ಕರ್ನಾಟಕ

karnataka

ETV Bharat / sports

ದ.ಆಫ್ರಿಕಾ ವಿರುದ್ಧದ ಸರಣಿಗೆ ತಂಡ ಪ್ರಕಟ : ಆರ್ಚರ್​, ಸ್ಟೋಕ್ಸ್​ಗೆ ಇಸಿಬಿಯಿಂದ ವಿಶ್ರಾಂತಿ - ಜೋಫ್ರಾ ಆರ್ಚರ್​ಗೆ ವಿಶ್ರಾಂತಿ

ನವೆಂಬರ್ 27, 29 ಹಾಗೂ ಡಿಸೆಂಬರ್​ 1 ರಂದು ಟಿ20 ಪಂದ್ಯಗಳು ನಡೆಯಲಿವೆ. ಈ ಸರಣಿಯಲ್ಲಿ ಆಡಲಿರುವ ಆರ್ಚರ್ ಮತ್ತು ಸ್ಟೋಕ್ಸ್​​ ನಂತರ ತವರಿಗೆ ಹಿಂತಿರುಗಲಿದ್ದಾರೆ. ಏಕದಿನ ಸರಣಿ ಡಿಸೆಂಬರ್​ 4 ರಿಂದ ಆರಂಭವಾಗಲಿದೆ..

ದ.ಆಫ್ರಿಕಾ ವಿರುದ್ಧದ ಸರಣಿಗೆ ತಂಡ ಪ್ರಕಟ
ದ.ಆಫ್ರಿಕಾ ವಿರುದ್ಧದ ಸರಣಿಗೆ ತಂಡ ಪ್ರಕಟ

By

Published : Nov 3, 2020, 8:43 PM IST

ಲಂಡನ್:ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಇಂಗ್ಲೆಂಡ್ ತಂಡವನ್ನು ಘೋಷಿಸಿರುವ ಇಸಿಬಿ ತಂಡದ ಪ್ರಮುಖ ಆಟಗಾರರಾದ ಜೋಫ್ರಾ ಆರ್ಚರ್, ಸ್ಯಾಮ್ ಕರ್ರನ್ ಹಾಗೂ ಬೆನ್​ ಸ್ಟೋಕ್ಸ್​ ಅವರಿಗೆ ಏಕದಿನ ತಂಡದಿಂದ ವಿಶ್ರಾಂತಿ ನೀಡಿದೆ.

ಆಫ್ರಿಕಾ ಪ್ರವಾಸದಲ್ಲಿ ಇಂಗ್ಲೆಂಡ್​ ತಂಡ ಹರಿಣಗಳ ನಾಡಿನಲ್ಲಿ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. ಈ ಸರಣಿಗೆ ತಂಡದ ಮೂರು ಮಾದರಿಯಲ್ಲಿ ಆಡುವ ಕೆಲವು ಆಟಗಾರರಿಗೆ ಏಕದಿನ ತಂಡದಿಂದ ವಿಶ್ರಾಂತಿ ನೀಡಿದೆ. ಇನ್ನು, ಯುವ ಆಟಗಾರ ಟಾಮ್ ಬಾಂಟನ್​, ಜಾಕ್ ಬಾಲ್​ ಮತ್ತು ಟಾಮ್ ಹೆಲ್ಮ್ ಅವರನ್ನು ರಿಸರ್ವ್​ ಆಟಗಾರರಾಗಿ ಆಯ್ಕೆ ಮಾಡಿದೆ.

ಜೋಫ್ರಾ ಆರ್ಚರ್​

ನವೆಂಬರ್ 27, 29 ಹಾಗೂ ಡಿಸೆಂಬರ್​ 1 ರಂದು ಟಿ20 ಪಂದ್ಯಗಳು ನಡೆಯಲಿವೆ. ಈ ಸರಣಿಯಲ್ಲಿ ಆಡಲಿರುವ ಆರ್ಚರ್ ಮತ್ತು ಸ್ಟೋಕ್ಸ್​​ ನಂತರ ತವರಿಗೆ ಹಿಂತಿರುಗಲಿದ್ದಾರೆ. ಏಕದಿನ ಸರಣಿ ಡಿಸೆಂಬರ್​ 4 ರಿಂದ ಆರಂಭವಾಗಲಿದೆ.

ಇಂಗ್ಲೆಂಡ್ ಟಿ20 ತಂಡ : ಇಯಾನ್ ಮಾರ್ಗನ್ (ಸಿನಾಯಕ), ಜಾನಿ ಬೈರ್‌ಸ್ಟೋವ್, ಜೇಸನ್ ರಾಯ್, ಜೋಸ್ ಬಟ್ಲರ್ (ವಿಕೀ), ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಸ್ಯಾಮ್ ಬಿಲ್ಲಿಂಗ್ಸ್, ಮೊಯೀನ್ ಅಲಿ, ಸ್ಯಾಮ್ ಕರ್ರನ್, ಟಾಮ್ ಕರ್ರನ್, ಜೋಫ್ರಾ ಆರ್ಚರ್, ಕ್ರಿಸ್ ಜೋರ್ಡಾನ್, ರೀಸ್ ಟಾಪ್ಲೆ, ಮಾರ್ಕ್ ವುಡ್, ಆದಿಲ್ ರಶೀದ್.

ಏಕದಿನ ತಂಡ : ಇಯಾನ್ ಮಾರ್ಗನ್ (ನಾಯಕ), ಜಾನಿ ಬೈರ್‌ಸ್ಟೋವ್, ಜೇಸನ್ ರಾಯ್, ಜೋ ರೂಟ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್ (ವಿಕೀ), ಮೊಯೀನ್ ಅಲಿ, ಲೂಯಿಸ್ ಗ್ರೆಗೊರಿ, ಟಾಮ್ ಕರ್ರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ರೀಸ್ ಟೋಪ್ಲಿ, ಆಲಿ ಸ್ಟೋನ್, ಮಾರ್ಕ್ ವುಡ್.

ABOUT THE AUTHOR

...view details