ಲಂಡನ್: ಆ್ಯಶಸ್ ಸರಣಿಯ 5ನೇ ಪಂದ್ಯದಲ್ಲಿ 135 ರನ್ಗಳ ಅಂತರದಿಂದ ಮಣಿಸಿದ ಇಂಗ್ಲೆಂಡ್ ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸುವ ಮೂಲಕ ತವರಿನಲ್ಲಿ ಸರಣಿ ಸೋಲಿನ ಮುಖಭಂಗವನ್ನು ತಪ್ಪಿಸಿಕೊಂಡಿದೆ.
ಕೆನ್ನಿಂಗ್ಟನ್ ಓವಲ್ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ 399 ರನ್ಗಳ ಗುರಿ ಪಡೆದಿದ್ದ ಆಸ್ಟ್ರೇಲಿಯಾ 263 ರನ್ಗಳಿಗೆ ಆಲೌಟ್ ಆಗುವ ಮೂಲಕ 135 ರನ್ಗಳಿಂದ ಇಂಗ್ಲೆಂಡ್ಗೆ ಶರಣಾಯಿತು. ಈ ಮೂಲಕ ಆ್ಯಶಸ್ ಸರಣಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡು ತಂಡಗಳು ಆ್ಯಶಸ್ ಸರಣಿಯನ್ನು ಹಂಚಿಕೊಂಡವು.
399 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಸ್ಟುವರ್ಟ್ ಬ್ರಾಡ್ ವಾರ್ನರ್(11), ಮಾರ್ಕಸ್ ಹ್ಯಾರೀಸ್ (9) ಹಾಗೂ ಸ್ಟಿವ್ ಸ್ಮಿತ್(23) ವಿಕೆಟ್ ಪಡೆದು ಆರಂಭಿಕ ಆಘಾತ ನೀಡಿದರು. ಜಾಕ್ ಲೀಚ್ ಲ್ಯಾಬಸ್ಚಾಗ್ನೆ ವಿಕೆಟ್ ಪಡೆದರು.
ಈ ಹಂತದಲ್ಲಿ ಮ್ಯಾಥ್ಯೂ ವೇಡ್ ಹಾಗೂ ಮಿಚೆಲ್ ಮಾರ್ಷ್ 63 ರನ್ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಬೌಲಿಂಗ್ ಮಾಡಿದ ನಾಯಕ ರೂಟ್ 24 ರನ್ಗಳಿಸಿದ್ದ ಮಿಚೆಲ್ ಮಾರ್ಷ್ ವಿಕೆಟ್ ಪಡೆದರು. ನಂತರ ಬಂದ ಟಿಮ್ ಪೇನ್(21)ರನ್ನು ಲೀಚ್ ಪೆವಿಲಿಯನ್ಗಟ್ಟಿದರು.