ಕರ್ನಾಟಕ

karnataka

ETV Bharat / sports

ಮೆಲ್ಬೋರ್ನ್​​ ಟೆಸ್ಟ್​​ನಲ್ಲಿ ಟೀಂ ಇಂಡಿಯಾಗೆ ಮಹಾ ವಿಜಯ: ಸರಣಿ 1-1ರಿಂದ ಸಮಬಲ - ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ

After Adelaide’s embarrassment, India rose from the ashes, riding on Captain Rahane’s innings, some thrilling cameos by debutant Shubhman Gill and overwhelming performances from seasoned R Ashwin and Jasprit Bumrah to beat the Australian team in the Boxing Day Test match at Melbourne Cricket Ground.

AUS vs IND: India smoke Australia by 8-wkts in 2nd Test at MCG
ಟೀಮ್​ ಇಂಡಿಯಾಗೆ 8 ವಿಕೆಟ್​​​ಗಳ ಭರ್ಜರಿ ಜಯ

By

Published : Dec 29, 2020, 9:21 AM IST

Updated : Dec 29, 2020, 11:00 PM IST

09:20 December 29

4ನೇ ದಿನದಾಟದಲ್ಲೂ ಆಸೀಸ್ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳನ್ನು ಕೆಲ ಕಾಲ ಕಾಡಿದರು. ನಿನ್ನೆ ದಿನದ ಮುಕ್ತಾಯದ ವೇಳೆಗೆ ಆಸೀಸ್​ ಪಡೆ 133 ರನ್​​ಗೆ 6 ವಿಕೆಟ್​​ ಕಳೆದುಕೊಂಡಿತ್ತು. ಇಂದು ಬ್ಯಾಟಿಂಗ್ ಮುಂದುವರಿಸಿದ ಆಸೀಸ್‌ನ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು 67 ರನ್​​ ಕಲೆ ಹಾಕಿದರು..

ಮೆಲ್ಬೋರ್ನ್ :ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಸಮಬಲ ಸಾಧಿಸಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 200 ರನ್‌ಗಳಿಗೆ ಆಲೌಟ್​ ಆಗಿತ್ತು. ಈ ಮೂಲಕ ಟೀಂ ಇಂಡಿಯಾ ಗೆಲುವಿಗೆ 70 ರನ್​ಗಳ ಗುರಿ ನೀಡಿತ್ತು.  

ಈ ಗುರಿ ಬೆನ್ನತ್ತಿದ ಟೀಂ​ ಇಂಡಿಯಾಗೆ ಸ್ಟಾರ್ಕ್ ಆರಂಭಿಕ ಆಘಾತ ನೀಡಿದರು. ಕೇವಲ 5 ರನ್​ ಗಳಿಸಿ ಮಯಾಂಕ್​ ಅಗರವಾಲ್​ ಔಟಾದರು. ನಂತರ ಬಂದ ಚೇತೇಶ್ವರ್​ ಪೂಜಾರ (3) ಕೂಡ ಬಹು ಬೇಗನ ಪೆವಿಲಿಯನ್​​ ಸೇರಿದರು. ನಂತರ ಒಂದಾದ ನಾಯಕ ರಹಾನೆ (27) ಮತ್ತು ಗಿಲ್ (35)​​ ತಂಡವನ್ನು ಗೆಲುವಿನ ದಡ ಸೇರಿಸಿದರು. ಚೊಚ್ಚಲ ಪಂದ್ಯವನ್ನಾಡಿದ ಸಿರಾಜ್​ ಮತ್ತು ಶುಭಮನ್​ ಗಿಲ್​ ಭರವಸೆಯ ಆಟವಾಡಿದರು.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ :195/10, ಮಾರ್ನಸ್​​ ಲಾಬುಶೇನ್ 48, ಹೆಡ್​ 38, ಬೂಮ್ರಾ 4, ಅಶ್ವಿನ್​ 3 ವಿಕೆಟ್​. ಭಾರತ ಮೊದಲ ಇನ್ನಿಂಗ್ಸ್​: 326/10, ರಹಾನೆ 112, ಜಡೇಜಾ 57, ಗಿಲ್​ 45 ರನ್​​, ಸ್ಟಾರ್ಕ್​ 3, ಲಿಯನ್ 3, ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್​ : 200/10, ವೇಡ್​​ 40, ಗ್ರೀನ್​ 45 ರನ್, ಸಿರಾಜ್​ 3 ವಿಕೆಟ್,​ ಭಾರತ 2ನೇ ಇನ್ನಿಂಗ್ಸ್​:70/2, ಗಿಲ್​ 35, ರಹಾನೆ 27 ರನ್​​, ಸ್ಟಾರ್ಕ್​ 1, ಕಮಿನ್ಸ್​​ 1 ವಿಕೆಟ್​​.

