ಬರ್ಮಿಂಗ್ಹ್ಯಾಮ್:ಬರೋಬ್ಬರಿ ಒಂದು ವರ್ಷಗಳ ಕಾಲ ಕ್ರಿಕೆಟ್ನಿಂದ ನಿಷೇಧಕ್ಕೊಳಗಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಸ್ಟಿವ್ ಸ್ಮಿತ್ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೇ ಅದ್ಭುತ ಶತಕ ಸಿಡಿಸಿ ಮಿಂಚಿದ್ದು, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಾಖಲೆ ಬ್ರೇಕ್ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲೇ 144ರನ್ಗಳಿಕೆ ಮಾಡುವ ಮೂಲಕ ತಮ್ಮ 24ನೇ ಟೆಸ್ಟ್ ಶತಕ ಪೂರೈಕೆ ಮಾಡಿದ್ದಾರೆ. ಕೇವಲ 118 ಇನ್ನಿಂಗ್ಸ್ಗಳಲ್ಲಿ ಸ್ಮಿತ್ ಈ ಸಾಧನೆ ಮಾಡಿದ್ದು, ಅತಿ ವೇಗವಾಗಿ ಈ ದಾಖಲೆ ಬರೆದ ವಿಶ್ವದ ಎರಡನೇ ಬ್ಯಾಟ್ಸ್ಮನ್ ಆಗಿದ್ದಾರೆ. ಈ ಹಿಂದೆ ಡಾನ್ ಬ್ರಾಡ್ಮನ್ ಕೇವಲ 66 ಇನ್ನಿಂಗ್ಸ್ಗಳಲ್ಲಿ 24ನೇ ಶತಕ ಸಿಡಿಸಿದ್ದರು.