ಕರ್ನಾಟಕ

karnataka

ETV Bharat / sports

ಅರ್ಜುನ್ ತೆಂಡೂಲ್ಕರ್: ಐಪಿಎಲ್​ಗೂ​ ಪ್ರವೇಶಿಸಿತೇ ನೆಪೋಟಿಸಮ್​? - ಮುಂಬೈ ಇಂಡಿಯನ್ಸ್​ಗೆ ಅರ್ಜುನ್ ತೆಂಡೂಲ್ಕರ್

ಕ್ರಿಕೆಟ್​ ಜಗತ್ತಿನಲ್ಲಿ ಲೆಜೆಂಡರಿ ಕ್ರಿಕೆಟಿಗರ ಮಕ್ಕಳು ಅತಿಯಾದ ನಿರೀಕ್ಷೆ ಮತ್ತು ಕಟುವಾದ ಟೀಕೆಗೆ ಗುರಿಯಾಗುತ್ತಿರುವುದು ಇದೇ ಮೊದಲೇನಲ್ಲ. ಸುನಿಲ್ ಗವಾಸ್ಕರ್ ಮಗ ರೋಹನ್ ಗವಾಸ್ಕರ್ ಮತ್ತು ರೋಜರ್​ ಬಿನ್ನಿ ಅವರ ಮಗ ಸ್ಟುವರ್ಟ್​ ಬಿನ್ನಿ ಕೂಡ ಇದೇ ತೆರನಾದ ಪರಿಸ್ಥಿತಿಯನ್ನು ಎದುರಿಸಿದ್ದರು. ಅವರು ದೇಶೀಯ ಕ್ರಿಕೆಟ್​ ಸರಣಿ ಮೂಲಕ ಭಾರತ ತಂಡಕ್ಕೆ ಸೇರ್ಪಡೆಯಾದರು. ಆದರೆ, ಅವರಿಬ್ಬರಿಗೂ ತಮ್ಮ ತಂದೆಯಂತೆ ಅಂತಾರಾಷ್ಟ್ರೀಯ ಮಟ್ಟವನ್ನು ತಲುಪಲು ಸಾಧ್ಯವಾಗಲಿಲ್ಲ.

ಅರ್ಜುನ್ ತೆಂಡೂಲ್ಕರ್​
ಅರ್ಜುನ್ ತೆಂಡೂಲ್ಕರ್​

By

Published : Feb 20, 2021, 1:49 PM IST

ಹೈದರಾಬಾದ್​: ಐಪಿಎಲ್​ ಹರಾಜಿನಲ್ಲಿ ಕೋಟಿಗಟ್ಟಲೆ ಹಣ ಹರಿದಾಡುತ್ತಿದೆ. ಆಶ್ಚರ್ಯಕರ ರೀತಿಯಲ್ಲಿ ಕೆಲವು ಆಟಗಾರರು ಕೋಟಿ ಕೋಟಿ ಬಾಚಿಕೊಂಡಿದ್ದಾರೆ. ಆದರೆ, 2021ರ ಐಪಿಎಲ್ ಮಿನಿ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್​ ಪರ ಸೇರುತ್ತಿದ್ದಂತೆ ನೆಟಿಜನ್ಸ್​ ಅವರ ಅರ್ಹತೆ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ.

ಇದು ಕೋಟಿಗಟ್ಟಲೆ ಬಾಚಿಕೊಂಡ ಆಟಗಾರರಿಗಿಂತ ಇಂದು ಸಾಮಾಜಿಕ ಜಾಲಾತಾಣದಲ್ಲಿ ಚರ್ಚೆಯಾಗುವುದಕ್ಕಿಂತ ಅರ್ಜುನ್​ ತೆಂಡೂಲ್ಕರ್​ ಅವರನ್ನು ಮುಂಬೈ ತಂಡ ಖರೀದಿಸಿರುವುದೇ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಇದನ್ನು ಗಮನಿಸಿದರೆ, ಪ್ರಸಿದ್ಧ ಕವಿ ಷೇಕ್ಸ್​ಪಿಯರ್​ ಹೇಳಿರುವಂತೆ 'ಆ ಹೆಸರಿನಲ್ಲಿ ಏನಿದೇ?​ ಎಂಬ ವಾಕ್ಯ ನೆನಪಿಗೆ ಬರುತ್ತಿದೆ. ನೀವೊಬ್ಬ ಭಾರತೀಯ ಕ್ರಿಕೆಟ್ ದಂತಕತೆ ಎಂದೇ ಹೆಸರಾದ ಸಚಿನ್​ ತೆಂಡೂಲ್ಕರ್​ ಅವರ ಮಗನಾಗಿದ್ದರೆ, ಖಂಡಿತ ನೀವು ಏನೇ ಸಾಧನೆ ಮಾಡದಿದ್ದರೂ ಕ್ರಿಕೆಟ್ ಲೋಕದಲ್ಲಿ ಗಮನ ಸೆಳೆಯುವ ಪ್ರವೃತ್ತಿ ಹೊಂದಿರುತ್ತೀರಿ.

