ಕರ್ನಾಟಕ

karnataka

ETV Bharat / sports

ಐಪಿಎಲ್ ವೇಳೆ ಎಲ್ಲಿ ಅಡಗಿತ್ತು ಈ ನಿಮ್ಮ ಪರಾಕ್ರಮ.. ಆಸೀಸ್ ಆಟಗಾರರಿಗೆ ಅಭಿಮಾನಿಗಳ ಪ್ರಶ್ನೆ!! - ಗ್ಲೇನ್ ಮ್ಯಾಕ್ಸ್​ವೆಲ್ ಲೇಟೆಸ್ಟ್ ನ್ಯೂಸ್

ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಸಿಡಿಯದ ಆಸೀಸ್ ಆಟಗಾರರು ಮೊದಲ ಏಕದಿನ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ತೋರುತ್ತಿದ್ದು, ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಆಸೀಸ್ ಆಟಗಾರರನ್ನು ಕ್ರಿಕೆಟ್ ಪ್ರೇಮಿಗಳು ಪ್ರಶ್ನೆ ಮಾಡುತ್ತಿದ್ದಾರೆ.

Aaron Finch Steve Smith smash tons
ಆಸೀಸ್ ಆಟಗಾರರಿಗೆ ಅಭಿಮಾನಿಗಳ ಪ್ರಶ್ನೆ

By

Published : Nov 27, 2020, 4:41 PM IST

ಹೈದರಾಬಾದ್:ಐಪಿಎಲ್ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ್ದ ಆಸೀಸ್ ದಾಂಡಿಗರು ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ದು, ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.

ಆರ್​ಸಿಬಿ ತಂಡದಲ್ಲಿ ಆರಂಭಿಕ ಆಟಗಾರನಾಗಿದ್ದ ಆ್ಯರೋನ್ ಫಿಂಚ್ ಐಪಿಎಲ್​ನಲ್ಲಿ 12 ಪಂದ್ಯಗಳಿಂದ 268 ರನ್​ಗಳಿಸಿದ್ದರು. ಆದರೆ, ಇಂದಿನ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಹರ್ಷ ಬೋಗ್ಲೆ, ಫಿಂಚ್ ಎಂಬ ಹೆಸರಿನಲ್ಲಿ ಇಬ್ಬರು ಕ್ರಿಕೆಟಿಗರಿದ್ದಾರೆಯೇ? ಎಂದು ಆರ್​ಸಿಬಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ ಎಂದಿದ್ದಾರೆ.

ಇಡೀ ಐಪಿಎಲ್ ಸರಣಿಯಲ್ಲಿ ಒಂದು ಸಿಕ್ಸರ್​​ ಸಿಡಿಸಲು ಹೆಣಗಾಡಿದ್ದ ಮ್ಯಾಕ್ಸ್​ವೆಲ್ ಇಂದಿನ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ 45 ರನ್​ ಸಿಡಿಸಿದ್ದಾರೆ. ಮ್ಯಾಕ್ಸ್​​ವೆಲ್ ಐಪಿಎಲ್​ನಲ್ಲಿ 13 ಪಂದ್ಯಗಳಿಂದ ಕೇವಲ 108 ರನ್​ ಗಳಿಸಿದ್ದರು.

ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿದ್ದ ಸ್ಟೀವ್ ಸ್ಮಿತ್​ ಕೆಲ ಪಂದ್ಯಗಳನ್ನು ಹೊರತುಪಡಿಸಿದೆ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ಮಿಂಚಿರಲಿಲ್ಲ. ಆದರೆ, ಇಂದಿನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಸ್ಮಿತ್, ಕೇವಲ 62 ಎಸೆತಗಳಲ್ಲೆ ಶತಕ ಪೂರೈಸಿದ್ರು.

ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಸಿಡಿಯದ ಆಸೀಸ್ ಆಟಗಾರರು ಮೊದಲ ಏಕದಿನ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ತೋರಿದ್ದು, ಐಪಿಎಲ್ ಟೂರ್ನಿ ವೇಳೆ ಎಲ್ಲಿ ಅಡಗಿತ್ತು ಈ ನಿಮ್ಮ ಪರಾಕ್ರಮ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ABOUT THE AUTHOR

...view details