ಕರ್ನಾಟಕ

karnataka

ETV Bharat / sports

ಒಂದೇ ಪಂದ್ಯದಲ್ಲಿ 5 ವಿಕೆಟ್ ಪಡೆದು 3 ವಿಶೇಷ ದಾಖಲೆಗಳಿಗೆ ಪಾತ್ರರಾದ ಆ್ಯಂಡ್ರೆ ರಸೆಲ್! - ಕೆಕೆಆರ್​ vs ಮುಂಬೈ ಡ್ರೀಮ್ 11

ರಸೆಲ್​ ತಮ್ಮ ಕರಾರುವಾಕ್​ ಬೌಲಿಂಗ್ ಪ್ರದರ್ಶನದ ಮೂಲಕ ಕೆಕೆಆರ್​ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು..

ಆ್ಯಂಡ್ರೆ ರಸೆಲ್
ಆ್ಯಂಡ್ರೆ ರಸೆಲ್

By

Published : Apr 13, 2021, 10:47 PM IST

ಚೆನ್ನೈ :ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್​ ಪಡೆಯುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್​ರೌಂಡರ್​ ಆ್ಯಂಡ್ರೆ ರಸೆಲ್ ಎರಡು ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.

ರಸೆಲ್ ಮಂಗಳವಾರ ಮುಂಬೈ ವಿರುದ್ಧ ಕೇವಲ 2 ಓವರ್​ ಎಸೆದು 5 ವಿಕೆಟ್​ ಪಡೆದಿದ್ದಾರೆ. ಈ ಮೂಲಕ ಕೇವಲ 12 ಎಸೆತಗಳನ್ನು ಎಸೆದು 5 ವಿಕೆಟ್​ ಪಡೆದ 2ನೇ ಬೌಲರ್​ ಎನಿಸಿಕೊಂಡರು. ಈ ಹಿಂದೆ ಇಶಾಂತ್ ಶರ್ಮಾ ಕೊಚ್ಚಿ ಟಸ್ಕರ್​ ಕೇರಳ ತಂಡದ ಪರ 12 ಎಸೆತಗಳಿಗೆ 5 ವಿಕೆಟ್​ ಪಡೆದಿದ್ದರು. ಇಂದಿನ ಪಂದ್ಯದಲ್ಲಿ ರಸೆಲ್ ಕೀರನ್ ಪೊಲಾರ್ಡ್​, ಕೃನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ಜಸ್ಪ್ರೀತ್ ಬುಮ್ರಾ ಮತ್ತು ರಾಹುಲ್ ಚಹಾರ್ ವಿಕೆಟ್​ ಪಡೆದು ಈ ವಿಶೇಷ ದಾಖಲೆಗೆ ಪಾತ್ರರಾದರು.

ಮುಂಬೈ ವಿರುದ್ಧ ಅತ್ಯುತ್ತಮ ಬೌಲಿಂಗ್ :ರಸೆಲ್ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಪಡೆದ 2ನೇ ಬೌಲರ್​ ಎನಿಸಿಕೊಂಡರು. ಐಪಿಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷೆಲ್ ಪಟೇಲ್ 27 ರನ್​ ನೀಡಿ 5 ವಿಕೆಟ್ ಪಡೆದಿದ್ದರು. ರಸೆಲ್ 15 ರನ್​ ನೀಡಿ 5 ವಿಕೆಟ್ ಪಡೆದು ಬೆಸ್ಟ್ ಬೌಲಿಂಗ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಕೋಲ್ಕತ್ತಾ ಪರ ಅತ್ಯುತ್ತಮ ಬೌಲಿಂಗ್ :ರಸೆಲ್​ ತಮ್ಮ ಕರಾರುವಾಕ್​ ಬೌಲಿಂಗ್ ಪ್ರದರ್ಶನದ ಮೂಲಕ ಕೆಕೆಆರ್​ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಈ ಹಿಂದೆ ಸ್ಪಿನ್ನರ್ ಸುನೀಲ್ ನರೈನ್ 2012ರಲ್ಲಿ ಪಂಜಾಬ್ ವಿರುದ್ಧ 19ರನ್​ ನೀಡಿ 5 ವಿಕೆಟ್ ಪಡೆದಿದ್ದದ್ದು ದಾಖಲೆಯಾಗಿತ್ತು. 2020ರಲ್ಲಿ ವರುಣ್ ಚಕ್ರವರ್ತಿ 20 ರನ್​ ನೀಡಿ 5 ವಿಕೆಟ್ ಪಡೆದಿದ್ದರು.

ABOUT THE AUTHOR

...view details