ಕರ್ನಾಟಕ

karnataka

ETV Bharat / sports

ದೀಪಾವಳಿ ಮುಗಿಯುತ್ತಿದ್ದಂತೆ ಫಿಟ್​ನೆಸ್​ ಪರೀಕ್ಷೆಗಾಗಿ ಬೆಂಗಳೂರಿನ ಎನ್​ಸಿಎ ಸೇರಲಿರುವ ರೋಹಿತ್​ - ರೋಹಿತ್ ಶರ್ಮಾ ಆಸ್ಟ್ರೇಲಿಯಾ ಪ್ರವಾಸ

ಡಿಸೆಂಬರ್​ 17ರಿಂದ ಟೆಸ್ಟ್​ ಸರಣಿ ಆರಂಭವಾಗಿಲಿದೆ. ಇದು ಡೇ ಅಂಡ್​ ನೈಟ್ ಟೆಸ್ಟ್​ ಪಂದ್ಯವಾಗಲಿದೆ. ನಂತರ ಡಿಸೆಂಬರ್​ 26ರಿಂದ 30ರ ವರೆಗೆ ಬಾಕ್ಸಿಂಗ್ ಡೇ ಟೆಸ್ಟ್​, ಜನವರಿ 7-11 ಹಾಗೂ 15-19ರವರೆಗ 3 ಮತ್ತು 4ನೇ ಟೆಸ್ಟ್​ ನಡೆಯಲಿದೆ.

ರೋಹಿತ್ ಶರ್ಮಾ
ರೋಹಿತ್ ಶರ್ಮಾ

By

Published : Nov 11, 2020, 7:47 PM IST

ದುಬೈ:ಬುಧವಾರ ಐಪಿಎಲ್​ನ ಫೈನಲ್​ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ಟ್ರೋಫಿ ತಂದುಕೊಟ್ಟಿರುವ ರೋಹಿತ್ ಶರ್ಮಾ, ದುಬೈಗೆ ಬಂದ ನಂತರ ಫಿಟ್​ನೆಸ್​ ಸಾಬೀತು ಪಡಿಸಲು ರಾಷ್ಟ್ರೀಯ ಕ್ರಿಕೆಟ್​ ಆಕಾಡೆಮಿಗೆ ಆಗಮಿಸಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಗೆ ಆಯ್ಕೆಯಾಗಿರುವ ರೋಹಿತ್ ಶರ್ಮಾ ಐಪಿಎಲ್ ವೇಳೆ ಗಾಯಕ್ಕೊಳಗಾಗಿದ್ದರು. ಚೇತರಿಸಿಕೊಂಡು ಮತ್ತೆ ಐಪಿಎಲ್​ನಲ್ಲಿ ಆಡಿದ್ದರೂ ಅವರು ಗಾಯದ ಪ್ರಮಾಣ ಹೇಗಿದೆ ಎಂಬುದನ್ನು ಎನ್​ಸಿಎನಲ್ಲಿ ಪುನರ್ವಸತಿಗೆ ಒಳಗಾಗಿ ತೋರಿಸಬೇಕಿದೆ. ಹಾಗಾಗಿ ಮುಂಬೈಗೆ ಬಂದು ದೀಪಾವಳಿ ಮುಗಿದ ನಂತರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಗೆ ಸೇರಿಕೊಳ್ಳಲಿದ್ದಾರೆ.

ಗಾಯದಿಂದ ಚೇತರಿಸಿಕೊಂಡರಾಷ್ಟ್ರೀಯ ಆಟಗಾರರು ಎನ್​ಸಿಎನಲ್ಲಿ ಫಿಟ್​ನೆಸ್​ ಪರೀಕ್ಷೆಗೆ ಒಳಗಾಗಬೇಕಾಗಿದೆ . ಹಾಗಾಗಿ ದೀಪಾವಳಿ ಮುಗಿಸಿಕೊಂಡು ರೋಹಿತ್ ಬೆಂಗಳೂರಿಗೆ ಬರಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಅವರು ತಂಡದ ಪ್ರಮುಖ ಭಾಗವಲಿದ್ದಾರೆ. ವಿರಾಟ್ ಕೊಹ್ಲಿ ಕೊನೆಯ ಮೂರು ಟೆಸ್ಟ್​ಗಳಿಗೆ ಅಲಭ್ಯರಾಗುವುದರಿಂದ ರೋಹಿತ್ ಪಾತ್ರ ಮಹತ್ವವಾಗಲಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.

ಡಿಸೆಂಬರ್​ 17ರಿಂದ ಟೆಸ್ಟ್​ ಸರಣಿ ಆರಂಭವಾಗಿಲಿದೆ. ಇದು ಡೇ ಅಂಡ್​ ನೈಟ್ ಟೆಸ್ಟ್​ ಪಂದ್ಯವಾಗಲಿದೆ. ನಂತರ ಡಿಸೆಂಬರ್​ 26ರಿಂದ 30ರ ವರೆಗೆ ಬಾಕ್ಸಿಂಗ್ ಡೇ ಟೆಸ್ಟ್​, ಜನವರಿ 7-11 ಹಾಗೂ 15-19ರವರೆಗ 3 ಮತ್ತು 4ನೇ ಟೆಸ್ಟ್​ ನಡೆಯಲಿದೆ.

ABOUT THE AUTHOR

...view details