ಮುಂಬೈ: ಭಾರತ ತಂಡದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ವಿಜಯ್ ಹಜಾರೆ ಟೂರ್ನಿಗೆ ಘೋಷಿತಗೊಂಡ ಮುಂಬೈ ತಂಡದ 15ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಮುಂಬೈ ತಂಡದಲ್ಲಿ ಸ್ಥಾನಪಡೆದ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ - ಸಚಿನ್ ತೆಂಡೂಲ್ಕರ್ ಮಗ ಅರ್ಜುನ್
ಆಗಸ್ಟ್ 22 ರಿಂದ ಆಂದ್ರಪ್ರದೇಶದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಗೆ ಮುಂಬೈ ತಂಡಕ್ಕೆ ಅರ್ಜುನ್ ತೆಂಡೂಲ್ಕರ್ ಆಯ್ಕೆಯಾಗಿದ್ದಾರೆ.
![ಮುಂಬೈ ತಂಡದಲ್ಲಿ ಸ್ಥಾನಪಡೆದ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್](https://etvbharatimages.akamaized.net/etvbharat/prod-images/768-512-4062836-878-4062836-1565115044440.jpg)
Arjun Tendulkar
ಆಗಸ್ಟ್ 22 ರಿಂದ ಆಂದ್ರಪ್ರದೇಶದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಗೆ ಮುಂಬೈ ತಂಡ ಸೇರ್ಪಡೆಗೊಂಡಿದ್ದಾರೆ. 19 ವರ್ಷದ ಅರ್ಜುನ್ ಅಂಡರ್ 19 ತಂಡ ಹಾಗೂ ಮುಂಬೈ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಂಡಿದ್ದರು. ಎಂಪಿಎಲ್ನಲ್ಲಿ 5 ಲಕ್ಷಕ್ಕೆ ಬಿಕರಿಯಾಗಿದ್ದ ಅರ್ಜುನ್ ಆಲ್ರೌಂಡರ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.
ಎಡಗೈ ವೇಗದ ಬೌಲರ್ ಆಗಿರುವ ಅರ್ಜುನ್ ಇದೀಗ 50 ಓವರ್ಗಳ ಪಂದ್ಯಕ್ಕೆ ಮುಂಬೈ ಪರ ಪದಾರ್ಪಣೆ ಮಾಡಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಹಾರ್ದಿಕ್ ತಾಮೋರ್ ನೇತೃತ್ವವಹಿಸಲಿದ್ದಾರೆ.