ಕ್ಯಾನ್ಬೆರಾ:ಬುಧವಾರ ಆಸ್ಟ್ರೇಲಿಯಾ ವಿರುದ್ಧ 13 ರನ್ಗಳ ಜಯ ಸಾಧಿಸಿದ್ದಕ್ಕೆ ಕಾರಣರಾದ ಕೆಳಕ್ರಮಾಂಕದ ಬ್ಯಾಟ್ಸ್ಮನ್ಗಳು ಹಾಗೂ ಬೌಲರ್ಗಳ ಮನೋಭಾವವನ್ನು ಶ್ಲಾಘಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸರಣಿಯನ್ನು 2-1ರಲ್ಲಿ ಕಳೆದುಕೊಂಡರೂ, ಐಸಿಸಿ ಸೂಪರ್ ಸೀರೀಸ್ನಲ್ಲಿ ಕೊನೆಯ ಪಂದ್ಯ ಗೆದ್ದು ಖಾತೆ ತೆರೆದಿದೆ. ಈ ಪಂದ್ಯದಲ್ಲಿ ಭಾರತ ತಂಡ ಅದೃಷ್ಟದ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿ 302 ರನ್ಗಳಿಸಿತ್ತು.
ಆರಂಭಿಕ ಬ್ಯಾಟ್ಸ್ಮನ್ಗಳ ವಿಫಲರಾದರೂ ಕೊಹ್ಲಿ 63 ರನ್ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಪಾಂಡ್ಯ(92) ಮತ್ತು ಜಡೇಜಾ(66) 6ನೇ ವಿಕೆಟ್ಗೆ 150 ರನ್ಗಳ ಜೊತೆಯಾಟ ನೀಡಿದರು. ಬೌಲರ್ಗಳು ಕೂಡ ಉತ್ತಮ ಪ್ರದರ್ಶನ ತೋರಿ ಭಾರತದ ಸೋಲಿನ ಸರಪಳಿ ಕಳಚಿ, ಗೆಲುವಿನ ಹಳಿಗೆ ಮರಳುವಂತೆ ಮಾಡಿದರು.
ಪಂದ್ಯದ ನಂತರ ಮಾತನಾಡಿದ ಕೊಹ್ಲಿ,"ನಮ್ಮ ಇನ್ನಿಂಗ್ಸ್ನ ಮೊದಲಾರ್ಧ ಹಾಗೂ ಆಸ್ಟ್ರೇಲಿಯಾದ ದ್ವಿತೀಯಾರ್ಧದಲ್ಲಿ ನಾವು ಒತ್ತಡಕ್ಕೆ ಸಿಲುಕಿದ್ದೆವು. ಆದರೆ ಸಂತೋಷದಾಯಕ ವಿಷಯ ಎಂದರೆ, ಎರಡೂ ಸಮಯದಲ್ಲೂ ನಾವು ಅದ್ಭುತವಾಗಿ ಕಮ್ಬ್ಯಾಕ್ ಮಾಡಿದೆವು. ಈ ಪಂದ್ಯದಲ್ಲಿ ಒಬ್ಬ(ನಟರಾಜನ್) ಪದಾರ್ಪಣೆ ಮಾಡಿದ, ಶುಬ್ಮನ್ ಗಿಲ್ ತಂಡಕ್ಕೆ ಮರಳಿದ್ದು ತಂಡದಲ್ಲಿ ಚೈತನ್ಯ ಮೂಡಿಸಿತು. ಪಂದ್ಯದಲ್ಲಿ ಬೌಲರ್ಗಳಿಗೆ ಪಿಚ್ ನೆರವಾದಾಗ ವಿಶ್ವಾಸ ಹೆಚ್ಚಾಗುತ್ತದೆ. ಅದು ಆಸ್ಟ್ರೇಲಿಯಾ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು ಎಂದು ಗೆಲುವಿನ ಶ್ರೇಯ ಬೌಲರ್ಗಳಿಗೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 13-14 ವರ್ಷಗಳ ಕಾಲ ಆಡಿದ್ದ ಸಂದರ್ಭದಲ್ಲಿ ನಾವು ಇಂದಿನ ಪಂದ್ಯದ ರೀತಿ ಕಮ್ಬ್ಯಾಕ್ ಮಾಡಬೇಕಾಗುತ್ತದೆ. ನಾವು ಸ್ವಲ್ಪ ಸಮಯದವರೆಗೆ ನಮ್ಮ ಇನ್ನಿಂಗ್ಸ್ ಮುಂದೆ ಹೋಗಬಹುದಷ್ಟೇ ಎಂದುಕೊಂಡಿದ್ದೆ, ಆದರೆ ಪಾಂಡ್ಯ- ಜಡೇಜಾ ಅದ್ಭುತ ಜೊತೆಯಾಟ ನೀಡಿದರು. ಇದು ತಂಡಕ್ಕೆ ಅಗತ್ಯವಾಗಿದ್ದ ಬೂಸ್ಟ್ ನೀಡಿತ್ತು. ಸರಣಿ ಕಳೆದುಕೊಂಡಿದ್ದರು. ಈ ಪಂದ್ಯದಲ್ಲಿ ಹೃದಯ ಮತ್ತು ಗೆಲ್ಲಬೇಕೆಂಬ ಆಸೆಯಿಂದ ಆಡಿದೆವು. ಆಸ್ಟ್ರೇಲಿಯಾದಲ್ಲಿ ಆಡುವ ಸಂದರ್ಭದಲ್ಲಿ ಇದೇ ರೀತಿ ಆಡಬೇಕು ಎಂದು ಅವರು ಹೇಳಿದ್ದಾರೆ.
ಈ ಪಂದ್ಯದಲ್ಲಿ ಶಮಿ, ಚಹಾಲ್ ಬದಲು ತಂಡಕ್ಕೆ ಆಯ್ಕೆಯಾಗಿದ್ದ ಶಾರ್ದುಲ್ ಠಾಕೂರ್ 3 ವಿಕೆಟ್ ಹಾಗೂ ನಟರಾಜನ್ ವಿಕೆಟ್ ಪಡೆದು ಮಿಂಚಿದರು. ಕಳೆದೆರಡು ಪಂದ್ಯಗಳಲ್ಲಿ ನಿರ್ದಿಷ್ಟಅಂತದಲ್ಲಿ ಭಾರತೀಯ ಬೌಲರ್ಗಳು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು.