ಮೆಲ್ಬೋರ್ನ್: ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಸಿಡ್ನಿ ಮತ್ತು ಕ್ಯಾನ್‌ಬೆರಾದಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹಿಂದಿರುಗುವ ಭಾರತೀಯ ತಂಡ ಮತ್ತು ಆಸ್ಟ್ರೇಲಿಯಾದ ಆಟಗಾರರನ್ನು ಸಿಡ್ನಿಯಲ್ಲಿ ಕ್ವಾರಂಟೈನಲ್ಲಿ ಇರಿಸಲು ಮತ್ತು ಹತ್ತಿರದ ತರಬೇತಿ ಸೌಲಭ್ಯಗಳಿಗೆ ಪ್ರವೇಶ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆ್ಯರನ್ ಫಿಂಚ್, ವಿರಾಟ್ ಕೊಹ್ಲಿ (ಸಾಂದರ್ಭಿಕ ಚಿತ್ರ) ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಮೊದಲ ಎರಡು ಏಕದಿನ ಪಂದ್ಯಗಳನ್ನು ನವೆಂಬರ್ 27 ಮತ್ತು 29 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಡಲಿದ್ದು, ಡಿಸೆಂಬರ್ 1 ರಂದು ಮೂರನೇ ಏಕದಿನ ಮತ್ತು ಡಿಸೆಂಬರ್ 4 ರಂದು ಮೊದಲ ಟಿ-20 ಪಂದ್ಯ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಡೆಯಲಿವೆ. ನಂತರ ಡಿಸೆಂಬರ್ 6 ಮತ್ತು 8 ರಂದು ಎಸ್‌ಸಿಜಿಯಲ್ಲಿ ಅಂತಿಮ ಎರಡು ಟಿ-20 ಪಂದ್ಯಗಳನ್ನು ಆಡಲು ಸಿಡ್ನಿಗೆ ತೆರಳಲಿವೆ.
ಏಕದಿನ ಮತ್ತು ಟಿ-20 ಪಂದ್ಯಗಳ ನಂತರ, ಉಭಯ ತಂಡಗಳು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸ್ಪರ್ಧಿಸಲಿದ್ದು, ಡಿಸೆಂಬರ್ 17 ಮತ್ತು 21ರ ನಡುವೆ ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ನೊಂದಿಗೆ ಸರಣಿ ಪ್ರಾರಂಭವಾಗಲಿದೆ.
ನ್ಯೂ ಸೌತ್ ವೇಲ್ಸ್ ಸರ್ಕಾರದ ಅನುಮೋದನೆಯ ನಂತರ ಕ್ಯಾರೆಂಟೈನ್ ಪ್ರೋಟೋಕಾಲ್‌ಗಳ ದೃಢೀಕರಣಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಅಂತಿಮ ಮುದ್ರೆ ಒತ್ತುವ ಅಗತ್ಯವಿದೆ.