ಕರ್ನಾಟಕ

karnataka

ETV Bharat / sports

ವಿಂಡೀಸ್​ ವಿರುದ್ಧ ಅಫ್ಘಾನ್​ ಕಳಪೆ ಪ್ರದರ್ಶನ: ವರ್ಷದಲ್ಲಿ ಮೂರು ಬಾರಿ ನಾಯಕತ್ವ ಬದಲಿದ ಎಸಿಬಿ!

ವೆಸ್ಟ್​ ಇಂಡೀಸ್​ ವಿರುದ್ಧ ಕಳಪೆ ಪ್ರದರ್ಶನ ತೋರಿದ ನಂತರ ಅಫ್ಘಾನಿಸ್ತಾನ ಕ್ರಿಕೆಟ್​ ಮಂಡಳಿ ಮತ್ತೆ ತಂಡದ ನಾಯಕತ್ವವನ್ನು ಬದಲಿಸಿ ಮಾಜಿ ನಾಯಕ ಅಸ್ಗರ್ ಅಫ್ಘನ್‌ಗೆ​ ಜವಾಬ್ದಾರಿ ಹೊರಿಸಿದೆ.

Asghar Afghan reappointed Afghanistan captain
Asghar Afghan reappointed Afghanistan captain

By

Published : Dec 11, 2019, 7:37 PM IST

ನವದೆಹಲಿ: ಅಫ್ಘಾನಿಸ್ತಾನ ಕ್ರಿಕೆಟ್​ ಮಂಡಳಿ ಒಂದೇ ವರ್ಷದಲ್ಲಿ ಮೂರು ಬಾರಿ ತಮ್ಮ ತಂಡದ ನಾಯಕತ್ವ ಬದಲಿಸಿದೆ.

ವಿಶ್ವಕಪ್​ಗೆ ಇನ್ನು ಎರಡು ತಿಂಗಳಿರುವಾಗ ಎಸಿಬಿ, 4 ವರ್ಷಗಳ ಕಾಲ ತಂಡದ ನಾಯಕರಾಗಿದ್ದ ಅಸ್ಗರ್​ ಅಫ್ಘನ್​ರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು. ಬಳಿಕ ಏಕದಿನ ತಂಡಕ್ಕೆ ಯುವ ಆಲ್​ರೌಂಡರ್​ ಗುಲ್ಬುದ್ದೀನ್​ ನೈಬ್, ಟಿ20ಗೆ ರಶೀದ್​ ಖಾನ್ ಹಾಗೂ ಟೆಸ್ಟ್​ ತಂಡಕ್ಕೆ ರಹ್ಮತ್​ ಶಾ ಅವರಿಗೆ ನಾಯಕತ್ವದ ಹೊಣೆ ನೀಡಿತ್ತು. ಇದನ್ನು ತಂಡದ ಅನುಭವಿ ಆಟಗಾರರಾದ ರಶೀದ್ ಖಾನ್​ ಹಾಗೂ ಮೊಹಮ್ಮದ್ ನಬಿ ಬಹಿರಂಗವಾಗಿ ಖಂಡಿಸಿದ್ದರು.

ಮಾಜಿ ನಾಯಕ ನೈಬ್​ ಜೊತೆ ಹಾಲಿ ನಾಯಕ ಅಸ್ಗರ್​ ಅಫ್ಘನ್​

ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ತಂಡ ತೀರಾ ಕಳಪೆ ಪ್ರದರ್ಶನ ತೋರಿದ ನಂತರ ಮೂರೂ ಮಾದರಿಯ ಕ್ರಿಕೆಟ್​ಗೆ ಯುವ ಬೌಲರ್​ ರಶೀದ್​ ಖಾನ್​ಗೆ ನಾಯಕತ್ವ ನೀಡಿತ್ತು. ಇದೀಗ ಮತ್ತೆ ವಿಂಡೀಸ್​ ವಿರುದ್ಧದ ಸರಣಿಯಲ್ಲಿ ಟಿ20 ಬಿಟ್ಟು ಉಳಿದ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದೆ. ಇದಾದ ಬಳಿಕ, ಎಸಿಬಿ ಅಧ್ಯಕ್ಷ ಫರಾನ್ ಯುಸೆಫ್ಜಯ್​ ಅವರು ಮಾಜಿ ನಾಯಕ ಅಸ್ಗರ್​ ಅವರನ್ನೇ ನಾಯಕನಾಗಿ ಮರುನೇಮಕ ಮಾಡಿದ್ದಾರೆ.

ABOUT THE AUTHOR

...view details