ಕರ್ನಾಟಕ

karnataka

ETV Bharat / sports

ಕಠಿಣ ಮನಸ್ಥಿತಿಯ ನನ್ನನ್ನು ಮನುಷ್ಯನನ್ನಾಗಿ ಪರಿವರ್ತಿಸಿದ್ದು ಪತ್ನಿ: ಕೊಹ್ಲಿ - ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ

ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್ ಮಯಾಂಕ್​ ಅಗರ್​ವಾಲ್​ ಜೊತೆಗಿನ ‘ಓಪನ್​ ನೆಟ್ಸ್​ ವಿತ್​ ಮಯಾಂಕ್​‘ ಕಾರ್ಯಕ್ರಮದಲ್ಲಿ ಮಾತನಾಡಿರುವ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾರನ್ನು ಮನಸಾರೆ ಕೊಂಡಾಡಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

By

Published : Jul 28, 2020, 6:52 PM IST

ಮುಂಬೈ: ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅನುಷ್ಕಾ ಶರ್ಮಾ ತಮ್ಮನ್ನು ಒಬ್ಬ ವ್ಯಕ್ತಿಯಾಗಿ ಬದಲಾಯಿಸಿದ್ದರಿಂದ ವಿಭಿನ್ನ ದೃಷ್ಟಿಕೋನಗಳಿಂದ ಬದುಕನ್ನು ನೋಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

'ನನ್ನ ಜೀವನದಲ್ಲಿ ವಿಭಿನ್ನ ವಿಷಯಗಳನ್ನು ನೋಡುವಂತೆ ಮಾಡಿದ ಅನುಷ್ಕಾಗೆ ಸಂಪೂರ್ಣ ಮನ್ನಣೆ ನೀಡುತ್ತೇನೆ. ಆಕೆ ನನ್ನ ಜೀವನ ಸಂಗಾತಿಯಾಗಿರುವುದಕ್ಕೆ ನಾನು ಕೃತಜ್ಞ. ಆಕೆ ಬಹಳಷ್ಟು ವಿಷಯಗಳನ್ನು ನನಗೆ ಮನವರಿಕೆ ಮಾಡಿಕೊಡುತ್ತಾಳೆ. ಆಟಗಾರನಾಗಿ ನನ್ನ ಜವಾಬ್ದಾರಿ, ಸ್ಥಾನಮಾನಕ್ಕೆ ತಕ್ಕಂತೆ ನನ್ನ ಜವಾಬ್ದಾರಿ, ಕೆಲವು ಜನರಿಗೆ ತಾವು ಹೇಗೆ ಉದಾಹರಣೆಯಾಗಬೇಕು? ಎಂಬೆಲ್ಲಾ ವಿಷಯಗಳು ಆಕೆಯಿಂದ ಬಂದಿವೆ" ಎಂದು ಕೊಹ್ಲಿ ಗುಣಗಾನ ಮಾಡಿದರು.

'ಒಂದು ವೇಳೆ ನಾನು ಅನುಷ್ಕಾಳನ್ನು ಭೇಟಿ ಮಾಡಿರದಿದ್ದರೆ ಇಂದು ನಾನು ಮುಕ್ತ ವ್ಯಕ್ತಿಯಾಗಿರುತ್ತಿರಲಿಲ್ಲ. ಇದಕ್ಕೆ ಬದಲಾಗಿ ತುಂಬಾ ಕಠಿಣ ಮನಸ್ಥಿತಿಯ ವ್ಯಕ್ತಿಯಾಗಿರುತ್ತಿದ್ದೆ. ಹಾಗೆಯೇ ನಾನು ಬದಲಾಗುತ್ತಿರಲಿಲ್ಲ. ಅವಳು ಒಳ್ಳೆಯ ವ್ಯಕ್ತಿಯಾಗಿ ನನ್ನನ್ನು ಬದಲಾಯಿಸಿದ್ದಾಳೆ' ಎಂದು ಕೊಹ್ಲಿ ಹೇಳಿದ್ದಾರೆ.

ABOUT THE AUTHOR

...view details