ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಬಯೋಸೆಕ್ಯೂರ್ ಪ್ರೋಟೋಕಾಲ್ ಉಲ್ಲಂಘಿಸಿರುವ ಆರೋಪದ ಮೇಲೆ 2ನೇ ಟೆಸ್ಟ್ ಪಂದ್ಯದಿಂದ ಜೋಫ್ರಾ ಆರ್ಚರ್ ಅವರನ್ನು ಹೊರಗಿಡಲಾಗಿದೆ. ಈ ಮಧ್ಯೆ ಅವರು ಮಾಡಿರುವ ತಪ್ಪಿನಿಂದ ಮಂಡಳಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಶ್ಲೇ ಗೈಲ್ಸ್ ಇದೇ ವಿಷಯವಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಶ್ಲೇ ಗೈಲ್ಸ್ ಮಾತನಾಡಿದ್ದು, ಕೊರೊನಾ ವೈರಸ್ ಮುನ್ನೆಚ್ಚರಿಕಾ ನಿಯಮ ಉಲ್ಲಂಘಿಸಿರುವ ಆರ್ಚರ್ ನಿರ್ಧಾರದಿಂದ ಮಂಡಳಿಗೆ 10 ಮಿಲಿಯನ್ ಪೌಂಡ್ಗಳಷ್ಟು ನಷ್ಟವಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಇದನ್ನೂ ಓದಿ:ನಿಯಮ ಉಲ್ಲಂಘನೆ: ಜೋಫ್ರಾ ಆರ್ಚರ್ 2ನೇ ಟೆಸ್ಟ್ನಿಂದ ಹೊರಗಿಟ್ಟ ಇಂಗ್ಲೆಂಡ್
ಜೋಫ್ರಾ ಆರ್ಚರ್ ನಡೆಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ವೆಸ್ಟ್ ಇಂಡೀಸ್ ತಂಡ ಕೂಡ ಪ್ರಶ್ನಿಸಿದೆ. ಆದರೆ ಅವರ ಮನವೊಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲನೇ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಸೌಥಾಂಪ್ಟನ್ನಿಂದ ಮ್ಯಾಂಚೆಸ್ಟರ್ಗೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ಅವರು ತಮ್ಮ ನಿವಾಸಕ್ಕೆ ಹೋಗಿ ಬಂದಿದ್ದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್ಚರ್ ಈ ವಿಚಾರವಾಗಿ ಆರ್ಚರ್ ಕ್ಷಮೆಯಾಚಿಸಿದ್ದಾರೆ. ನನ್ನ ತಪ್ಪಿನ ಅರಿವಾಗಿದೆ. ನಾನು ಮಾಡಿರುವ ತಪ್ಪಿನಿಂದ ಇಡೀ ತಂಡ ಹಾಗೂ ಮ್ಯಾನೇಜ್ಮೆಂಟ್ ಕೂಡ ಅಪಾಯ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.
ಅವರನ್ನು ತಂಡದಿಂದ ಹೊರಗಿಟ್ಟು ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಜೊತೆಗೆ ಅವರನ್ನು ಐಸೊಲೇಷನ್ನಲ್ಲಿಡಲಾಗಿದೆ.