕೆ ಹೊಸ ತಲೆನೋವು
ಶೇನ್ ವಾರ್ನ್ ಆಯ್ಕೆ ಆಸೀಸ್ ತಂಡ: ಮ್ಯಾಥ್ಯೂ ವೇಡ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಟಿಮ್ ಪೈನ್(ನಾಯಕ), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹೆಜಲ್ವುಡ್, ನಾಥನ್ ಲಿಯಾನ್.
ಒಂದು ವೇಳೆ ಕ್ಯಾಮೆರಾನ್ ಗ್ರೀನ್ ಸಂಪೂರ್ಣವಾಗಿ ಫಿಟ್ ಅಲ್ಲದಿದ್ದರೆ ಅವರ ಬದಲು ಶಾನ್ ಮಾರ್ಷ್ ರನ್ನು ಹನ್ನೊಂದರ ಬಳಗಕ್ಕೆ ಆಯ್ಕೆ ಮಾಡುತ್ತೇನೆ ಎಂದು ಶೇನ್ ವಾರ್ನ್ ಹೇಳಿದ್ದಾರೆ.