ಕರ್ನಾಟಕ

karnataka

ETV Bharat / sports

ಗರ್ಭಿಣಿಗೆ ತುಂಬಾ ರೋಮಾಂಚನಕಾರಿ ಪಂದ್ಯ: ಆರ್​ಸಿಬಿ ಗೆಲುವಿಗೆ ಅನುಷ್ಕಾ ಹರ್ಷ! - ಆರ್​ಸಿಬಿ ಗೆಲುವಿಗೆ ಅನುಷ್ಕಾ ಪ್ರತಿಕ್ರಿಯೆ

ಮುಂಬೈ ಇಂಡಿಯನ್ಸ್​​ ಹಾಗೂ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡಗಳ ನಡುವಿನ ಪಂದ್ಯ ತುಂಬ ರೋಚಕತೆಯಿಂದ ಕೂಡಿತ್ತು. ಪಂದ್ಯದ ಬಗ್ಗೆ ವಿರಾಟ್​ ಪತ್ನಿ ಅನುಷ್ಕಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

RCB Team
RCB Team

By

Published : Sep 29, 2020, 7:36 PM IST

ದುಬೈ:ಇಂಡಿಯನ್​ ಪ್ರೀಮಿಯರ್​ ಲೀಗ್​​ನ 10ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೂಪರ್​ ಓವರ್​​ನ ಕೊನೆಯ ಎಸೆತದಲ್ಲಿ ಗೆಲುವು ದಾಖಲು ಮಾಡಿದ್ದು, ಇದಕ್ಕೆ ವಿರಾಟ್​​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಗೆಲುವಿನ ಲಯಕ್ಕೆ ಮರಳಿದ ಆರ್​ಸಿಬಿ... ಕಳಪೆ ಬ್ಯಾಟಿಂಗ್​ ಮುಂದುವರೆಸಿದ ರನ್​ ಮಷಿನ್​!

ಆರ್​ಸಿಬಿ ನೀಡಿದ್ದ 202ರನ್​ಗಳ ಗುರಿ ಬೆನ್ನತ್ತಿದ್ದ ಮುಂಬೈ 20 ಓವರ್​​ಗಳಲ್ಲಿ 201ರನ್​ಗಳಿಕೆ ಮಾಡಿ ಪಂದ್ಯವನ್ನ ಟೈ ಮಾಡಿಕೊಂಡಿತ್ತು. ಹೀಗಾಗಿ ಸೂಪರ್​ ಓವರ್​ ಮೊರೆ ಹೋಗಬೇಕಾಯಿತು. ಈ ವೇಳೆ, ಮುಂಬೈ 8ರನ್​ಗಳಿಕೆ ಮಾಡಿತು. ಇದರ ಬೆನ್ನತ್ತಿದ್ದ ಆರ್​​ಸಿಬಿ ಕೊನೆಯ ಎಸೆತದಲ್ಲಿ ಪಂದ್ಯ ಗೆದ್ದುಕೊಂಡಿತ್ತು. ನಿನ್ನೆಯ ಪಂದ್ಯ ನೋಡಲು ಬಹಳಷ್ಟು ರೋಚಕತೆಯಿಂದ ಕೂಡಿದ್ದರಿಂದ ಅನುಷ್ಕಾ ಸಾಮಾಜಿಕ ಜಾಲತಾಣ ಇನ್​​ಸ್ಟಾಗ್ರಾಂನಲ್ಲಿ ಗರ್ಭಿಣಿಗೆ ತುಂಬ ರೋಮಾಂಚನಕಾರಿ ಪಂದ್ಯ, ಎಂತಹ ತಂಡವಿದು ಎಂದು ಬರೆದುಕೊಂಡಿದ್ದಾರೆ.

ಆರ್​ಸಿಬಿ ಗೆಲುವಿಗೆ ಅನುಷ್ಕಾ ಪ್ರತಿಕ್ರಿಯೆ

ನಿನ್ನೆಯ ಪಂದ್ಯದಲ್ಲಿ ಆರ್​ಸಿಬಿ ಪರ ಪಡಿಕಲ್ (54 ರನ್)ಫಿಂಚ್ (52 ರನ್) ಡಿವಿಲಿಯರ್ಸ್ (55 ರನ್)ಗಳಿಕೆ ಮಾಡಿದ್ರೆ, ಮುಂಬೈ ಪರ ಯಂಗ್​ ಪ್ಲೇಯರ್​ ಇಶಾನ್ ಕಿಶಾನ್ (99 ರನ್) ಕೀರನ್ ಪೋಲಾರ್ಡ್ (60 ರನ್)ಗಳಿಕೆ ಮಾಡಿದರು.

ABOUT THE AUTHOR

...view details