ಅಪ್ಪನ್ ಜೊತೆ ಅರ್ಜುನ್ ತೆಂಡೂಲ್ಕರ್​

ಇದೀಗ ಅರ್ಜುನ್​ ಕೂಡ ಅವರಪ್ಪನ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದಾರೆ. ಕ್ರೆಕೆಟ್ ಮೈದಾನಕ್ಕೆ ಕಾಲಿಟ್ಟರೂ ಎಲ್ಲಾ ವಿಭಾಗದಿಂದಲೂ ತೀವ್ರ ಪರಿಶೀಲನೆಗೆ ಒಳಗಾಗುತ್ತಾರೆ. ಅವರ ಪ್ರತಿಯೊಂದು ಪ್ರದರ್ಶನವೂ ಯಾವುದೇ ಸ್ಥಳೀಯ ಮುಂಬೈ ಪಂದ್ಯದಲ್ಲಿ ಆಡುತ್ತಿದ್ದರೆ ಅಥವಾ ಬಿಸಿಸಿಐ ಟ್ರೋಫಿಯಲ್ಲಿ ಆಡಿದರೆ ಈತನ ಪ್ರದರ್ಶನ ಹೆಡ್​ಲೈನ್ ಆಗಿರುತ್ತದೆ. ಅಲ್ಲದೇ ಸಚಿನ್​ ಅಭಿಮಾನಿಗಳು ಆಸಕ್ತಿಯನ್ನು ಕೂಡ ಹೆಚ್ಚಾಗಿಸುತ್ತದೆ, ಜೊತೆಗೆ ಟೀಕೆಗೂ ಗುರಿಯಾಗುವ ಹಾಗೆ ಮಾಡುತ್ತಿದೆ. ಅರ್ಜುನ್​ ಮೇಲೆ ಸಾಕಷ್ಟು ನಿರೀಕ್ಷೆ ಮತ್ತು ಟೀಕೆ ವ್ಯಕ್ತವಾಗುವುದಕ್ಕೆ ಕಾರಣ ಆತನ ಹೆಸರ ಮುಂದೆ ಬಳುವಳಿಯಾಗಿ ಬಂದಿರುವ ತೆಂಡೂಲ್ಕರ್​ ಎಂಬ ಉಪನಾಮ ಎಂದರೆ ತಪ್ಪಾಗಲಾರದು.

ಮುಂಬೈ ಇಂಡಿಯನ್ಸ್ ತಂಡದ ಡೈರೆಕ್ಟರ್ ಜಹೀರ್ ಖಾನ್​ರಿಂದ ಚೆಂಡನ್ನು ಹಿಡಿಯುವ ಕಲೆ ಕಲಿಯುತ್ತಿರುವ ಅರ್ಜುನ್

