ನವದೆಹಲಿ:1999 ಫೆಬ್ರವರಿ 7 ರಂದು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ (ಈಗಿನ ಆರುಣ್ ಜೇಟ್ಲಿ ಮೈದಾನ) ಜಾದು ಮಾಡಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ನ ಇನ್ನಿಂಗ್ಸ್ವೊಂದರಲ್ಲಿ ಎದುರಾಳಿ ತಂಡದ ಎಲ್ಲಾ 10 ವಿಕೆಟ್ಗಳನ್ನು ಕಬಳಿಸಿ ಐತಿಹಾಸಿಕ ಸಾಧನೆ ಮಾಡಿದ್ದರು.
ಒಂದೇ ಚಿತ್ರದಲ್ಲಿ 10 ವಿಕೆಟ್ ಪಡೆದ ಸ್ಮರಣೀಯ ಕ್ಷಣಗಳು ಭಾರತ ಪ್ರವಾಸ ಕೈಗೊಂಡ ಪಾಕ್ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಎದುರಾಗಿದ್ದವು. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡ 12 ರನ್ಗಳಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಟೀಂ ಇಂಡಿಯಾ ಮುಂದಿನ ಪಂದ್ಯವನ್ನ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿತ್ತು.
ವಿಕೆಟ್ ಪಡೆದ ಸಂಭ್ರಮದಲ್ಲಿ ಅನಿಲ್ ಕುಂಬ್ಳೆ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ ಬ್ಯಾಟಿಂಗ್ಗೆ ಇಳಿದ ಪಾಕ್ ಭಾರತ ನೀಡಿದ್ದ 420ರನ್ಗಳ ಗುರಿ ಬೆನ್ನತ್ತಿತ್ತು. ಶಾಹಿದ್ ಅಫ್ರಿದಿ ಮತ್ತು ಸೈಯದ್ ಅನ್ವರ್ ಮೊದಲ ವಿಕೆಟ್ಗೆ 101 ರನ್ಗಳ ಜೊತೆಯಾಟವಾಡಿದ್ದರು. ಕುಂಬ್ಳೆ ಬೌಲಿಂಗ್ಗೆ ಇಳಿಯುವುದಕ್ಕೂ ಮೊದಲು ಪಾಕ್ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು.
ಪಂದ್ಯ ಗೆದ್ದ ಸಂಭ್ರಮದಲ್ಲಿ ಕುಂಬ್ಳೆಯವರನ್ನ ಹೊತ್ತು ಸಾಗಿದ ಸಹ ಆಟಗಾರರು 25ನೇ ಓವರ್ನಲ್ಲಿ ದಾಳಿಗೆ ಇಳಿದ ಅನಿಲ್ ಕುಂಬ್ಳೆ ಅಫ್ರಿದಿಯನ್ನ ಔಟ್ ಮಾಡಿದ್ರು. ಅಲ್ಲಿಂದ ಪಾಕ್ ಆಟಗಾರರ ಪೆವಿಲಿಯನ್ ಪರೇಡ್ ಆರಂಭವಾಯ್ತು. 128 ರನ್ ಗಳಿಸುವಷ್ಟರಲ್ಲಿ ಪಾಕಿಸ್ತಾನ ಪ್ರಮುಖ 6 ವಿಕೆಟ್ಗಳನ್ನ ಕಳೆದುಕೊಂಡಿತು. ಪಂದ್ಯದ 61ನೇ ಓವರ್ನಲ್ಲಿ ವಾಸಿಮ್ ಅಕ್ರಮ್ ವಿಕೆಟ್ ಪಡೆಯುವ ಮೂಲಕ ಕುಂಬ್ಳೆ ವಿಶ್ವ ದಾಖಲೆ ನಿರ್ಮಿಸಿದ್ರು. ಇನ್ನಿಂಗ್ಸ್ ಒಂದರ 10 ವಿಕೆಟ್ ಪಡೆದ ವಿಶ್ವದ 2ನೇ ಆಟಗಾರ ಎಂಬ ಕೀರ್ತಿಗೆ ಕನ್ನಡಿಗ ಪಾತ್ರರಾದ್ರು. ಕುಂಬ್ಳೆಗೂ ಮೊದಲು ಇಂಗ್ಲೆಂಡ್ನ ಆಟಗಾರ ಜಿಮ್ ಲೇಕರ್ ಈ ಸಾಧನೆ ಮಾಡಿದ್ದರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ 212ರನ್ಗಳ ಅಂತರದಲ್ಲಿ ಬೃಹತ್ ಜಯ ಸಾಧಿಸಿತು.132 ಟೆಸ್ಟ್ ಪಂದ್ಯಗಳನ್ನ ಆಡಿರುವ ಕುಂಬ್ಳೆ 619 ವಿಕೆಟ್ ಪಡೆದುಕೊಂಡಿದ್ದಾರೆ.