ಲಂಡನ್:ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ 600 ವಿಕೆಟ್ ಪಡೆದು ದಾಖಲೆ ಬರೆದಿದ್ದ ಜೇಮ್ಸ್ ಆ್ಯಂಡರ್ಸನ್ ಇಂಗ್ಲೆಂಡ್ ತಂಡ ಮುಂದಿನ ವರ್ಷಾರಂಭದಲ್ಲಿ ಭಾರತ ಪ್ರವಾಸ ಕೈಗೊಂಡಾಗ ವಿರಾಟ್ ಕೊಹ್ಲಿ ಅವರನ್ನು ಎದುರಿಸಲು ಉತ್ಸುಕನಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಕೆಲ ವರ್ಷಗಳಿಂದ ಕೊಹ್ಲಿ ಹಾಗೂ ಆ್ಯಂಡರ್ಸನ್ ನಡುವೆ ತೀವ್ರವಾದಕಾದಾಟ ನಡೆಯುತ್ತಿದೆ. ಇಂಗ್ಲೆಂಡ್ ನೆಲದಲ್ಲಿ ಆ್ಯಂಡರ್ಸನ್ ಪ್ರಾಬಲ್ಯ ಸಾಧಿಸಿದರೆ, ಭಾರತದಲ್ಲಿ ಕೊಹ್ಲಿ ಕಿಂಗ್ ಆಗಿದ್ದಾರೆ. ಆದರೆ ಕೊಹ್ಲಿ 2018ರ ಸರಣಿಯಲ್ಲಿ ಇಂಗ್ಲೆಂಡ್ ನೆಲದಲ್ಲೂ ಅದ್ಭುತ ಪ್ರದರ್ಶನ ತೋರಿದ್ದರು. ಇದೀಗ 2021 ಆರಂಭದಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಕೊಹ್ಲಿ ವಿರುದ್ಧ ಕಠಿಣ ಪೈಪೋಟಿಗೆ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಜೇಮ್ಸ್ ಆ್ಯಂಡರ್ಸನ್-ವಿರಾಟ್ ಕೊಹ್ಲಿ "ಅಂತಹ ಗುಣಮಟ್ಟವುಳ್ಳ ಬ್ಯಾಟ್ಸ್ಮನ್ಗೆ ಬೌಲಿಂಗ್ ಮಾಡುವುದು ಕಷ್ಟ. ಇದೊಂದು ಕಠಿಣವಾದ ಯುದ್ಧ ವಾಗಿದ್ದರೂ, ಅದನ್ನು ನಾನು ಆನಂದಿಸುತ್ತೇನೆ. ಏಕೆಂದರೆ ನೀವು ಯಾವಾಗಲೂ ಉತ್ತಮ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಲು ಬಯಸುತ್ತೀರ" ಎಂದು ಬ್ರಿಟಿಷ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
2014ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಆ್ಯಂಡರ್ಸನ್ ಕೊಹ್ಲಿಯನ್ನು ತುಂಬಾ ಕಾಡಿದ್ದರು. ಬಲಗೈ ವೇಗಿ ನಾಲ್ಕು ಬಾರಿ ಭಾರತದ ನಾಯಕನನ್ನು ಔಟ್ ಮಾಡಿದ್ದರು. ಆ ಸರಣಿಯಲ್ಲಿ ಕೊಹ್ಲಿ ತಮ್ಮ 10 ಇನ್ನಿಂಗ್ಸ್‌ಗಳಲ್ಲಿ ಕೇವಲ 134 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಕೊಹ್ಲಿ 2018ರ ಪ್ರವಾಸದಲ್ಲಿ ಸಂಪೂರ್ಣವಾಗಿ ವಿಭಿನ್ನ ಬ್ಯಾಟ್ಸ್‌ಮನ್ ಆಗಿ ಮರಳಿದ್ದಾರೆ. ಅವರು ಆ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್‌ಮನ್ ಕೂಡಾ ಹೌದು. ಎರಡು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 593 ರನ್ ಗಳಿಸಿ ಗಮನ ಸೆಳೆದಿದ್ದರು.
ವಿರಾಟ್ ಕೊಹ್ಲಿ - ಜೇಮ್ಸ್ ಆ್ಯಂಡರ್ಸನ್ 2014 ಹಾಗೂ 2018ರಲ್ಲಿ ಕೊಹ್ಲಿಯಲ್ಲಿ ಕಂಡ ಬದಲಾವಣೆಗಳ ಬಗ್ಗೆ ವಿವರಿಸಿದ ಆ್ಯಂಡರ್ಸನ್, "2019ರಲ್ಲಿ ಕೆಲವು ಕಠಿಣ ಎಸೆತಗಳನ್ನು ತಪ್ಪಿಸಿಕೊಳ್ಳುವಲ್ಲಿ ಅವರು ವಿಶೇಷ ಕೌಶಲ ಪ್ರದರ್ಶಿಸಿದರು. ಅದೇ ರೀತಿ ಲೆಗ್ಸ್ನಲ್ಲಿ ಬಲಿಷ್ಟವಾಗಿದ್ದರಿಂದ ತುಂಬಾ ಸುಲಭವಾಗಿ ರನ್ ಗಳಿಸುತ್ತಿದ್ದರು" ಎಂದು ಜಿಮ್ಮಿ ತಾವು ಕಂಡ ವ್ಯತ್ಯಾಸಗಳನ್ನು ತಿಳಿಸಿದರು.