ಕರ್ನಾಟಕ

karnataka

ETV Bharat / sports

ಸಚಿನ್, ಪಠಾಣ್​ ನಂತರ ಲೆಜೆಂಡ್ ತಂಡದ ಮತ್ತೊಬ್ಬ ಆಟಗಾರನಿಗೂ ಕೊರೊನಾ ದೃಢ! - ರೋಡ್ ಸೇಫ್ಟಿ ವರ್ಲ್ಡ್​ ಸಿರೀಸ್

ಈಗಾಗಲೇ ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಭಾರತ ಕ್ರಿಕೆಟ್​ನ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ಮಾಜಿ ಆಲ್​ರೌಂಡರ್​ ಯೂಸುಫ್ ಪಠಾಣ್​ಗೆ ಶನಿವಾರ ಕೋವಿಡ್​ 19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದೀಗ ಎಸ್​ ಬದ್ರಿನಾಥ್​ಗೂ ಕೋವಿಡ್​ ವಕ್ಕರಿಸಿದೆ. ​

ಬದ್ರಿನಾಥ್​ಗೆ ಕೊರೊನಾ
ಬದ್ರಿನಾಥ್​ಗೆ ಕೊರೊನಾ

By

Published : Mar 28, 2021, 7:16 PM IST

ಮುಂಬೈ: ಭಾರತ ತಂಡದ ಮಾಜಿ ಬ್ಯಾಟ್ಸ್​ಮನ್ ಎಸ್​ ಬದ್ರಿನಾಥ್ ಅವರಿಗೂ ಕೊರೊನಾ ದೃಢಪಟ್ಟಿದೆ. ಬದ್ರಿ ಕೊರೊನಾಗೆ ತುತ್ತಾಗಿರುವ ಭಾರತ ಲೆಜೆಂಡ್ ತಂಡದ 3ನೇ ಕ್ರಿಕೆಟಿಗನಾಗಿದ್ದಾರೆ.

ಈಗಾಗಲೇ ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಭಾರತ ಕ್ರಿಕೆಟ್​ನ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ಮಾಜಿ ಆಲ್​ರೌಂಡರ್​ ಯೂಸುಫ್ ಪಠಾಣ್​ಗೆ ಶನಿವಾರ ಕೋವಿಡ್​ 19 ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಇದೀಗ ಸಚಿನ್​ ನೇತೃತ್ವದ ಭಾರತ ಲೆಜೆಂಡ್​ ತಂಡದ ಸಹ ಆಟಗಾರನಾಗಿದ್ದ ಎಸ್ ಬದ್ರಿನಾಥ್​ಗೂ ಕೂಡ ಕೋವಿಡ್ 19 ದೃಢಪಟ್ಟಿದ್ದು, ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಎಸ್​ ಬದ್ರಿನಾಥ್

ಇದನ್ನು ಓದಿ:ಸಚಿನ್​ ಬೆನ್ನಲ್ಲೇ ರೋಡ್​ ಸೇಫ್ಟಿ ಟೂರ್ನಿಯಲ್ಲಿ ಭಾಗವಹಿಸಿದ್ದ ಪಠಾಣ್​ಗೂ ಕೊರೊನಾ ದೃಢ..

" ನಾನು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೆ ಮತ್ತು ನಿಯಮಿತವಾಗಿ ಪರೀಕ್ಷೆಗೂ ಸಹಾ ಒಳಗಾಗಿದ್ದು, ಆದಾಗ್ಯೂ ಸಣ್ಣ ಪ್ರಮಾಣದ ಲಕ್ಷಣಗಳೊಂದಿಗೆ ಕೋವಿಡ್​ 19 ಪಾಸಿಟಿವ್ ದೃಢಪಟ್ಟಿದೆ. ಇದೀಗ ಕೋವಿಡ್​ ಪ್ರೋಟೋಕಾಲ್​ಗಳನ್ನು ಪಾಲಿಸುತ್ತಿದ್ದೇನೆ ಮತ್ತು ನನ್ನ ಮನೆಯಲ್ಲೇ ಐಸೊಲೇಟ್​ ಆಗಿದ್ದೇನೆ. ವೈದ್ಯರ ಸಲಹೆಯಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದ್ದೇನೆ " ಎಂದು ಎಸ್ ಬದ್ರಿನಾಥ್ ತಮಗೆ ಕೊರೊನಾ ಸೋಂಕು ತಗುಲಿರುವುದನ್ನು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಭಾರತದ ಪರ 2 ಟೆಸ್ಟ್​, 7 ಏಕದಿನ ಪಂದ್ಯ ಮತ್ತು ಒಂದು ಟಿ20 ಪಂದ್ಯದಲ್ಲಿ ಆಡಿರುವ ಬದ್ರಿನಾಥ್ ಇತ್ತೀಚೆಗೆ ಮುಗಿದ​ ರೋಡ್ ಸೇಫ್ಟಿ ವರ್ಲ್ಡ್ ಟೂರ್ ಟೂರ್ನಿ ವೇಳೆ ಯೂಸುಫ್ ಪಠಾಣ್ ಹಾಗೂ ಸಚಿನ್ ತೆಂಡೂಲ್ಕರ್ ಜೊತೆಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರೆಂದು ತಿಳಿದುಬಂದಿದೆ.

ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಟೂರ್ನಿ ರಾಯ್ಪುರದಲ್ಲಿ ನಡೆದಿತ್ತು. ಭಾರತ ಲೆಜೆಂಡ್ಸ್ ತಂಡ ಶ್ರೀಲಂಕಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು.

ABOUT THE AUTHOR

...view details