ಕರ್ನಾಟಕ

karnataka

ETV Bharat / sports

ಬೇರೆ ರಾಜ್ಯದ ಪರ ಆಡಲು ದಿಂಡಾಗೆ ಬೆಂಗಾಲ್‌ ಕ್ರಿಕೆಟ್‌ ಅಸೋಸಿಯೇಷನ್‌ ಒಪ್ಪಿಗೆ - 2019-20 Ranji Trophy​

ಕ್ರಿಕೆಟಿಗ ಅಶೋಕ್​ ದಿಂಡಾ ಭಾರತ ತಂಡದ ಪರ 13 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಪಂದ್ಯಗಳಲ್ಲಿ ಒಟ್ಟು 29 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನ 116 ಪಂದ್ಯಗಳಲ್ಲಿ 420 ವಿಕೆಟ್ ಸಾಧನೆ ಮಾಡಿದ್ದಾರೆ.

ಅಶೋಕ್​ ದಿಂಡಾ
ಅಶೋಕ್​ ದಿಂಡಾ

By

Published : Aug 27, 2020, 3:51 PM IST

ಕೋಲ್ಕತ್ತಾ: ಬೆಂಗಾಲ್​ ತಂಡದ ಅನುಭವಿ ವೇಗಿ ಅಶೋಕ್ ದಿಂಡಾ ಬೇರೆ ರಾಜ್ಯದ ಪರ ಆಡಲು ಬೆಂಗಾಲ್​ ಕ್ರಿಕೆಟ್​ ಅಸೋಸಿಯೇಷನ್​ನಿಂದ ನಿರಾಪೇಕ್ಷಣ ಪತ್ರ ಪಡೆದಿದ್ದಾರೆ.

2019-20ರ ರಣಜಿ ಆವೃತ್ತಿಯಲ್ಲಿ ಆಂಧ್ರಪ್ರದೇಶದ ವಿರುದ್ಧದ ಪಂದ್ಯದಲ್ಲಿ ತಂಡದಿಂದ ಹೊರಗಿಟ್ಟ ಕಾರಣಕ್ಕೆ ಆಡಳಿತ ಮಂಡಳಿಯೊಂದಿಗೆ ಇವರು ಗಲಾಟೆ ಮಾಡಿಕೊಂಡಿದ್ದರು. ಅಲ್ಲದೆ ನಾಯಕ ಅಭಿಮನ್ಯು ಈಶ್ವರನ್​ ಹಾಗೂ ಬೌಲಿಂಗ್ ಕೋಚ್​ ರಣದೇಬ್​ ಬೋಸ್​ ಅವರು ಪ್ರತ್ಯೇಕ ಮಾತುಕತೆ ನಡೆಸುತ್ತಿದ್ದದ್ದನ್ನು ಕಂಡು ದಿಂಡಾ ಕೆಂಡಾಮಂಡಲವಾಗಿದ್ದರು. ಜೊತೆಗೆ, ಕೋಚ್​ ನಿಂದನೆ ಮಾಡಿದ್ದ ಆರೋಪವೂ ಇವರ ಮೇಲಿತ್ತು. ಈ ಬೆಳವಣಿಗೆಯ ಬಳಿಕ ಕ್ಷಮೆ ಕೇಳಲು ಹಿಂದೇಟು ಹಾಕಿದ್ದರಿಂದ ಶಿಸ್ತು ಕ್ರಮ ಜರುಗಿಸಿ ಅವರನ್ನು ತಂಡದಿಂದ ಹೊರ ಹಾಕಲಾಗಿತ್ತು.

2020ರ ರಣಜಿಯಲ್ಲಿ ಬೆಂಗಾಲ್​ ಪರ ಆಡುವುದಿಲ್ಲ ಎಂದು ಮೊದಲೇ ದಿಂಡಾ ಘೋಷಿಸಿದ್ದರು. ಇದೀಗ ಇವರ ಮನವಿಗೆ ಸ್ಪಂದಿಸಿರುವ ಕ್ರಿಕೆಟ್​ ಆಸೋಸಿಯೇಷನ್​ ನಿರಾಪೇಕ್ಷಣ ಪತ್ರ ನೀಡಿದ್ದು, 2020-21ರ ರಣಜಿ ಆವೃತ್ತಿಯಲ್ಲಿ ಯಾವುದೇ ತಂಡದ ಪರ ಆಡಲು ನಾವು ಸಮ್ಮತಿಸುತ್ತೇವೆ ಎಂದು ತಿಳಿಸಿದೆ. ಬೆಂಗಾಲ್​ ಕ್ರಿಕೆಟ್​ಗೆ ನೀಡಿದ ಸೇವೆಯನ್ನು ಗೌರವಿಸುತ್ತೇವೆ ಎಂದೂ ಪತ್ರದಲ್ಲಿ ತಿಳಿಸಿದೆ.

ABOUT THE AUTHOR

...view details