ಕರ್ನಾಟಕ

karnataka

ETV Bharat / sports

ಸ್ಲೆಡ್ಜಿಂಗ್​​​ ಮಾಡಿದ್ರೆ ಬ್ಯಾಟ್ ಮೂಲಕ ಉತ್ತರಿಸುವೆ, ಮಾತಿನಿಂದಲ್ಲ: ಡೇವಿಡ್ ವಾರ್ನರ್ - ಡೇವಿಡ್ ವಾರ್ನರ್ ಲೆಟೆಸ್ಟ್ ನ್ಯೂಸ್

ಈ ಬಾರಿ ಸ್ಲೆಡ್ಜಿಂಗ್​ ಮಾಡಿದರೆ ಅದನ್ನು ನಿರ್ಲಕ್ಷಿಸಿ ಬ್ಯಾಟ್ ಮೂಲಕ ಉತ್ತರ ನೀಡುತ್ತೇವೆ ಎಂದು ಭಾರತ ವಿರುದ್ಧದ ಸರಣಿಗೂ ಮುನ್ನ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಹೇಳಿದ್ದಾರೆ

David Warner
ಡೇವಿಡ್ ವಾರ್ನರ್

By

Published : Nov 23, 2020, 1:40 PM IST

ಸಿಡ್ನಿ:​ತಮ್ಮ ಆಕ್ರಮಣಕಾರಿ ಆಟ ಮುಂದುವರೆಸುತ್ತೇನೆ ಎಂದಿರುವ ಆಸೀಸ್ ತಂಡದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮುಂಬರುವ ಸರಣಿಯಲ್ಲಿ ಭಾರತೀಯ ಆಟಗಾರರು ಸ್ಲೆಡ್ಜ್ ಮಾಡಲು ಪ್ರಯತ್ನಿಸಿದರೆ ಅದನ್ನು ನಿರ್ಲಕ್ಷಿಸುತ್ತೇನೆ ಎಂದಿದ್ದಾರೆ.

ಭಾರತ- ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಯ ಅಧಿಕೃತ ಪ್ರಸಾರಕರು ನಡೆಸಿದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾರ್ನರ್, "ನಾನು ಇತ್ತೀಚೆಗೆ 34ನೇ ವರ್ಷಕ್ಕೆ ಸಾಮಾನ್ಯವಾಗಿ 30 ವರ್ಷ ವಯಸ್ಸು ಕಳೆದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಡೆಯ ದಿನಗಳನ್ನು ಎಣಿಸಲಾಗುತ್ತದೆ. ಅದರಲ್ಲಿ ಕ್ರಿಕೆಟ್ ಸ್ಮಾರ್ಟ್ ಅಂಶವೂ ಇದೆ ಎಂದಿದ್ದಾರೆ.

ಮೊದಲು ಸ್ಲೆಡ್ಜಿಂಗ್​ನಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತಿದ್ದೆ. ಆದರೆ, ನಾವು ಕಾಲಾನಂತರದಲ್ಲಿ ಕಲಿಯುತ್ತಿದ್ದೇವೆ, ಅದರಲ್ಲಿ ತೊಡಗಿಕೊಳ್ಳದಿರಲು ಪ್ರಯತ್ನಿಸುತ್ತಿದ್ದೇವೆ. ಬಹುಶಃ ಈ ಬಾರಿ ಸ್ಲೆಡ್ಜಿಂಗ್​ ಮಾಡಿದರೆ ಅದನ್ನು ನಿರ್ಲಕ್ಷಿಸಿ ಬ್ಯಾಟ್ ಮೂಲಕ ಉತ್ತರ ನೀಡಿ, ಸ್ಕೋರ್ ಹೆಚ್ಚಿಸುವತ್ತ ಗಮನ ಹರಿಸುತ್ತೇವೆ. ಇದೇ ಎದುರಾಳಿಗೆ ನಮ್ಮ ಉತ್ತರವಾಗಿರುತ್ತದೆ ಎಂದು ತಿಳಿಸಿದ್ದಾರೆ.

ನನ್ನ ಮಟ್ಟಿಗೆ, ನಾನು ಎಷ್ಟು ಸಾಧ್ಯವೋ ಅಷ್ಟು ಬ್ಯಾಟಿಂಗ್ ಮಾಡುತ್ತಿದ್ದೇನೆ ಮತ್ತು ಉತ್ತಮ ಸ್ಟ್ರೈಕ್ ರೇಟ್‌ನಲ್ಲಿದ್ದೇನೆ. ಕಳೆದ ವರ್ಷ ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಬ್ಯಾಟಿಂಗ್ ಮಾಡಿದ್ದೇನೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಕಳೆದ 12 ರಿಂದ 24 ತಿಂಗಳುಗಳ ಕ್ರಿಕೆಟ್​ ಆಟದ ಬಗ್ಗೆ ನಾನು ನಿಜವಾಗಿಯೂ ಹೆಮ್ಮೆಪಡುತ್ತೇನೆ, ಆ ಶಿಸ್ತನ್ನು ಅನ್ವಯಿಸಲು, ವಯಸ್ಸಾದಂತೆ ನೀವು ಕಲಿಯುತ್ತಲೇ ಇರುತ್ತೀರಿ. ಅದಕ್ಕೆ ಹೊಂದಿಕೊಳ್ಳಲು ನೀವು ನಿಮ್ಮ ಆಟದ ಮೇಲೆ ಗಮನ ಇಡಬೇಕು ಎಂದಿದ್ದಾರೆ.

ABOUT THE AUTHOR

...view details