ಕರ್ನಾಟಕ

karnataka

ETV Bharat / sports

ವಿಜಯ್​ ಹಜಾರೆ ಫೈನಲ್​​​ನಲ್ಲಿ ಸರ್​​ಪ್ರೈಸ್​ ನೀಡಿದ ಅಶ್ವಿನ್​ಗೆ ಭಾರಿ ದಂಡ!? - ಬಿಸಿಸಿಐ ನಿಯಮ ಉಲ್ಲಂಘನೆ

ತಮಿಳುನಾಡು ವಿರುದ್ಧ ನಡೆದ ವಿಜಯ್​ ಹಜಾರೆ ಫೈನಲ್​ ಪಂದ್ಯದಲ್ಲಿ ಏಕಾಏಕಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಮೈದಾನಕ್ಕಿಳಿದ ಆರ್​ ಅಶ್ವಿನ್​​ ಯಡವಟ್ಟು ಮಾಡಿಕೊಂಡಿದ್ದು, ಇದೀಗ ಬಿಸಿಸಿಐನಿಂದ ಭಾರಿ ದಂಡಕ್ಕೆ ಗುರಿಯಾಗುವ ಸಾಧ್ಯತೆ ಇದೆ.

ಆರ್​ ಅಶ್ವಿನ್​

By

Published : Oct 25, 2019, 7:09 PM IST

ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್​ ಹಜಾರೆ ಟ್ರೋಫಿ ಫೈನಲ್​​ನಲ್ಲಿ ಮನೀಷ್​ ಪಾಂಡೆ ನೇತೃತ್ವದ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 60ರನ್​ಗಳ ಅಂತರದ ಗೆಲುವು ದಾಖಲು ಮಾಡಿದೆ.

ಪಂದ್ಯದ ಮಧ್ಯದಲ್ಲಿ ನಡೆದ ವಿಚಿತ್ರ ಘಟನೆವೊಂದು ಕ್ರೀಡಾಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ತಮಿಳುನಾಡು ತಂಡ ಆರಂಭದಲ್ಲೇ ಮುರುಳಿ ವಿಜಯ್​ ವಿಕೆಟ್​ ಕಳೆದುಕೊಳ್ತು. ಇದಾದ ಬಳಿಕ ಸರ್​​ಪ್ರೈಸ್​​ ರೀತಿಯಲ್ಲಿ ಟೀಂ ಇಂಡಿಯಾ ಸ್ಪಿನ್ನರ್​​​​​ ಆರ್​ ಅಶ್ವಿನ್​ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲು ಕಣಕ್ಕಿಳಿಯುತ್ತಾರೆ. ಈ ವೇಳೆ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲದಿದ್ದರೂ ಬಿಸಿಸಿಐ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಇದೀಗ ಭಾರಿ ದಂಡಕ್ಕೆ ಗುರಿಯಾಗುವ ಸಾಧ್ಯತೆ ಇದೆ.

ಬ್ಯಾಟಿಂಗ್​ ಮಾಡಲು ಮೈದಾನಕ್ಕೆ ಆಗಮಿಸುತ್ತಿದ್ದ ವೇಳೆ ಆರ್​ ಅಶ್ವಿನ್​​ ಬಿಸಿಸಿಐ ಲೋಗೋ ಇರುವ ಹೆಲ್ಮೆಟ್​ ಹಾಕಿಕೊಂಡು ಮೈದಾನಕ್ಕೆ ಬಂದಿದ್ದು, ನಿಯಮ ಉಲ್ಲಂಘನೆ ಮಾಡಿದ್ದಾರೆ. ಈಗಾಗಲೇ ಮ್ಯಾಚ್​ ರೆಪ್ರಿ ಚಿನ್ಮಯಾ ಶರ್ಮಾ ಅವರಿಗೆ ದಂಡ ವಿಧಿಸಿದ್ದು, ಇದೀಗ ಭಾರತೀಯ ಕ್ರಿಕೆಟ್​ ಮಂಡಳಿ ಅವರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ದೇಶೀಯ ಕ್ರಿಕೆಟ್​ಗಳಲ್ಲಿ ಯಾವುದೇ ಐಸಿಸಿ ಉಪಯೋಗಿತ ವಸ್ತು ಅಥವಾ ಲೋಗೋ ಬಳಕೆ ಮಾಡುವಂತಿಲ್ಲ ಎಂಬ ರೂಲ್ಸ್​ ಇದೆ. ಆದರೆ, ಇದೀಗ ಅಶ್ವಿನ್​ ಆ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಅವರಿಗೆ ದಂಡ ಹಾಕುವ ಸಾಧ್ಯತೆ ಇದೆ.

ABOUT THE AUTHOR

...view details