ಕರ್ನಾಟಕ

karnataka

ETV Bharat / sports

ಕನ್ನಡಿಗನ ಹೆಗಲಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಿರ್ದೇಶಕ ಜವಾಬ್ದಾರಿ..! - ಅನಿಲ್​ ಕುಂಬ್ಳೆಗೆ ಹೊಸ ಜವಾಬ್ದಾರಿ

ಐಪಿಎಲ್​ನಲ್ಲಿ ಇದುವರೆಗೂ ಪ್ರಶಸ್ತಿಗೆ ಮುತ್ತಿಕ್ಕದ ಮೂರು ತಂಡಗಳ ಪೈಕಿ ಪಂಜಾಬ್ ಸಹ ಒಂದು. ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಉಳಿದೆರಡು ತಂಡಗಳಾಗಿವೆ. ಕನ್ನಡಿಗ ಅನಿಲ್ ಕುಂಬ್ಳೆ ಆಗಮನದಿಂದ ತಂಡ ಚಾಂಪಿಯನ್​​ ಆಗುವ ಕನಸಿನಲ್ಲಿದೆ.

ಅನಿಲ್ ಕುಂಬ್ಳೆ

By

Published : Oct 11, 2019, 12:47 PM IST

ಮುಂಬೈ:ಟೀಂ ಇಂಡಿಯಾ ಮಾಜಿ ಕೋಚ್ ಕನ್ನಡಿಗ ಅನಿಲ್​ ಕುಂಬ್ಳೆ ಕಿಂಗಸ್​ ಇಲೆವೆನ್ ಪಂಜಾಬ್ ತಂಡದ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಐಪಿಎಲ್​ನಲ್ಲಿ ಇದುವರೆಗೂ ಪ್ರಶಸ್ತಿಗೆ ಮುತ್ತಿಕ್ಕದ ಮೂರು ತಂಡಗಳ ಪೈಕಿ ಪಂಜಾಬ್ ಸಹ ಒಂದು. ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಉಳಿದೆರಡು ತಂಡಗಳಾಗಿವೆ. ಕನ್ನಡಿಗ ಅನಿಲ್ ಕುಂಬ್ಳೆ ಆಗಮನದಿಂದ ತಂಡ ಚಾಂಪಿಯನ್​​ ಆಗುವ ಕನಸಿನಲ್ಲಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ

"ನಮ್ಮ ತಂಡದ ಮುಖ್ಯ ಕೋಚ್ ಹುದ್ದೆಗೆ ಅನಿಲ್​ ಕುಂಬ್ಳೆಯೇ ಸೂಕ್ತ ಆಯ್ಕೆ. ಈಗಾಗಲೇ ಟೀಂ ಇಂಡಿಯಾ ಹಾಗೂ ಐಪಿಎಲ್​​ನ ಎರಡು ತಂಡಕ್ಕೆ ತರಬೇತಿ ನೀಡಿ ಉತ್ತಮ ಅನುಭವ ಹೊಂದಿದ್ದಾರೆ. ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ತಂಡ ಉತ್ತಮ ಸಾಧನೆಗೈಯ್ಯುವ ನಿರೀಕ್ಷೆ ಇದೆ" ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹಮಾಲೀಕ ನೆಸ್​ ವಾಡಿಯಾ ಹೇಳಿದ್ದಾರೆ​.

ಆಸ್ಟ್ರೇಲಿಯಾದ ಮಾಜಿ ಆಟಗಾರ ಜಾರ್ಜ್​ ಬೈಲಿ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ ಆಗಿದ್ದು, ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಸಹಾಯಕ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ದ. ಅಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಫೀಲ್ಡಿಂಗ್ ಕೋಚ್ ಹಾಗೂ ವಿಂಡೀಸ್​ ಮಾಜಿ ಬೌಲರ್ ಕರ್ಟ್ನಿ ವಾಲ್ಶ್ ಬೌಲಿಂಗ್ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ABOUT THE AUTHOR

...view details