ಮುಂಬೈ: ಭಾರತ ಕ್ರಿಕೆಟ್ ತಂಡದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಭವಿಷ್ಯದಲ್ಲಿ ಭಾರತ ತಂಡದ ಭಾಗವಾಗಲಿದ್ದಾರೆ ಎಂದು ವೇಗಿ ಶ್ರೀಶಾಂತ್ ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ವಾರ ಸಚಿನ್ ತೆಂಡೂಲ್ಕರ್ 47 ನೇ ವಸಂತಕ್ಕೆ ಕಾಲಿಟ್ಟ ವೇಳೆ ಶ್ರೀಶಾಂತ್ ಹುಟ್ಟು ಹಬ್ಬದ ಶುಭಾಶಯ ಕೋರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಚಿನ್ ಶ್ರೀಶಾಂತ್ಗೆ ಧನ್ಯವಾದ ತಿಳಿಸಿ ಕೊರೊನಾ ಲಾಕ್ಡೌನ್ ಇರುವುದರಿಂದ ಕುಟುಂಬಂದ ಸಧಸ್ಯರೆಲ್ಲರೂ ಮನೆಯಲ್ಲೆ ಆರೋಗ್ಯದಿಂದಿರಿ ಎಂದು ಟ್ವೀಟ್ ಮಾಡಿದ್ದರು.
ಸಚಿನ್ ಟ್ವೀಟ್ಗೆ ಮತ್ತೆ ಪ್ರತಿಕ್ರಿಯಿಸಿರುವ ಶ್ರೀಶಾಂತ್ " ಧನ್ಯವಾದಗಳು ಸಚಿನ್ ಪಾಜಿ, ಈ ದಿನವನ್ನು ನೀವು ನನ್ನದಾಗಿಸಿದ್ದೀರಾ, ಇದನ್ನು ನಿಮ್ಮಿಂದ ಕೇಳಲು ಅದ್ಭುತವೆನಿಸುತ್ತಿದೆ. ನೀವೆಲ್ಲರೂ ಕೂಡ ಪ್ರೀತಿ ಮತ್ತು ಗೌರವದಿಂದ ಮನೆಯಲ್ಲಿರಿ. ಹಾಗೂ ಅರ್ಜುನ್ ನನ್ನು ನೋಡಲು ಹೆಮ್ಮೆಯನ್ನಿಸುತ್ತಿದೆ. ಅವನು ಉತ್ತಮ ಬೌಲಿಂಗ್ ಆ್ಯಕ್ಷನ್ ಹಾಗೂ ಸ್ಥಿರತೆ ಹೊಂದಿದ್ದಾನೆ. ಆತ ಖಂಡಿತ ಭಾರತ ತಂಡಕ್ಕೆ ಆಡುತ್ತಾನೆ " ಎಂದು ಟ್ವೀಟ್ ಮಾಡಿದ್ದಾರೆ.
ಅರ್ಜುನ್ ತನ್ನ ಕೊನೆಯ ಹೆಸರಿನಿಂದ ಯಾವಾಗ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡರು ಮಾಧ್ಯಮದಲ್ಲಿ ಸುದ್ದಿಯಾಗುತ್ತಾರೆ. ಆದರೆ ಇಡೀ ಕ್ರಿಕೆಟ್ ಲೋಕವೆ ಅರ್ಜುನ್ರಿಂದ ತಂದೆಯ ಪ್ರದರ್ಶನ ನೋಡಲು ಕಾದು ಕುಳಿತಿದೆ. ಈಗಾಗಲೆ ಅರ್ಜುನ್ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಪ್ರತಿಭೆ ಅನಾವರಣ ಮಾಡಿದ್ದಾರೆ.