ಕರ್ನಾಟಕ

karnataka

ETV Bharat / sports

ವಿರಾಟ್​ ಕೊಹ್ಲಿ ವೀಕ್ನೆಸ್​ ಬಿಚ್ಚಿಟ್ಟ ಆಸೀಸ್ ಸ್ಪಿನ್ನರ್​ ಜಂಪಾ!

ವಿರಾಟ್ ತನ್ನ ಇನ್ನಿಂಗ್ಸ್ ಪ್ರಾರಂಭದ ಸಮಯದಲ್ಲಿ ಲೆಗ್- ಸ್ಪಿನ್ನರ್​​ಗಳನ್ನ ಎದುರಿಸಲು ಕಷ್ಟಪಡುತ್ತಾರೆ ಎಂದು ಆಸೀಸ್ ಸ್ಪಿನ್ನರ್ ಆ್ಯಡಂ ಜಂಪಾ ವಿರಾಟ್​ ಕೊಹ್ಲಿಯ ವೀಕ್ನೆಸ್​ ಬಗ್ಗೆ ಮಾತನಾಡಿದ್ದಾರೆ.

Zampa reveals Kohli's big weakness,ಕೊಹ್ಲಿ ವೀಕ್ನೆಸ್​ ಬಿಚ್ಚಿಟ್ಟ ಆಸೀಸ್ ಸ್ಪಿನ್ನರ್​ ಜಂಪಾ
ಕೊಹ್ಲಿ ವೀಕ್ನೆಸ್​ ಬಿಚ್ಚಿಟ್ಟ ಆಸೀಸ್ ಸ್ಪಿನ್ನರ್​ ಜಂಪಾ

By

Published : Jan 17, 2020, 12:32 PM IST

ರಾಜ್​ಕೋಟ್(ಗುಜರಾತ್):ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದ್ದು, ಆಸೀಸ್ ಸ್ಪಿನ್ನರ್ ಆ್ಯಡಂ ಜಂಪಾ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಯ ವೀಕ್ನೆಸ್​ ಬಗ್ಗೆ ಮಾತನಾಡಿದ್ದಾರೆ.

ವಿರಾಟ್ ತನ್ನ ಇನ್ನಿಂಗ್ಸ್ ಪ್ರಾರಂಭದ ಸಮಯದಲ್ಲಿ ಲೆಗ್- ಸ್ಪಿನ್ನರ್​​ಗಳನ್ನ ಎದುರಿಸಲು ಕಷ್ಟಪಡುತ್ತಾರೆ. ಮೊದಲ ಪಂದ್ಯದಲ್ಲಿ ವಿರಾಟ್ 18 ಎಸೆತದಲ್ಲಿ 16 ರನ್​ ಗಳಿಸಿದ್ದರು. ವಿರಾಟ್ ಕೊಹ್ಲಿ ಕಟ್ಟಿಹಾಕಲು ಯೋಜನೆ ರೂಪಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ವಿರಾಟ್​ರನ್ನ 4 ಬಾರಿ ಔಟ್ ಮಾಡಿರುವುದು ನನ್ನ ವಿಶ್ವಾಸ ಹೆಚ್ಚಿಸಿದೆ ಎಂದಿದ್ದಾರೆ.

ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವಾಗ ಆಕ್ರಮಣಕಾರಿ ವಿಧಾನವನ್ನು ಅನುಸರಿಸಬೇಕು. ಸ್ವಲ್ಪ ಹಿಂಜರಿದರೂ ವಿರಾಟ್ ಬೌಲರ್​ ಮೇಲೆ ಸವಾವಾರಿ ಮಾಡುತ್ತಾರೆ. ನೀವು ಭಾರತದ ವಿರುದ್ಧ ಆಡುವಾಗ ಉತ್ತಮವಾದ ವ್ಯಕ್ತಿತ್ವ ಹೊಂದಿರುವುದು ಅತ್ಯಂತ ಮುಖ್ಯವಾದ ವಿಷಯ ಎಂದು ಜಂಪಾ ಹೇಳಿದ್ದಾರೆ.

ಮುಂದುವರಿದಂತೆ, ನಾನು ವಿರಾಟ್ ಅವರನ್ನು ಕೆಲವು ಬಾರಿ ಔಟ್​ ಮಾಡಿದ್ದೇನೆ ಆದರೂ ನನ್ನ ವಿರುದ್ಧ 100 ಸ್ಟ್ರೈಕ್ ರೇಟ್ ಹೋಂದಿದ್ದಾರೆ. ಕೊಹ್ಲಿಗೆ ಬೌಲಿಂಗ್ ಮಾಡುವುದು ತುಂಬಾ ಕಠಿಣ, ನಾನು ಬೌಲ್ ಮಾಡಿದ ಕಠಿಣ ವ್ಯಕ್ತಿಗಳಲ್ಲಿ ಅವರೂ ಒಬ್ಬರು ಎಂದು ವಿರಾಟ್​ ಆಟವನ್ನ ಮೆಚ್ಚಿಕೊಂಡಿದ್ದಾರೆ.

ABOUT THE AUTHOR

...view details