ಕರ್ನಾಟಕ

karnataka

ETV Bharat / sports

ಎರಡು ವರ್ಷಗಳ ನಂತರ ಬೌಲಿಂಗ್​ ಮಾಡಿ ಲಂಕಾ ಗೆಲುವಿಗೆ ಕಾರಣರಾದ ಆಲ್​ರೌಂಡರ್​ - ವಿಂಡೀಸ್​

ಲಂಕಾ ತಂಡದ ಮಾಜಿ ನಾಯಕನೂ ಆಗಿರುವ ಮ್ಯಾಥ್ಯೂಸ್​ ನಿನ್ನೆ ನಡೆದ ಪಂದ್ಯದಲ್ಲಿ ಶತಕ ಸಿಡಿಸಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ವಿಂಡೀಸ್​ ಯುವ ಬ್ಯಾಟ್ಸ್​ಮನ್​ ನಿಕೋಲಸ್​ ಪೂರನ್​ರನ್ನು ಔಟ್​ ಮಾಡುವ ಮೂಲಕ ಲಂಕಾ ತಂಡಕ್ಕೆ 23 ರನ್​ಗಳ ಗೆಲುವು ತಂದುಕೊಟ್ಟರು.

Angelo Mathews

By

Published : Jul 2, 2019, 4:23 AM IST

ಚೆಸ್ಟರ್​ ಲೇ ಸ್ಟ್ರೀಟ್: ಹಾವು-ಏಣಿಯಾಟದಂತಿದ್ದ ಶ್ರೀಲಂಕಾ ಹಾಗೂ ವೆಸ್ಟ್​ ಇಂಡೀಸ್​ ತಂಡಗಳ ಪಂದ್ಯದಲ್ಲಿ ಕೊನೆಗೆ ವಿಜಯಲಕ್ಷ್ಮಿ ಲಂಕಾ ಪಾಲಾದಳು. ಆದರೆ ಈ ಜಯಕ್ಕೆ ಕಾರಣರಾಗಿದ್ದು ಹಿರಿಯ ಆಲ್​ರೌಂಡರ್​ ಏಂಜೆಲೋ ಮ್ಯಾಥ್ಯೂಸ್​.

ಹೌದು, ಲಂಕಾ ತಂಡದ ಮಾಜಿ ನಾಯಕನೂ ಆಗಿರುವ ಮ್ಯಾಥ್ಯೂಸ್​ ನಿನ್ನೆ ನಡೆದ ಪಂದ್ಯದಲ್ಲಿ ಶತಕ ಸಿಡಿಸಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ವಿಂಡೀಸ್​ ಯುವ ಬ್ಯಾಟ್ಸ್​ಮನ್​ ನಿಕೋಲಸ್​ ಪೂರನ್​ರನ್ನು ಔಟ್​ ಮಾಡುವ ಮೂಲಕ ಲಂಕಾ ತಂಡಕ್ಕೆ 23 ರನ್​ಗಳ ಗೆಲುವು ತಂದುಕೊಟ್ಟರು.

ಈ ಪಂದ್ಯಕ್ಕೂ ಮುನ್ನ ಮ್ಯಾಥ್ಯೂಸ್​ 2017 ರಲ್ಲಿ ಕೊನೆಯ ಬಾರಿಗೆ ಬೌಲಿಂಗ್​ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಕೇವಲ ಬ್ಯಾಟಿಂಗ್​ ಮಾತ್ರ ಮಾಡುತ್ತಿದ್ದ ಅವರು ತಂಡದ ಪರಿಸ್ಥಿತಿ ಅರಿತು, ಬೌಲಿಂಗ್​ ಮಾಡುವ ಮೂಲಕ ವಿಂಡೀಸ್​ ತಂಡದ ಪಾಲಾಗುತ್ತಿದ್ದ ಜಯವನ್ನು ಲಂಕಾಪರ ತಿರುಗಿಸಿದರು.

ಲಂಕಾ ನಾಯಕ ಕರುಣರತ್ನೆ ಬೌಲಿಂಗ್​ ವಿಭಾಗವನ್ನು ನಿಭಾಯಿಸುವಲ್ಲಿ ಎಡವಿದ್ದರು. ಕೊನೆಯಲ್ಲಿ 6 ಓವರ್​ಗಳಿದ್ದಾಗ, ಟಾಪ್​ ವೇಗಿಗಳಾದ ಮಲಿಂಗಾ ಹಾಗೂ ಉದಾನಗೆ 2 ಓವರ್​ಗಳು ಬಾಕಿಯಿದ್ದವು. ಸ್ಪಿನ್ನರ್​ ವಂಡರ್ಸೆಗೆ ಮೂರು ಓವರ್​ಗಳು ಬಾಕಿಯಿದ್ದರು, ಆದರೆ ಸ್ಪಿನ್ನರ್​ ಕೈಯ್ಯಲ್ಲಿ ಬಾಲ್​ ನೀಡಲು ಪೂರನ್​ರ​ ಭಯವಿತ್ತು. ಹೀಗಾಗಿ ಹಿರಿಯ ಆಲ್​ರೌಂಡರ್​ ಮ್ಯಾಥ್ಯೂಸ್​ ಕೈಗೆ ನಾಯಕ ಕರುಣರತ್ನೆ ಬಾಲ್ ನೀಡಿದರು. ಎರಡು ವರ್ಷಗಳ ನಂತರ ಬೌಲಿಂಗ್​ ಮಾಡಿದರೂ, ಶತಕದಾರಿ ಪೂರನ್​ ವಿಕೆಟ್​ ಪಡೆದ ಮ್ಯಾಥ್ಯೂಸ್​ ಲಂಕಾ ಗೆಲುವನ್ನು ಕನ್ಫರ್ಮ್​ ಮಾಡಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಲಂಕಾ 338 ರನ್​ಗಳ ಬೃಹತ್​ ಮೊತ್ತ ದಾಖಲಿಸಿತ್ತು. 339 ರನ್​ಗಳ ಬೆನ್ನತ್ತಿದ ವಿಂಡೀಸ್​ 315 ರನ್​ಗಳಿಲಷ್ಟೇ ಶಕ್ತವಾಗಿ 23 ರನ್​ಗಳಿಂದ ಸೋಲೊಪ್ಪಿಕೊಂಡಿತು.

ABOUT THE AUTHOR

...view details