ಲಂಡನ್:ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಯಶಸ್ವಿ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ 2 ವಾರಗಳ ಪುನಶ್ಚೇತನಕ್ಕೆ ಒಳಗಾಗಿದ್ದಾರೆ. ಹಾಗಾಗಿ ರಾಯಲ್ಸ್ನ ಪ್ರಧಾನ ವೇಗಿ ಐಪಿಎಲ್ಗೆ ಮರಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
25 ವರ್ಷದ ಆರ್ಚರ್ ಐಪಿಎಲ್ನಲ್ಲಿ ರಾಜಸ್ಥಾನ ತಂಡದಲ್ಲಿದ್ದರು. ಸೋಮವಾರ ಮಧ್ಯದ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅದರಲ್ಲಿದ್ದ ಗಾಜಿನ ಚೂರನ್ನು ತೆಗೆಯಲಾಗಿದೆ.
ಜೋಫ್ರಾ ಆರ್ಚರ್ ಸೋಮವಾರ ಬಲಗೈ ಬೆರಳಿನ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ಮಧ್ಯದ ಬರಳಿನಿಂದ ಗಾಜಿನ ಚೂರೊಂದನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಹೇಳಿಕೆ ಬಿಡುಗಡೆ ಮಾಡಿದೆ.