ಕರ್ನಾಟಕ

karnataka

ETV Bharat / sports

ಆಸೀಸ್‌-ಭಾರತ ನಡುವಿನ ಟೆಸ್ಟ್​ನಲ್ಲಿ 132 ವರ್ಷಗಳ ನಂತರ ಅತ್ಯಂತ ಕಳಪೆ ರನ್​ ಸರಾಸರಿ ದಾಖಲು!

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್​ಮನ್​ ಡೇವಿಡ್ ವಾರ್ನರ್ ಪ್ರಕಾರ, ರನ್​ ಕುಸಿಯಲು ಆರಂಭಿಕ ಆಟಗಾರರು ತೋರಿದ ತ್ವರಿತ ಆತುರದಿಂದಾಗಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಇದರಿಂದಾಗಿ ಒತ್ತಡ ಹೆಚ್ಚಾಗುತ್ತಿದೆ. ಬ್ಯಾಟ್ಸ್‌ಮನ್‌ಗಳು ತೀವ್ರತೆ ತೋರಿಸಬೇಕು, ಎದುರಾಳಿ ದಾಳಿಯನ್ನು ಸಮರ್ಥವಾಗಿ ಸ್ವೀಕರಿಸಬೇಕು..

ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್​
ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್​

By

Published : Jan 2, 2021, 6:07 PM IST

ಮೆಲ್ಬೋರ್ನ್​ :ಬಾರ್ಡರ್‌ ಗವಾಸ್ಕರ್​ ಟೆಸ್ಟ್​ ಸರಣಿಯ ಮೊದಲೆರಡು ಟೆಸ್ಟ್​ ಪಂದ್ಯಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯನ್​ ಬ್ಯಾಟ್ಸ್​ಮನ್​ಗಳು 132 ವರ್ಷಗಳಲ್ಲಿ ಅತ್ಯಂತ ಕಡಿಮೆ ಸರಾಸರಿಯಲ್ಲಿ ವಿಕೆಟ್​ ಒಪ್ಪಿಸಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾ​ ಸರಣಿಯಲ್ಲಿ ಒಂದು ವಿಕೆಟ್​ಗೆ 21.50 ರನ್​ ಸರಾಸರಿ ದಾಖಲಾಗಿದೆ. 1887-88ರ ಆಸ್ಟ್ರೇಲಿಯಾ ಬೇಸಿಗೆ ಸರಣಿಯಲ್ಲಿ ಆಸೀಸ್ ಪೇಸರ್​ ಚಾರ್ಲಿ ಟರ್ನರ್​ 12 ವಿಕೆಟ್​ ಮತ್ತು ಇಂಗ್ಲೆಂಡ್​ ಪೇಸರ್​ ಜಾರ್ಜ್​ ಲೊಹ್ಮನ್​ ಮತ್ತು ಎಡಗೈ ಸ್ಪಿನ್ನರ್​ ಬಾಬಿ ಪೀಲ್​ ತಲಾ 9 ವಿಕೆಟ್​ ಪಡೆದಿದ್ದರು.

ಈ ಪಂದ್ಯದಲ್ಲಿ ಮಾತ್ರ ಪ್ರತಿ ಒಂದು ವಿಕೆಟ್​ಗೆ ಕೇವಲ 9.35 ಸರಾಸರಿಯಲ್ಲಿ ವಿಕೆಟ್​ ಕಳೆದುಕೊಂಡಿತ್ತು. ಅದನ್ನು ಹೊರೆತುಪಡಿಸಿದ್ರೆ ಪ್ರಸ್ತುತ ಇಂಡೋ-ಆಸೀಸ್​ ಸರಣಿಯಲ್ಲಿ ಮಾತ್ರ ಕಡಿಮೆ ರನ್​ ಸರಾಸರಿ(21.50) ದಾಖಲಾಗುತ್ತಿದೆ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್​

ಕಳೆದ ಒಂದೆರಡು ಸಮ್ಮರ್​ಗಳಿಗೆ ಹೋಲಿಸಿದ್ರೆ 21.50 ಸರಾಸರಿ ತುಂಬಾ ಕಡಿಮೆಯಾಗಿದೆ. 2019-20ರಲ್ಲಿ ಭಾರತ ಆಸ್ಟ್ರೆಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ರನ್​ 30.3 ಹಾಗೂ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಯ ವೇಳೆ 34.01 ಸರಾಸರಿ ದಾಖಲಾಗಿತ್ತು.

cricket.com.au ಮಾಹಿತಿಯ ಪ್ರಕಾರ ರನ್​ರೇಟ್​ ಕೂಡ ಕಡಿಮೆಯಾಗಿದೆ. ಪ್ರಸ್ತುತ ಸರಣಿಯಲ್ಲಿ ರನ್​ರೇಟ್​ 2.63 ಇದ್ದು, ಈ ಶತಮಾನದ ಯಾವುದೇ ಬೇಸಿಗೆಯಲ್ಲಿ ದಾಖಲಾದ ಅತ್ಯಂತ ಕಡಿಮೆ ರನ್​ರೇಟ್​ ಎಂದು ತಿಳಿಸಿದೆ.

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್​ಮನ್​ ಡೇವಿಡ್ ವಾರ್ನರ್ ಪ್ರಕಾರ, ರನ್​ ಕುಸಿಯಲು ಆರಂಭಿಕ ಆಟಗಾರರು ತೋರಿದ ತ್ವರಿತ ಆತುರದಿಂದಾಗಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಇದರಿಂದಾಗಿ ಒತ್ತಡ ಹೆಚ್ಚಾಗುತ್ತಿದೆ. ಬ್ಯಾಟ್ಸ್‌ಮನ್‌ಗಳು ತೀವ್ರತೆ ತೋರಿಸಬೇಕು, ಎದುರಾಳಿ ದಾಳಿಯನ್ನು ಸಮರ್ಥವಾಗಿ ಸ್ವೀಕರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details