ಕೊಲೊಂಬೊ: ಬಾಂಗ್ಲದೇಶ ತಂಡದ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 122 ರನ್ಗಳ ಭರ್ಜರಿ ಜಯ ಪಡೆಯುವ ಮೂಲಕ 3-0ಯಲ್ಲಿ ಸರಣಿ ಜಯಿಸಿದೆ.
ಮೊದಲೆರಡು ಪಂದ್ಯಗಳನ್ನ ಗೆದ್ದು ಸರಣಿ ಗೆಲುವು ಖಚಿತ ಪಡಿಸಿಕೊಂಡಿದ್ದ ಲಂಕಾ ಕೊನೆಯ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಸಿಂಹಳೀಯರು 8 ವಿಕೆಟ್ ಕಳೆದು ಕೊಂಡು 294 ರನ್ಗಳಿಸಿತು. ಮ್ಯಾಥ್ಯೂಸ್ 87, ನಾಯಕ ಕರುಣರತ್ನೆ 46, ಕುಸಾಲ್ ಪರೆರಾ 42, ಕುಸಾಲ್ ಮೆಂಡಿಸ್ 54, ದಾಸುನ್ ಶನಾಕ 30 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಬಾಂಗ್ಲಾದೇಶದ ಪರ ಶಫೀವುಲ್ ಇಸ್ಲಾಮ್ 3, ಸೌಮ್ಯ ಸರ್ಕಾರ್ 3, ರುಬೆಲ್ ಹುಸೇನ್ ಹಾಗೂ ತೈಜುಲ್ ಇಸ್ಲಾಮ್ ತಲಾ ಒಂದು ವಿಕೆಟ್ ಪಡೆದರು.