ಇಸ್ಲಾಮಾಬಾದ್ : ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ರಾಜಕೀಯ ವಿಚಾರವಾಗಿ ಕಲಹಗಳು ಇರುವುದರಿಂದ ಅಲ್ಲಿಗೆ ಭಾರತೀಯ ಕ್ರೀಡಾಪಟುಗಳು ಹೋಗಲು ಹಿಂದೇಟು ಹಾಕುತ್ತಿದೆ. ಇದೀಗ ಅದು ಕ್ರಿಕೆಟ್ನಲ್ಲೂ ಮುಂದುವರಿದಿದ್ದು ಈ ಬಾರಿ ಏಷ್ಯಾಕಪ್ನಲ್ಲೂ ಪಾಕ್ ಪ್ರವಾಸ ಕುರಿತು ಗೊಂದಲ ಮೂಡಿದೆ.
ಏಷ್ಯಾಕಪ್ಗಾಗಿ ಪಾಕಿಸ್ತಾನಕ್ಕೆ ಬರ್ತೀರಾ, ಇಲ್ವಾ? ಭಾರತದ ನಿರ್ಧಾರಕ್ಕೆ ಗಡುವು ನೀಡಿದ ಪಿಸಿಬಿ
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುವ ಜವಾಬ್ದಾರಿ ಪಾಕಿಸ್ತಾನ ವಹಿಸಿಕೊಂಡಿದೆ. ಮುಂದಿನ ವರ್ಷ ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಈ ಟೂರ್ನಿಗೆ ಭಾರತ ತಂಡ ಪಾಲ್ಗೊಳ್ಳುವುದರ ಬಗ್ಗೆ ಜೂನ್ 2012ರೊಳಗೆ ನಿರ್ಧಾರ ತಿಳಿಸಲು ಪಿಸಿಬಿ ಬಿಸಿಸಿಐಗೆ ಗಡುವು ನೀಡಿದೆ.

2020 ಸೆಪ್ಟೆಂಬರ್ ತಿಂಗಳಲ್ಲಿ ಏಷ್ಯಾಕಪ್ ಟೂರ್ನಿ ನಡೆಯಲಿದೆಯಾದರೂ ಬಿಸಿಸಿಐ ಜೂನ್ ತಿಂಗಳೊಳಗೆ ತಮ್ಮ ನಿರ್ಧಾರವನ್ನ ತಿಳಿಸಬೇಕು. ಒಂದು ವೇಳೆ ಭಾರತ ಭಾಗವಹಿಸುವುದಿಲ್ಲವಾದರೆ ಟೂರ್ನಿಯನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಆದರೆ, ಆ ನಿರ್ಧಾರ ಏಷ್ಯಾ ಕ್ರಿಕೆಟ್ ಸಮಿತಿ ಹಾಗೂ ಐಸಿಸಿ ನೋಡಿಕೊಳ್ಳಲಿದೆ. ಒಂದು ವೇಳೆ ಭಾರತ ಪಾಕಿಸ್ತಾನಕ್ಕೆ ಬರಲು ಒಪ್ಪುವುದಾದರೆ ನಾವು ರಕ್ಷಣೆ ನೀಡುತ್ತೇವೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಸೀಂ ಖಾನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಖಾನ್ ಭಾರತದೊಂದಿಗೆ ದ್ವಿಪಕ್ಷೀಯ ಸರಣಿ ಆಯೋಜನೆಯ ಬಗ್ಗೆ ಮಾತನಾಡಿ, ಕ್ರಿಕೆಟ್ ಮಂಡಳಿಗಳ ನಡುವೆ ಉತ್ತಮ ಸಂಬಂಧವಿದೆ. ಆದರೆ, ಸರ್ಕಾರಗಳು ಮಧ್ಯ ಪ್ರವೇಶಿಸುವಿಕೆಯಿಂದ ದ್ವಿಪಕ್ಷೀಯ ಸರಣಿ ನಡೆಯಲು ಸಾಧ್ಯವಾಗುತ್ತಿಲ್ಲ. ಆದರೆ, ಬಿಸಿಸಿಐ ಬಯಸಿದರೆ ತಟಸ್ಥ ಸ್ಥಳದಲ್ಲಿ ಕ್ರಿಕೆಟ್ ಆಡಲು ನಾವು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.