ನವದೆಹಲಿ :ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಲ್ಕು ಬಾರಿ ಚಾಂಪಿಯನ್ ಪಟ್ಟ ತಂಡದುಕೊಟ್ಟಿರುವ ರೋಹಿತ್ ಶರ್ಮಾ ತಮ್ಮ ತಂಡದಲ್ಲಿ ತಾವು ಕನಿಷ್ಠ ಪ್ರಮುಖ ವ್ಯಕ್ತಿ, ತಂಡದಲ್ಲಿರುವ ಬಹುತೇಕರು ಶ್ರೇಷ್ಠ ವ್ಯಕ್ತಿಗಳು ಎಂದು ಭಾವಿಸುವುದಾಗಿ ತಿಳಿಸಿದ್ದಾರೆ.
ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭಗೊಳ್ಳುತ್ತಿದೆ. ಈ ಮೂಲಕ 6 ತಿಂಗಳ ಬಳಿಕ ಕ್ರಿಕೆಟ್ಗೆ ಮರಳಲಿದೆ. ಭಾರತದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ ಬಾರಿ ಟೂರ್ನಿಯನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿರುವ ರೋಹಿತ್ ತಮ್ಮ ನಾಯಕತ್ವದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
'ನಾನು ನಾಯಕನಾಗಿ ನನ್ನದೇ ಆದ ಒಂದು ಥಿಯರಿ ನಂಬಿರುವೆ. ತಂಡದಲ್ಲಿ ನಾಯಕನಾದವನು ಕಡಿಮೆ ಪ್ರಾಮುಖ್ಯತೆ ಇರುವ ವ್ಯಕ್ತಿಯಾಗಿರುತ್ತಾನೆ. ಈ ಯೋಜನೆಯಲ್ಲಿ ಬೇರೆಯವರು ನಾಯಕನಿಗಿಂತ ಹೆಚ್ಚು ಪ್ರಾಮುಖ್ಯತೆ ಹೊಂದಿರುತ್ತಾರೆ. ಇದು ಬೇರೆ ನಾಯಕರಿಗೆ ವಿಭಿನ್ನವಾಗಿ ತೋಚಬಹುದು. ಆದರೆ, ನನಗೆ ಈ ಥಿಯರಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ' ಎಂದು ರೋಹಿತ್ ಶರ್ಮಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.