4ನೇ ದಿನದಾಟದಲ್ಲೂ ಆಸೀಸ್ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳನ್ನು ಕೆಲ ಕಾಲ ಕಾಡಿದರು. ನಿನ್ನೆ ದಿನದ ಮುಕ್ತಾಯದ ವೇಳೆಗೆ ಆಸೀಸ್​ ಪಡೆ 133 ರನ್​​ಗೆ 6 ವಿಕೆಟ್​​ ಕಳೆದುಕೊಂಡಿತ್ತು. ಇಂದು ಬ್ಯಾಟಿಂಗ್ ಮುಂದುವರಿಸಿದ ಆಸೀಸ್‌ನ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು 67 ರನ್​​ ಕಲೆ ಹಾಕಿದರು.

ಕ್ಯಾಮರೂನ್ ಗ್ರೀನ್ ಹಾಗೂ ಪ್ಯಾಟ್ ಕಮಿನ್ಸ್ ಏಳನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಟವಾಡಿದರು. ಕೊನೆಗೂ ಈ ಜೋಡಿಯನ್ನು ಜಸ್‌ಪ್ರೀತ್ ಬೂಮ್ರಾ ಬೇರ್ಪಡಿಸಿದರು. 103 ಎಸೆತಗಳನ್ನು ಎದುರಿಸಿದ ಕಮಿನ್ಸ್ 1 ಬೌಂಡರಿ ನೆರವಿನಿಂದ 22 ರನ್ ಗಳಿಸಿ ಔಟಾದರು.

ಇನ್ನೊಂದೆಡೆ ಯುವ ಬ್ಯಾಟ್ಸ್‌ಮನ್ ಕ್ಯಾಮರೂನ್ ಗ್ರೀನ್ 45 ರನ್​​ ಗಳಿಸಿದಾಗ ಮೊಹಮ್ಮದ್ ಸಿರಾಜ್ ಬೌಲಿಂಗ್​​ನಲ್ಲಿ ಜಡೇಜಾ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. 146 ಎಸೆತಗಳನ್ನು ಎದುರಿಸಿದ ಗ್ರೀನ್ ಐದು ಬೌಂಡರಿಗಳಿಂದ 45 ರನ್ ಗಳಿಸಿ ಅರ್ಧಶತಕ ವಂಚಿತವಾದರು.

ನಥನ್ ಲಿಯನ್ (3), ಜೋಶ್ ಹ್ಯಾಜಲ್‌ವುಡ್ (10) ಮತ್ತು ಮಿಚೆಲ್ ಸ್ಟಾರ್ಕ್ (14*) ರನ್​​ ಗಳಿಸಿದರು. ಇದರೊಂದಿಗೆ 103.1 ಓವರ್‌ಗಳಲ್ಲಿ 200 ರನ್‌ಗಳಿಗೆ ಕಾಂಗರೂ ಪಡೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತ ಪರ ಮೊಹಮ್ಮದ್ ಸಿರಾಜ್ 3 ಮತ್ತು ಜಸ್‌ಪ್ರೀತ್ ಬೂಮ್ರಾ, ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿದರು.

Last Updated : Dec 29, 2020, 11:00 PM IST

ABOUT THE AUTHOR

...view details