ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾ ವೇಗಿ ಮೊಹಮ್ಮದ್​ ಶಮಿ ವಿರುದ್ಧ ಅರೆಸ್ಟ್​​ ವಾರಂಟ್ ಜಾರಿ! - ಮೊಹಮ್ಮದ್​ ಶಮಿ ವಿರುದ್ಧ ಅರೆಸ್ಟ್​​ ವಾರಂಟ್

ಪಶ್ಚಿಮ ಬಂಗಾಳ ಕೋರ್ಟ್​ ಶಮಿ ಮತ್ತು ಅವರ ಸಹೋದರನ ವಿರುದ್ಧ ಅರೆಸ್ಟ್​ ವಾರಂಟ್ ಜಾರಿಮಾಡಿದ್ದು, ಶರಣಾಗಲು 15 ದಿನಗಳ ಕಾಲಾವಾಕಾಶ ನೀಡಿದೆ.

ಮಹಮ್ಮದ್​ ಶಮಿ

By

Published : Sep 2, 2019, 9:04 PM IST

ಕೋಲ್ಕತ್ತಾ: ಟೀಂ ಇಂಡಿಯಾ ವೇಗಿ ಮಹಮ್ಮದ್​ ಶಮಿ ವಿರುದ್ಧ ಪಶ್ಚಿಮ ಬಂಗಾಳ ನ್ಯಾಯಾಲಯ ಅರೆಸ್ಟ್​ ವಾರಂಟ್​ ಜಾರಿ ಮಾಡಿದೆ.

ಶಮಿ ಪತ್ನಿ ಹಸೀನ್​ ಜಹಾನ್,​ ಶಮಿ ಮತ್ತು ಆತನ ಸಹೋದರನ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿದಂತೆ ಅನೇಕ ಆರೋಪಗಳನ್ನು ಹೊರಿಸಿ ದೂರು ದಾಖಲು ಮಾಡಿದ್ದರು. ಪ್ರಕರಣ ಸಂಬಂಧ ಕೋರ್ಟ್​ಗೆ ಹಾಜರಾಗದ ಶಮಿ ಮತ್ತು ಅವರ ಸಹೋದರನ ವಿರುದ್ಧ ಅರೆಸ್ಟ್​ ವಾರಂಟ್ ಜಾರಿಮಾಡಿದ್ದು, ಶರಣಾಗಲು 15 ದಿನಗಳ ಕಾಲಾವಕಾಶ ನೀಡಿದೆ.

ಈ ಹಿಂದೆ ಶಮಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದ ಹಸೀನ್​ ಜಹಾನ್ ಸಾಮಾಜಿಕ ಜಾಲತಾಣದಲ್ಲಿ ಶಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸದ್ಯ ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಆಡುತ್ತಿರುವ ಶಮಿ, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ABOUT THE AUTHOR

...view details