ಚೆನ್ನೈ: ಟೆಸ್ಟ್ ಕ್ರಿಕೆಟ್ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಶ್ರೀಲಂಕಾದ ಕುಮಾರ ಸಂಗಕ್ಕಾರ ಆಫ್ ಸ್ಪಿನ್ ಬೌಲರ್ಗಳ ವಿರುದ್ಧ ಅದ್ಭುತ ದಾಖಲೆ ಹೊಂದಿದ್ದರು. ಆದರೆ ಅಂಥ ಮಹಾನ್ ಬ್ಯಾಟ್ಸ್ಮನ್ನನ್ನು 23 ಎಸೆತಗಳಲ್ಲಿ 4 ಬಾರಿ ಔಟ್ ಮಾಡಿದ ಪ್ರಸಂಗವನ್ನು ಟೀಮ್ ಇಂಡಿಯಾ ಸ್ಪಿನ್ನರ್ ಆರ್. ಅಶ್ವಿನ್ ನೆನಪಿಸಿಕೊಂಡಿದ್ದಾರೆ.
ಸಂಗಕ್ಕಾರ ತಮ್ಮ ವೃತ್ತಿ ಜೀವನದಲ್ಲಿ ಹರ್ಭಜನ್ ಸಿಂಗ್, ಸಾಯಿದ್ ಅಜ್ಮಲ್ ಮತ್ತು ನಥನ್ ಲಿಯೋನ್ರಂತಹ ಮಹಾನ್ ಸ್ಪಿನ್ನರ್ಗಳ ವಿರುದ್ಧ ಅದ್ಭುತ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಸಂಗಕ್ಕಾರ, ಹರ್ಭಜನ್ ಸಿಂಗ್ ವಿರುದ್ಧ ಅವರು 99.33 ಸರಾಸರಿ ಹೊಂದಿದ್ದಾರೆ. ಹಾಗೆಯೇ ಅಜ್ಮಲ್ ವಿರುದ್ಧ 132.75 ಹಾಗೂ ಲಿಯಾನ್ ವಿರುದ್ಧ 61 ಸರಾಸರಿ ಹೊಂದಿದ್ದಾರೆ. ಆದರೆ 2015ರ ಸರಣಿಯಲ್ಲಿ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿರುದ್ಧ ಮಾತ್ರ ರನ್ಗಳಿಸಲು ಪರದಾಡಿದ್ದರು. ಅವರು ಆ ಸರಣಿಯಲ್ಲಿ ಅಶ್ವಿನ್ರ 23 ಎಸೆತಗಳನ್ನು ಎದುರಿಸಿ 4 ಬಾರಿ ಔಟ್ ಆಗಿದ್ದರು.
ಪಾಕಿಸ್ತಾನದ ಪತ್ರಕರ್ತ ಮಜರ್ ಅರ್ಶದ್ ಜೊತೆಗಿನ ಸಂವಾದದಲ್ಲಿ ಆರ್.ಅಶ್ವಿನ್ ಸಾಕಷ್ಟು ವಿಚಾರಗಳನ್ನು ವಿವರಿಸುತ್ತಾ ಹೋದರು.
ಮುರಳಿ ಮತ್ತು ಅಜ್ಮಲ್ ವಿಭಿನ್ನ ರೀತಿಯ ಬೌಲರ್ಗಳು. ಅವರು ಹೆಚ್ಚು ದೂಸ್ರ ಮತ್ತು ಲೆಗ್ಬ್ರೇಕ್ಗಳನ್ನು ಹಾಕುತ್ತಿದ್ದರು.ಇದು ಸಾಂಪ್ರದಾಯಕ ಸ್ಪಿನ್ನರ್ಗಳಿಗಿಂತ ತುಂಬಾ ಭಿನ್ನವಾಗಿರುತ್ತಿತ್ತು. ಕೆಲವು ಬ್ಯಾಟ್ಸ್ಮನ್ಗಳು ಇವರ ಎಸೆತಗಳನ್ನು ಎದುರಿಸಲು ಸಾಧ್ಯವಾಗುತ್ತಿರಲಿಲ್ಲ. ನೈರನ್ ಕೂಡ ಅವರಿಗೆ ಹೋಲುತ್ತಾರೆ. ಅವರು ಗಾಳಿಯಲ್ಲಿ ಚೆಂಡನ್ನು ಯಾಮಾರಿಸುವ ಬದಲು ಕೈಯಿಂದ ಚೆಂಡನ್ನು ತಿರುಗಿಸಿ ಬ್ಯಾಟ್ಸ್ಮನ್ಗಳನ್ನು ಯಾಮಾರಿಸಲು ಪ್ರಯತ್ನಿಸುತ್ತಿದ್ದರು. ಆದರೆ ವೀರೇಂದ್ರ ಸೆಹ್ವಾಗ್ ಅಂತಹ ಬ್ಯಾಟ್ಸ್ಮನ್ ಮುರಳೀಧರನ್ ವಿರುದ್ಧ ಅದ್ಭುತವಾಗಿ ಆಡುತ್ತಿದ್ದರು ಎಂದು ಅಶ್ವಿನ್ ಹೇಳಿದ್ದಾರೆ.
2015ರ ಟೆಸ್ಟ್ ಸರಣಿ ಬಗ್ಗೆ ಮಾತನಾಡಿದ ಅವರು, ನಾನು ತುಂಬಾ ಅದೃಷ್ಟವಂತ. ಏಕೆಂದರೆ, ಆ ವೇಳೆ ನನ್ನ ಕರಿಯರ್ ಸ್ಥಿರವಾಗಿ ಸಾಗುತ್ತಿತ್ತು. ಅಂದು ನಡೆದಿದ್ದೆಲ್ಲಾ ಒಂದು ಕನಸಿನ ಹಾಗೆ ಕಾಣುತ್ತಿತ್ತು. ಆ ಸರಣಿಯಲ್ಲಿ ಉತ್ತಮ ಎಸೆತಗಳನ್ನು ಎಸೆದಿದ್ದೆ. ಎಡಗೈ ಬ್ಯಾಟ್ಸ್ಮನ್ಗಳಿಗೆ ಬೌಲಿಂಗ್ ಮಾಡುವುದು ನನ್ನ ಕನಸಾಗಿತ್ತು. ಅದರಲ್ಲೂ ಶ್ರೀಲಂಕಾದಲ್ಲಿ ಬೌಲಿಂಗ್ ಮಾಡುವುದು ನನಗಿಷ್ಟ. ಏಕೆಂದರೆ ಅಲ್ಲಿ ಸ್ಪಿನ್ ಬೌಲಿಂಗ್ಗೆ ನರವಾಗುವ ಪಿಚ್ ಹೆಚ್ಚಿಲ್ಲವಾದರೂ ಬೌನ್ಸ್ ಆಗುವುದರಿಂದ ಅನುಕೂಲವಾಗುತ್ತದೆ. ಆದ್ದರಿಂದಲೇ ನನ್ನ ಕರಿಯರ್ನಲ್ಲಿ ಶ್ರೀಲಂಕಾದಲ್ಲಿ ಮಾಡಿದ ಬೌಲಿಂಗ್ ಅನ್ನು ಆನಂದಿಸಿದ್ದೇನೆ. ಆ ಸಮಯದಲ್ಲೇ ಸಂಗಕ್ಕಾರ ಅವರನ್ನು ಬಹಳ ಕಾಡಿದ್ದೆ ಎಂದು ಅವರು ಹೇಳಿದ್ದಾರೆ.