ಕರ್ನಾಟಕ

karnataka

ETV Bharat / sports

ಟೆಸ್ಟ್ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ರನ್​ಔಟ್ ಆದ ಅಜಿಂಕ್ಯಾ: ಅಂದು ದ್ರಾವಿಡ್- ಗಂಗೂಲಿ, ಇಂದು ಕೊಹ್ಲಿ-ರಹಾನೆ

ಅಜಿಂಕ್ಯಾ ರಹಾನೆ ಟೆಸ್ಟ್ ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ ನಂತರ ರನ್​ಔಟ್​ಗೆ ಬಲಿಯಾದ ಭಾರತದ ಮೂರನೇ ನಾಯಕನಾಗಿದ್ದಾರೆ.

Ajinkya Rahane dismissed run out for first time in Test career
ಟೆಸ್ಟ್ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ರನ್​ಔಟ್ ಆದ ಅಜಿಂಕ್ಯಾ

By

Published : Dec 28, 2020, 9:53 AM IST

ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್​ ಡೇ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯಾ ರಹಾನೆ ರನ್​ಔಟ್​ಗೆ ವಿಕೆಟ್ ಒಪ್ಪಿಸುವ ಮೂಲಕ ಟೆಸ್ಟ್ ಕ್ರಿಕೆಟ್​​ನಲ್ಲಿ ಇದೇ ಮೊದಲ ಬಾರಿಗೆ ರನ್​ಔಟ್​ಗೆ ಬಲಿಯಾಗಿದ್ದಾರೆ.

ರಹಾನೆ ಏಕದಿನ ಕ್ರಿಕೆಟ್​ನಲ್ಲಿ 4 ಬಾರಿ ಮತ್ತು ಟಿ20 ಕ್ರಿಕೆಟ್​ನಲ್ಲಿ ಒಂದು ಬಾರಿ ರನ್​ಔಟ್​ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಟೆಸ್ಟ್ ಕ್ರಿಕೆಟ್​ನ 112 ಇನ್ನಿಂಗ್ಸ್​ಗಳಲ್ಲಿ ಇದೇ ಮೊದಲ ಬಾರಿಗೆ ರನ್​ ಕದಿಯುವ ಯತ್ನದಲ್ಲಿ ವಿಫಲರಾಗಿದ್ದಾರೆ.

ಒಂದೇ ಸರಣಿಯಲ್ಲಿ ಇಬ್ಬರು ವಿಭಿನ್ನ ನಾಯಕರು ರನ್​ಔಟ್

ಒಂದೇ ಸರಣಿಯಲ್ಲಿ ಇಬ್ಬರು ವಿಭಿನ್ನ ನಾಯಕರು ರನ್ಔಟ್ ಆಗಿರುವುದು ಇದು ಎರಡನೇ ಬಾರಿ. ಕೊಹ್ಲಿ ಅಡಿಲೇಡ್‌ನಲ್ಲಿ ರನ್​ಔಟ್​ಗೆ ಬಲಿಯಾಗಿದ್ರೆ, ಇಂದು ರಹಾನೆ ಅದೇ ರೀತಿ ಔಟ್ ಆಗಿದ್ದಾರೆ. ಇದಕ್ಕೂ ಮೊದಲು 2004 ರಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ನಾಯಕನಾಗಿದ್ದ ದ್ರಾವಿಡ್ ಎರಡನೇ ಟೆಸ್ಟ್‌ನಲ್ಲಿ ರನ್‌ಔಟ್ ಆಗಿದ್ರೆ, ಮೂರನೇ ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿದ್ದ ಗಂಗೂಲಿ ಕೂಡ ರನ್ ಕದಿಯುವ ಯತ್ನದಲ್ಲಿ ವಿಫಲರಾಗಿದ್ರು.

ಶತಕ ಸಿಡಿಸಿ ರನ್​ಔಟ್​ ಆದ ಭಾರತದ ಮೂರನೇ ನಾಯಕ

ರಹಾನೆ ಟೆಸ್ಟ್ ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ ನಂತರ ರನ್​ಔಟ್​ಗೆ ಬಲಿಯಾದ ಭಾರತದ ಮೂರನೇ ನಾಯಕನಾಗಿದ್ದಾರೆ. ಈ ಹಿಂದೆ 1951 ರಲ್ಲಿ ವಿಜಯ್ ಹಜಾರೆ ಮತ್ತು 2006ರಲ್ಲಿ ರಾಹುಲ್ ದ್ರಾವಿಡ್ ಶತಕ ಸಿಡಿಸಿ ರನ್​ಔಟ್ ಆಗಿದ್ದರು.

ABOUT THE AUTHOR

...view details