ನವದೆಹಲಿ:ರವಿಚಂದ್ರನ್ ಅಶ್ವಿನ್ ಅನುಭವ ಮತ್ತು ಮನಸ್ಥಿತಿ ನೋಡಿದರೆ ಅವರು ಭಾರತೀಯ ತಂಡದ ಬೌಲಿಂಗ್ ವಿಭಾಗದ ನಾಯಕ ಇದ್ದಂತೆ ಎಂದು ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅಭಿಪ್ರಾಯಪಟ್ಟಿದ್ದಾರೆ.
ಆರ್. ಅಶ್ವಿನ್ ಪ್ರಸ್ತುತ ಭಾರತೀಯ ತಂಡದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದುಕೊಂಡಿರುವ ಬೌಲರ್ ಆಗಿದ್ದು, ಇಲ್ಲಿಯವರೆಗೆ 375 ವಿಕೆಟ್ ಕಬಳಿಸಿದ್ದಾರೆ. ಮೆಲ್ಬೋರ್ನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವಲ್ಲಿ ಆರ್.ಅಶ್ವಿನ್ ಮಹತ್ವದ ಪಾತ್ರ ವಹಿಸಿದ್ದರು.
ಮೈದಾನದಲ್ಲಿ ಏನು ಮಾಡಬೇಕೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಈ ಹಿಂದೆ ಕೂಡ ಅವರು ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಆಡಿದ್ದಾರೆ. ಹೀಗಾಗಿ ಮೇಲಿಂದ ಮೇಲೆ ಅವರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಈಗಾಗಲೇ ಮುಕ್ತಾಯಗೊಂಡಿರುವ ಎರಡು ಟೆಸ್ಟ್ ಪಂದ್ಯಗಳಿಂದ ಅಶ್ವಿನ್ 10 ವಿಕೆಟ್ ಪಡೆದುಕೊಂಡಿದ್ದಾರೆ. ಜತೆಗೆ ಸ್ಟೀವ್ ಸ್ಮಿತ್ ಅವರನ್ನು ಎರಡು ಸಲ ಔಟ್ ಮಾಡಿದ್ದಾರೆ. ಸುಮಾರು 375 ವಿಕೆಟ್ ಪಡೆದ ಆಟಗಾರ ಉತ್ತಮ ತಂತ್ರಗಾರನಾಗಿರುತ್ತಾನೆ. ಖಂಡಿತವಾಗಿ ಅಶ್ವಿನ್ ಬೌಲಿಂಗ್ ವಿಭಾಗದ ನಾಯಕನಾಗಿದ್ದಾರೆ ಎಂದು ಓಜಾ ತಿಳಿಸಿದ್ದಾರೆ.