ಮೆಲ್ಬೋರ್ನ್: ಕಳೆದ ಎರಡು ದಿನಗಳಿಂದ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯಲ್ಲಿ ಅಚ್ಚರಿಯ ಬೆಳವಣಿಗೆ ಕಂಡುಬರುತ್ತಿದೆ. ಆರ್ಥಿಕ ಪರಿಸ್ಥಿತಿ ನಿರ್ವಹಿಸಲಾಗದೆ ಸಿಇಒ ಕೆವಿನ್ ರಾಬರ್ಟ್ ರಾಜಿಮೆ ನೀಡಿದರೆ, ನಿಕ್ ಹಾಕ್ಲೆರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿತ್ತು. ಇದೀಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಹೆಸರು ಕೇಳಿ ಬರುತ್ತಿದೆ.
ಕೊರೊನಾ ವೈರಸ್ನಿಂದ ಕಳೆದ ಮೂರು ತಿಂಗಳನಿಂದ ಯಾವುದೇ ಕ್ರಿಕೆಟ್ ಟೂರ್ನಿಯಿಲ್ಲದೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿತ್ತು. ಇದರಿಂದ ಅಪಾರ ನಷ್ಟವನ್ನು ಎದುರಿಸಿದ್ದ ಕ್ರಿಕೆಟ್ ಆಸ್ಟ್ರೇಲಿಯಾ ನಷ್ಟಪರಿಹಾರವಾಗಿ ಸಿಬ್ಬಂದಿ ಹಾಗೂ ಆಟಗಾರರ ವೃತನದ ಶೇ 20ರಷ್ಟನ್ನು ಕಡಿತಗೊಳಿಸಿತ್ತು. ರಾಜ್ಯ ಸಂಸ್ಥೆಗಳಿಗೆ ಅನುದಾನ ಕಡಿತ ಮಾಡಿದರು. ಆಟಗಾರರ ವೇತನ ಪರಿಷ್ಕರಿಸಲು ಮುಂದಾಗಿತ್ತು. ಈ ಕ್ರಮಗಳಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದವು. ಅದರಿಂದಾಗಿಯೇ ಕೆವಿನ್ ರಾಬರ್ಟ್ ತಮ್ಮ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸಿಇಒ ಸ್ಥಾನಕ್ಕರೆ ಕೆವಿನ್ ರಾಬರ್ಟ್ಸ್ ರಾಜೀನಾಮೆ ನೀಡುತ್ತಿದ್ದಂತೆ ಹಂಗಾಮಿ ಸಿಇಒ ಆಗಿ 2020ರ ಟಿ20 ವಿಶ್ವಕಪ್ ಸಿಇಒ ಆಗಿರುವ ನಿಕ್ ಹಾಕ್ಲೆ ಅಧಿಕಾರ ವಹಿಸಿಕೊಂಡಿದ್ದರು.