ಕರ್ನಾಟಕ

karnataka

ETV Bharat / sports

'ಬ್ಯಾಟಿಂಗ್​ನಲ್ಲಿ ತೀಕ್ಷ್ಣತೆಯ ಕೊರತೆ': ಸೋಲಿಗೆ ಕಾರಣ ಕೊಟ್ಟ ವಿರಾಟ್ - ಸೋಲಿಗೆ ಕಾರಣ ಕೊಟ್ಟ ವಿರಾಟ್ ಕೊಹ್ಲಿ

ಬ್ಯಾಟಿಂಗ್ ವೈಫಲ್ಯದಿಂದಾಗಿ 5 ದಿನದ ಟೆಸ್ಟ್ ಪಂದ್ಯ ಮೂರು ದಿನಕ್ಕೆ ಮುಕ್ತಾಯವಾಗಿದ್ದು, ಮೊದಲ ಟೆಸ್ಟ್ ಪಂದ್ಯದ ಸೋಲಿಗೆ ಬ್ಯಾಟ್ಸ್​​ಮನ್​ಗಳ ನೀರಸ ಪ್ರದರ್ಶನ ಕಾರಣ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Virat kohli on India's loss
ಸೋಲಿಗೆ ಕಾರಣ ಬಿಚ್ಚಿಟ್ಟ ವಿರಾಟ್

By

Published : Dec 19, 2020, 4:51 PM IST

ಅಡಿಲೇಡ್: ತೀಕ್ಷ್ಣವಾದ ಬ್ಯಾಟಿಂಗ್​ ಕೊರತೆಯಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಾಣುವಂತಾಯಿತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮಂಕಾದ ಭಾರತ, ಆಸೀಸ್ ವಿರುದ್ಧ 8 ವಿಕೆಟ್​ಗಳಿಂದ ಸೋಲು ಕಂಡಿದೆ. ಬ್ಯಾಟಿಂಗ್ ವೈಫಲ್ಯದಿಂದಾಗಿ 5 ದಿನದ ಟೆಸ್ಟ್ ಪಂದ್ಯ ಮೂರು ದಿನಕ್ಕೆ ಮುಕ್ತಾಯವಾಗಿದೆ. ಮೊದಲ ಟೆಸ್ಟ್ ಪಂದ್ಯದ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ಅವರು ಹೇಳಿದ್ದಾರೆ.

ಪಂದ್ಯದ ಬಳಿಕ ಮಾತನಾಡಿರುವ ವಿರಾಟ್, "ಸೋಲಿನ ಭಾವನೆಯನ್ನು ಪದಗಳಲ್ಲಿ ಹೇಳುವುದು ತುಂಬಾ ಕಷ್ಟ. ನಾವು 60 ರನ್​ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ್ರೂ, ಕೇವಲ 36 ರನ್​ ಗಳಿಗೆ ಪತನ ಕಂಡಿದ್ದು ಬೇಸರದ ಸಂಗತಿಯಾಗಿದೆ. ನಮ್ಮ ಬ್ಯಾಟಿಂಗ್​ನಲ್ಲಿ ತೀಕ್ಷ್ಣತೆ ಇಲ್ಲದಿರುವುದೇ ಮುಖ್ಯ ಕಾರಣ. ಇಂದಿನ ಫಲಿತಾಂಶ ಎಲ್ಲರಿಗೂ ನಿರಾಸೆ ತರಿಸಿದೆ. ವಿವಿಧ ಹಂತಗಳಲ್ಲಿ ಏನು ಮಾಡಬೇಕೆಂಬುದನ್ನು ಅರ್ಥಮಾಡಿಕೊಳ್ಳಲು ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಆದರೆ ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರಲು ಆಗಲಿಲ್ಲ" ಎಂದಿದ್ದಾರೆ.

ವಿರಾಟ್ ಕೊಹ್ಲಿ

"ಮೊದಲ ಇನ್ನಿಂಗ್ಸ್​ನಂತೆಯೇ ಬೌಲಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾ ವೇಗಿಗಳ ವಿರುದ್ಧ ಹೆಚ್ಚು ರನ್ ಗಳಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ಆಸೀಸ್​ ಬೌಲರ್​ಗಳು ಉತ್ತಮವಾಗಿ ಸ್ಪೆಲ್ ಮಾಡಿದ್ರು. ಅವರ ಉತ್ತಮ ​ಬೌಲಿಂಗ್​ ದಾಳಿ ಮತ್ತು ನಮ್ಮ ಬ್ಯಾಟಿಂಗ್​ನಲ್ಲಿ ತೀಕ್ಷ್ಣತೆಯ ಕೊರತೆ, ಈ ಎರಡರ ಸಂಯೋಜನೆಯೊಂದಿಗೆ ನಮಗೆ ಸೋಲು ಎದುರಾಯ್ತು. ಈ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಂಡು ಬಾಕ್ಸಿಂಗ್​ ಡೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಓದಿ:2020ರಲ್ಲಿ ವಿರಾಟ್ ವೈಫಲ್ಯ: 392 ದಿನ ಕಳೆದರೂ ಶತಕ ಸಿಡಿಸದ ರನ್ ಮಷಿನ್

ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 244 ರನ್​ಗಳಿಸಿದ್ರೆ, ಆಸ್ಟ್ರೇಲಿಯಾ ತಂಡ 191 ರನ್​ ಗಳಿಗೆ ಸರ್ವಪತನ ಕಂಡಿತ್ತು. ದ್ವಿತೀಯ ಇನ್ನಿಂಗ್ಸ್​ನಲ್ಲಿ ಆಸೀಸ್ ಬೌಲರ್​ಗಳ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಕೇವಲ 36 ರನ್​ ಗಳಿಸಿತು. 90 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಕಾಂಗರೂ ಪಡೆ 2 ವಿಕೆಟ್ ಕಳೆದುಕೊಂಡು 93 ರನ್​ ಗಳಿಸುವ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ABOUT THE AUTHOR

...view details