ಕ್ರಿಕೆಟ್​ ಜಗತ್ತಿನಲ್ಲಿ ಲೆಜೆಂಡರಿ ಕ್ರಿಕೆಟಿಗರ ಮಕ್ಕಳು ಅತಿಯಾದ ನಿರೀಕ್ಷೆ ಮತ್ತು ಕಟುವಾದ ಟೀಕೆಗೆ ಗುರಿಯಾಗುತ್ತಿರುವುದು ಇದೇ ಮೊದಲೇನಲ್ಲ. ಸುನಿಲ್ ಗವಾಸ್ಕರ್ ಮಗ ರೋಹನ್ ಗವಾಸ್ಕರ್ ಮತ್ತು ರೋಜರ್​ ಬಿನ್ನಿ ಅವರ ಮಗ ಸ್ಟುವರ್ಟ್​ ಬಿನ್ನಿ ಕೂಡ ಇದೇ ತೆರನಾದ ಪರಿಸ್ಥಿತಿಯನ್ನು ಎದುರಿಸಿದ್ದರು. ಅವರು ದೇಶೀಯ ಕ್ರಿಕೆಟ್​ ಸರಣಿ ಮೂಲಕ ಭಾರತ ತಂಡಕ್ಕೆ ಸೇರ್ಪಡೆಯಾದರು. ಆದರೆ ಅವರಿಬ್ಬರಿಗೂ ತಮ್ಮ ತಂದೆಯಂತೆ ಅಂತಾರಾಷ್ಟ್ರೀಯ ಮಟ್ಟವನ್ನು ತಲುಪಲು ಸಾಧ್ಯವಾಗಲಿಲ್ಲ.

ಅರ್ಜುನ್​ ತೆಂಡೂಲ್ಕರ್​ ಒಬ್ಬ ಉದಯೋನ್ಮುಖ ಆಲ್​ರೌಂಡರ್​, ಆತ ಭಾರತ ತಂಡದ ಯಾವುದೇ ವಿಭಾಗದಲ್ಲಿ ಇನ್ನೂ ಆಡಿಲ್ಲ. ಮುಂಬೈ ಪರ ಇನ್ನೂ ರಣಜಿ ಕ್ರಿಕೆಟ್​ ತಂಡದಲ್ಲೂ ಆಡಿಲ್ಲ. ಆದರೂ ಆತನ ಹೆಸರು ಈಗಾಗಲೆ ಪ್ರಚಲಿತದಲ್ಲಿದೆ.

ಇದೀಗ ಅವರು ಐಪಿಎಲ್​ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಯಾವುದೇ ಟ್ರ್ಯಾಕ್​ ರೆಕಾರ್ಡ್​ ಇಲ್ಲದ ಆಟಗಾರ ಚಾಂಪಿಯನ್ ತಂಡಕ್ಕೆ ಸೇರ್ಪಡೆಗೊಂಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದೇ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್​ಗೂ ನೆಪೋಟಿಸಮ್ ಕಾಲಿಟ್ಟಿದೆ ಎಂಬ ಆರೋಪ ಕೇಳಿಬರುತ್ತಿದೆ.

ಆದರೆ, 40 ಲಕ್ಷದ ಆಸ್ಟ್ರೇಲಿಯನ್​ ಆಲ್​ರೌಂಡರ್​ ರಿಲೆ ಮೆರಿಡಿಟ್​ 8 ಕೋಟಿ ರೂ ಪಡೆದಿದ್ದಾರೆ, ಇದಕ್ಕೆ ವಾಯ್ಸ್ ಆಫ್​ ಕ್ರಿಕೆಟ್​ ಎಂದೇ ಹೆಸರಾಗಿರುವ ಹರ್ಷಬೋಗ್ಲೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಪರ ಇನ್ನು ಪದಾರ್ಪಣೆ ಮಾಡದಿರುವ ಆಟಗಾರನಿಗೆ 8 ಕೋಟಿ ರೂ ನೀಡಿರುವುದನ್ನೇ ಹೆಚ್ಚು ಎಂದು ಹರ್ಷ ಅವರು ಹೇಳಿದರೆ ಮುಂಬೈ ಇಂಡಿಯನ್ಸ್ ತಂಡ ಅರ್ಜುನ್​ ತೆಂಡೂಲ್ಕರ್​ರನ್ನು ಖರೀದಿಸಿರುವುದಕ್ಕೆ ಯಾವ ರೀತಿ ಆಲೋಚಿಸಬಹುದು ಎಂದು ಕೆಲವು ತಜ್ಞರ ಅಭಿಪ್ರಾಯವಾಗಿದೆ.

ಇದು ಅರ್ಜುನ್ ಮೇಲೆ ಅನಗತ್ಯ ಒತ್ತಡವನ್ನು ಸೃಷ್ಟಿಸುತ್ತಿಲ್ಲವೇ?

