ಸಿಡ್ನಿ:ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ಪಂದ್ಯದ ವೇಳೆ ಸ್ಲೆಡ್ಜಿಂಗ್, ಜನಾಂಗೀಯ ನಿಂದನೆ ಸೇರಿ ಅನೇಕ ನಾಟಕೀಯ ಬೆಳವಣಿಗೆ ನಡೆದಿವೆ.
ಪೂಜಾರಾ-ರಹಾನೆ ವಿಕೆಟ್ ಬೀಳುತ್ತಿದ್ದಂತೆ ಕ್ರೀಸಿನಲ್ಲಿ ಒಂದಾದ ಹನುಮ ವಿಹಾರಿ ಹಾಗೂ ಆರ್.ಅಶ್ವಿನ್ ಟೀಂ ಇಂಡಿಯಾ ತಂಡವನ್ನ ಸೋಲಿನ ಸುಳಿಯಿಂದ ಪಾರು ಮಾಡಿದ್ದಾರೆ. ಈ ವೇಳೆ ಅಶ್ವಿನ್ಗೆ ಆಸ್ಟ್ರೇಲಿಯಾ ಕ್ಯಾಪ್ಟನ್ ಟಿಮ್ ಪೇನ್ಗೆ ಸ್ಥಳದಲ್ಲೇ ತಿರುಗೇಟು ನೀಡಿದ್ದಾರೆ.
ಓದಿ: ಚಲಿಸುತ್ತಿದ್ದ ಖಾಸಗಿ ಬಸ್ನಲ್ಲೇ 24 ವರ್ಷದ ಯುವತಿ ಮೇಲೆ ರೇಪ್!
ಅಶ್ವಿನ್ ಬ್ಯಾಟಿಂಗ್ ಮಾಡ್ತಿದ್ದ ವೇಳೆ ನಿಮ್ಮನ್ನು ಗಬ್ಬಾ ಮೈದಾನಕ್ಕೆ ಕರೆದೊಯ್ಯಲು ಕಾಯಲು ಸಾಧ್ಯವಿಲ್ಲ ಎಂದು ಪೈನ್ ಹೇಳಿದ್ದಾರೆ. ಇದಕ್ಕೆ ತಕ್ಷಣವೇ ಪ್ರತ್ಯುತ್ತರ ನೀಡಿ, ನಿಮ್ಮನ್ನು ಭಾರತಕ್ಕೆ ಕರೆದೊಯ್ಯಲು ಬಯಸುತ್ತೇವೆ. ಅದು ನಿಮ್ಮ ಕೊನೆಯ ಸರಣಿಯಾಗಬಹುದು ಎಂದಿದ್ದಾರೆ. ಮೈದಾನದಲ್ಲಿ ಇಬ್ಬರು ಪ್ಲೇಯರ್ಸ್ಗಳ ನಡುವೆ ನಡೆದ ವಾಗ್ವಾದ ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ 259 ಬಾಲ್ ಎದುರಿಸಿ ಅಶ್ವಿನ್-ವಿಹಾರಿ ಜೋಡಿ 62ರನ್ ಕಲೆ ಹಾಕಿ ಟೀಂ ಇಂಡಿಯಾ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದೆ.