ಮ್ಯಾಂಚೆಸ್ಟರ್: ಅತಿಥೇಯ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ ನಾಲ್ಕನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ 185 ರನ್ಗಳ ಜಯ ಸಾಧಿಸಿದೆ.
ಕೊನೆಯ ದಿನ 383 ರನ್ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ನಾಲ್ಕನೆ ದಿನ18 ರನ್ಗಳಿಸಿ 2 ವಿಕೆಟ್ ಕಳೆದುಕೊಂಡು ಅಘಾತ ಅನುಭವಿಸಿತ್ತು. 5ನೇ ದಿನ ಡ್ರಾ ಸಾಧಿಸಲು ಶತಪ್ರಯತ್ನ ನಡೆಸಿದರಾದರೂ ಆಸೀಸ್ ಬೌಲರ್ಗಳ ಮುಂದೆ ನಿಲ್ಲಲಾರದೆ ಹೋದರು.
ಜೋಸ್ ಬಟ್ಲರ್ 111 ಎಸೆತಗಳಲ್ಲಿ 34, ಕ್ರೈಗ್ ಓವರ್ಟನ್ 105 ಎಸೆತಗಳಲ್ಲಿ 21, ಬ್ಯೈರ್ಸ್ಟೋವ್ 61 ಎಸೆತಗಳಲ್ಲಿ 25, ಜೋ ಡೆನ್ಲಿ 123 ಎಸೆತಗಳಲ್ಲಿ 53 ಹಾಗೂ ರಾಯ್ 67 ಎಸೆಗಳಲ್ಲಿ 31 ರನ್ಗಳಿಸಿ ಸೋಲು ತಪ್ಪಿಸಲು ನಡೆಸಿದ ಎಲ್ಲಾ ಪ್ರಯತ್ನವೂ ವಿಫಲವಾಯಿತು. ಕೊನೆಗೆ 91.3 ಓವರ್ಗಳಲ್ಲಿ 197ರನ್ಗಳಿಗೆ ಆಲೌಟ್ ಆಗುವ ಮೂಲಕ 185 ರನ್ಗಳಿಂದ ಸೋಲೊಪ್ಪಿಕೊಂಡಿತು.