ಕರ್ನಾಟಕ

karnataka

ETV Bharat / sports

ಕ್ರಿಕೆಟ್​ನಿಂದ ದೂರ ಉಳಿಯಲು ನಿರ್ಧರಿಸಿದ ಭಾರತದ ಶ್ರೀಮಂತ ಉದ್ಯಮಿಯ ಮಗ! - ಆರ್ಯಮನ್ ಬಿರ್ಲಾ ಕ್ರಿಕೆಟರ್​

ಆರ್ಯಮನ್​ ಬಿರ್ಲಾ ಮಧ್ಯಪ್ರದೇಶದ ರಣಜಿ ತಂಡದ ಪರ 9 ರಣಜಿ ಪಂದ್ಯಗಳನ್ನಾಡಿದ್ದ ಶ್ರೀಮಂತ ಉದ್ಯಮಿ ಕುಮಾರ ಮಂಗಲಂ ಬಿರ್ಲಾರ ಮಗ ಆರ್ಯಮನ್​ ಬಿರ್ಲಾ ಕ್ರಿಕೆಟ್​ನಿಂದ ಅನಿರ್ಧಿಷ್ಠಾವಧಿಗೆ ದೂರ ಉಳಿಯಲು ನಿರ್ಧರಿಸಿದ್ದಾರೆ.

Aryaman Birla take a  break from cricket
Aryaman Birla take a break from cricket

By

Published : Dec 21, 2019, 3:24 PM IST

Updated : Dec 21, 2019, 7:25 PM IST

ಮುಂಬೈ: ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ ಮಂಗಲಂ ಅವರ ಮಗ ಆರ್ಯಮನ್ ಬಿರ್ಲಾ ಅನಿರ್ಧಿಷ್ಠಾವಧಿಗೆ ಕ್ರಿಕೆಟ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಸಾವಿರಾರು ಕೋಟಿ ರೂ ಮೌಲ್ಯದ ಆಸ್ತಿಯಿದ್ದರೂ ತನ್ನ ಕಾಲ ಮೇಲೆ ನಿಲ್ಲಲು ಕ್ರಿಕೆಟ್​ ಆಯ್ದುಕೊಂಡಿದ್ದ ಆರ್ಯಮನ್​ ಬಿರ್ಲಾ 2017ರ ರಣಜಿ ಕ್ರಿಕೆಟ್​ ತಂಡ ಹಾಗೂ ಐಪಿಎಲ್​ ತಂಡಕ್ಕೆ ಆಯ್ಕೆಯಾಗಿ ದೇಶದಲ್ಲೇ ಭಾರಿ ಸುದ್ದಿಯಾಗಿದ್ದರು. ಕ್ರಿಕೆಟ್​ಗಾಗಿ ಕೋಟ್ಯಾಂತರ ರೂಪಾಯಿಯ ಮೌಲ್ಯದ ಬಿಸ್ನೆಸ್ ​ಬಿಟ್ಟುಬಂದಿದ್ದ ಅವರಿಗೆ ಇದೀಗ ಮಾನಸಿಕ ಒತ್ತಡ ಹೆಚ್ಚಾಗಿದ್ದು ಕ್ರಿಕೆಟ್​ನಿಂದ ಬ್ರೇಕ್‌ ಪಡೆಯಲು ನಿರ್ಧರಿಸಿದ್ದಾರೆ.

ನನ್ನ ಮಾನಸಿಕ ಆರೋಗ್ಯದ ದೃಷ್ಠಿಯಿಂದ ಕೆಲವು ದಿನಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ವಿಶ್ರಾಂತಿ ಬಳಿಕ ಹೊಸ ಹುಮ್ಮಸ್ಸಿನಿಂದ ಕ್ರಿಕೆಟ್​​ಗೆ ಮರಳುತ್ತೇನೆ ಎಂಬ ಆತ್ಮವಿಶ್ವಾಸ ನನಗಿದೆ ಎಂದು ಆರ್ಯಮನ್​ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ವಿಶ್ರಾಂತಿ ಪಡೆಯುವ ವಿಚಾರವನ್ನು ತಿಳಿಸಿದ್ದಾರೆ.

ಆರ್ಯಮನ್​ ಬಿರ್ಲಾ ಮಧ್ಯಪ್ರದೇಶದ ರಣಜಿ ತಂಡದ ಪರ 9 ರಣಜಿ ಪಂದ್ಯಗಳನ್ನಾಡಿದ್ದಾರೆ. ಅವರ ವೈಯಕ್ತಿಕ ಗರಿಷ್ಠ ರನ್​ 103 ರನ್ ಆಗಿದೆ.

ಎರಡು ತಿಂಗಳ ಹಿಂದೆ ಆಸ್ಟ್ರೇಲಿಯಾದ ಮ್ಯಾಕ್ಸ್​ವೆಲ್​ ಕೂಡ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಕ್ರಿಕೆಟ್​ನಿಂದ ಅನಿರ್ಧಿಷ್ಟಾವಧಿ ಕಾಲಾವಧಿಗೆ ವಿಶ್ರಾಂತಿ ತೆಗೆದುಕೊಂಡಿದ್ದರು. ನಂತರ ಕ್ರಿಕೆಟ್​ಗೆ ಮರಳಿದ ಅವರು ಬಿಗ್​ಬ್ಯಾಶ್​ನ ಮೊದಲ ಪಂದ್ಯದಲ್ಲೇ ಅಬ್ಬರಿಸಿ ಉತ್ತಮವಾಗಿ ಕಮ್​ಬ್ಯಾಕ್ ಮಾಡಿದ್ದರು.

Last Updated : Dec 21, 2019, 7:25 PM IST

ABOUT THE AUTHOR

...view details