ಕರ್ನಾಟಕ

karnataka

ETV Bharat / sports

ಗೆದ್ದ ಬೆನ್ನಲ್ಲೇ ಇಂಗ್ಲೆಂಡ್​​ಗೆ  ಆಘಾತ... ಸ್ಟಾರ್​ ಬೌಲರ್​ಗೆ ಮತ್ತೆ ಗಾಯ - ಇಂಗ್ಲೆಂಡ್​ ತಂಡದಿಂದ ಹೊರಬಿದ್ದ ಆ್ಯಂಡರ್ಸನ್​

ಇಂಗ್ಲೆಂಡ್​ ತಂಡದ ಗರಿಷ್ಠ ಟೆಸ್ಟ್​ ವಿಕೆಟ್​ ಪಡೆದಿರುವ ಬೌಲರ್​ ಆಗಿರುವ ಆ್ಯಂಡರ್ಸನ್​ ಎರಡನೇ ಟೆಸ್ಟ್​ ವೇಳೆ ಪಕ್ಕೆಲುಬು ನೋವಿಗೆ ತುತ್ತಾಗಿದ್ದಾರೆಂದು ವರದಿಯಿಂದ ತಿಳಿದು ಬಂದಿದೆ.

James Anderson
James Anderson

By

Published : Jan 9, 2020, 1:43 PM IST

ಕೇಪ್​ಟೌನ್​:ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ 7 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್​ ಗಾಯಕ್ಕೆ ತುತ್ತಾಗಿದ್ದು ಸರಣಿಯಿಂದ ಹೊರಬಿದ್ದಿದ್ದಾರೆ.

ಇಂಗ್ಲೆಂಡ್​ ತಂಡದ ಗರಿಷ್ಠ ಟೆಸ್ಟ್​ ವಿಕೆಟ್​ ಪಡೆದಿರುವ ಬೌಲರ್​ ಆಗಿರುವ ಆ್ಯಂಡರ್ಸನ್​ ಎರಡನೇ ಟೆಸ್ಟ್​ ವೇಳೆ ಪಕ್ಕೆಲುಬು ನೋವಿಗೆ ತುತ್ತಾಗಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

ಜೇಮ್ಸ್​ ಆ್ಯಂಡರ್ಸನ್​

ಮೊದಲ ಟೆಸ್ಟ್​ ಸೋತಿದ್ದ ಇಂಗ್ಲೆಂಡ್​ ಆ್ಯಂಡರ್ಸನ್​ ಹಾಗೂ ಬೆನ್​ಸ್ಟೋಕ್​ ಉತ್ತಮ ಪ್ರದರ್ಶನದ ನೆರವಿನಿಂದ ಎರಡನೇ ಟೆಸ್ಟ್​ನಲ್ಲಿ 189 ರನ್​ಳಿಂದ ಗೆದ್ದು ಬೀಗಿತ್ತು. 37 ವರ್ಷದ ಆ್ಯಂಡರ್ಸನ್​ ಈ ಪಂದ್ಯದಲ್ಲಿ ತಮ್ಮ 28 ನೇ 5 ವಿಕೆಟ್​ ಗೊಂಚಲು ಪಡೆದು ಅಶ್ವಿನ್​ ಹಾಗೂ ಇಯಾನ್ ಬೋಥಮ್​ ದಾಖಲೆ ಬ್ರೇಕ್​ ಮಾಡಿದ್ದರು.

ಆ್ಯಶಸ್​ ಟೆಸ್ಟ್​ ಸರಣಿ ವೇಳೆ ಗಾಯಕ್ಕೆ ತುತ್ತಾಗಿದ್ದ ಆ್ಯಂಡರ್ಸನ್​ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೆ ಮರಳಿದ್ದರು. ಇದೀಗ ಮತ್ತೆ ಗಾಯ ಅವರ ಟೆಸ್ಟ್​ ಕರಿಯರ್​ಗೆ ಕಂಟಕವಾಗಿದೆ. ಅಲ್ಲದೇ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಇಂಗ್ಲೆಂಡ್ ಬೌಲರ್​ ಆಗಿದ್ದ ಆ್ಯಂಡಿ ಅನುಪಸ್ಥಿತಿ ಮೂರನೇ ಟೆಸ್ಟ್​ನಲ್ಲಿ ಆಂಗ್ಲರ​ನ್ನು ಕಾಡಲಿದೆ.

ABOUT THE AUTHOR

...view details