ಕರ್ನಾಟಕ

karnataka

ETV Bharat / sports

ಟೆಸ್ಟ್ ಸರಣಿಗೆ ಆರಂಭಿಕ ಆಟಗಾರರ ಆಯ್ಕೆ ಕಗ್ಗಂಟು: ಮಯಾಂಕ್, ರಾಹುಲ್​ಗೆ ನೆಹ್ರಾ ಮಣೆ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆರಂಭಿಕ ಆಟಗಾರರ ಆಯ್ಕೆ ಕುರಿತು ಮಾತನಾಡಿರುವ ಟೀಂ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ, ಕನ್ನಡಿಗರಿಗೆ ಮಣೆ ಹಾಕಿದ್ದಾರೆ.

Ashish Nehra picks India's opening combination
ಆಶಿಶ್ ನೆಹ್ರಾ

By

Published : Dec 13, 2020, 9:23 PM IST

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಬಹುನಿರೀಕ್ಷಿತ ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಡಿಸೆಂಬರ್ 17 ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿದ್ದು, ಸರಣಿಯಲ್ಲಿ ಆರಂಭಿಕ ಆಟಗಾರರ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ನಾಲ್ಕು ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶುಬ್ಮನ್ ಗಿಲ್, ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್ ಮತ್ತು ಕೆ.ಎಲ್ ರಾಹುಲ್ ಆಸೀಸ್ ಪ್ರವಾಸದಲ್ಲಿದ್ದು, ಕಡೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಕೂಡ ತಂಡ ಸೇರಿಕೊಳ್ಳಲಿದ್ದಾರೆ.

ಆರಂಭಿಕ ಆಟಗಾರರ ಆಯ್ಕೆ ಕುರಿತು ಮಾತನಾಡಿರುವ ಟೀಂ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ, ಕನ್ನಡಿಗರಿಗೆ ಮಣೆ ಹಾಕಿದ್ದಾರೆ. ಮಯಾಂಕ್ ಅಗರ್ವಾಲ್ ಜೊತೆ ಕೆ.ಎಲ್.ರಾಹುಲ್ ಆರಂಭಿಕನಾಗಿ ಕಣಕ್ಕಿಳಿದರೆ ಟೀಂ ಇಂಡಿಯಾಕ್ಕೆ ವರವಾಗಲಿದೆ ಎಂದಿದ್ದಾರೆ.

ಕೆ.ಎಲ್.ರಾಹುಲ್

"ಮಯಾಂಕ್ ಅಗರ್ವಾಲ್ ಅವರೊಂದಿಗೆ ಯಾರು ಇನ್ನಿಂಗ್ಸ್​ ಆರಂಭಿಸುತ್ತಾರೆ ಎಂಬ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿವೆ. ನಾನು ಅದನ್ನು ದೌರ್ಬಲ್ಯ ಎಂದು ಕರೆಯುವುದಿಲ್ಲ, ಆದರೆ ಇದು ಖಂಡಿತವಾಗಿಯೂ ಕಾಳಜಿಯಾಗಿದೆ. ಆರಂಭಿಕ ಆಟಗಾರರ ಆಯ್ಕೆಗೆ ಶುಬ್ಮನ್ ಗಿಲ್ ಅಥವಾ ಪೃಥ್ವಿ ಶಾ ಅವರನ್ನು ನೋಡಬಹುದು, ಆದರೆ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಬೇಕು ಎಂದು ನಾನು ಬಯಸುತ್ತೇನೆ. ಅವರು ಇರುವ ಫಾರ್ಮ್ ನೋಡಿದರೆ ತಂಡಕ್ಕೆ ಉತ್ತಮ ಕೊಡುಗೆ ನೀಡಬಲ್ಲರು ಎನಿಸುತ್ತದೆ" ಎಂದಿದ್ದಾರೆ.

ಮಯಾಂಕ್ ಅಗರ್ವಾಲ್

"ಮಯಾಂಕ್ ಅಗರ್ವಾಲ್ ಹಿಂದಿನ ಪ್ರವಾಸದಲ್ಲಿ ಭಾರತಕ್ಕಾಗಿ ಒಂದೆರಡು ಉಪಯುಕ್ತ ಇನ್ನಿಂಗ್ಸ್ ಆಡಿದ್ದರು. ಅವರೊಂದಿಗೆ ಕೆ.ಎಲ್.ರಾಹುಲ್ ಸಾಕಷ್ಟು ಶಕ್ತಿ ತುಂಬಬಲ್ಲರು. ಕಳೆದ ಒಂದೂವರೆ ವರ್ಷದಲ್ಲಿ ರಾಹುಲ್ ಟೆಸ್ಟ್‌ನಲ್ಲಿ ಉತ್ತಮ ರನ್ ಗಳಿಸಿಲ್ಲ. ಆದರೆ ಇದು ರಾಹುಲ್‌ಗೆ ಒಂದು ಅವಕಾಶ" ಎಂದಿದ್ದಾರೆ.

ABOUT THE AUTHOR

...view details