ಉನ್ನತ ಮಟ್ಟದ ಕ್ರಿಕೆಟ್​ನಲ್ಲಿ ತಂದೆ ಮತ್ತು ಮಗ ಯಶಸ್ವಿಯಾಗಿರುವ ಸಾಕಷ್ಟು ಉದಾಹರಣೆಗಳಿವೆ. ಲಾಲಾ ಅಮರ್​ನಾಥ್ ಮತ್ತು ಮೋಹಿಂದರ್ ಅಮರ್​ನಾಥ್​, ಇಫ್ತಿಕರ್ ಅಲಿ ಖಾನ್ ಪಟೌಡಿ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿ ಹಾಗೂ ಜಫ್​ ಮಾರ್ಶ್ ಮತ್ತು ಶಾನ್​ ಮಾರ್ಶ್​ ಹಾಗೂ ಮಿಚೆಲ್ ಮಾರ್ಶ್ ರಂತಹ ಕೆಲವು ಅಪ್ಪ-ಮಗ ಜೋಡಿಗಳು​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ತೋರಿ ತಮ್ಮ ಗೌರವಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ.

ಅಪ್ಪನ್ ಜೊತೆ ಅರ್ಜುನ್ ತೆಂಡೂಲ್ಕರ್​

ಆದರೆ, ಲೆಜೆಂಡರಿ ಕ್ರಿಕೆಟರ್​ಗಳ ಮಕ್ಕಳು ಕಠಿಣ ಪ್ರಕ್ರಿಯೆಗಳ ಮೂಲಕ ಬೆಳೆಯಬೇಕಿದೆ. ಆದರೆ ಅವರ ತಂದೆ ಕ್ರಿಕೆಟ್ನಲ್ಲಿ ಹೆಸರುವಾಸಿಯಾಗಿರುವುದೇ ಕೆಲವರಿಗೆ ಕ್ರಿಕೆಟ್​ನಲ್ಲಿ ಯಶಸ್ಸು ಸಿಕ್ಕಿಲ್ಲ. ಇದೀಹ ಸಚಿನ್ ಮಗನ ಪಾಡು ಅದೇ ಆಗುತ್ತಿದೆ.

ಆದರೆ, ಮುಂಬೈ ಇಂಡಿಯನ್ಸ್ ಡೈರೆಕ್ಟರ್​ ಜಹೀರ್ ಖಾನ್ ಮತ್ತು ಕೋಚ್ ಜಯವರ್ಧನೆ ಕೆಲವು ವರ್ಷಗಳಿಂದ ಅರ್ಜುನ್​ ಮೇಲೆ ಗಮನ ಹರಿಸುತ್ತಿದ್ದಾರೆ. ಅಲ್ಲದೆ ಅರ್ಜುನ್ ಕೂಡ ಹಲವು ಆವೃತ್ತಿಗಳಿಂದ ಮುಂಬೈ ಇಂಡಿಯನ್ಸ್​ ತಂಡದ ನೆಟ್​ಬೌಲರ್​ ಆಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಈ ಬಾರಿ ಹರಾಜಿನಲ್ಲಿ ಖರೀದಿಸಲಾಗಿದೆ ಎಂದು ಜಹೀರ್ ಮತ್ತು ಜಯವರ್ದನೆ ತಿಳಿಸಿದ್ದಾರೆ. ಆದರೆ ನೆಟಿಜನ್​ ಕೇಳುತ್ತಿರುವ ಪ್ರಶ್ನೆಯೇನೆಂದರೆ ಇದೇ ಅರ್ಜುನ್, ಸಚಿನ್​ ಅವರ ಮಗನಲ್ಲದೆ, ಬೇರೆ ಸಾಮಾನ್ಯ ಯುವಕರಾಗಿದ್ದರೆ ತಂಡಕ್ಕೆ ಆಯ್ಕೆ ಮಾಡುತ್ತಿದ್ದರೆ ಅಥವಾ ನೆಟ್ ಬೌಲರ್​ ಆಗಿ ಆಯ್ಕೆ ಮಾಡುತ್ತಿದ್ದರೆ ? ಎಂಬುದಾಗಿದೆ.

ABOUT THE AUTHOR

...view details