ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು 2021ರ ಮಿನಿ ಹರಾಜಿಗೂ ಮುನ್ನ 12 ಆಟಗಾರರನ್ನು ಉಳಿಸಿಕೊಂಡಿದ್ದು, ಕೆಲ ಆಟಗಾರರನ್ನು ಕೈಬಿಟ್ಟಿದೆ. ಟೀಂ ಇಂಡಿಯಾದ ಮಾಜಿ ಆಟಗಾರ ಪಾರ್ಥೀವ್ ಪಟೇಲ್ ಅವರನ್ನು ಕೂಡ ತಂಡದಿಂದ ಬಿಡುಗಡೆ ಮಾಡಿದೆ.
ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡ ನಂತರ ಪಾರ್ಥೀವ್ ಪಟೇಲ್ ಟ್ವೀಟ್ ಮಾಡಿದ್ದು ಆರ್‌ಸಿಬಿಗೆ ಧನ್ಯವಾದ ಹೇಳುವ ಮೂಲಕ ನಯವಾಗೇ ತಿವಿದಂತಿದೆ.
ಕಳೆದ ಐಪಿಲ್ ಬಳಿಕ ಪಾರ್ಥೀವ್ ಪಟೇಲ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಬಿಡುಗಡೆಗೊಳಿಸಿದ ಆಟಗಾರರ ಪಟ್ಟಿಯಲ್ಲಿ ಪಾರ್ಥೀವ್ ಪಟೇಲ್ ಅವರನ್ನು ಹೆಸರಿಸಿ ನಿವೃತ್ತರಾಗಿದ್ದಾರೆ ಎಂದು ಉಲ್ಲೇಖಿಸಿದೆ.
"ನಿವೃತ್ತಿ ಘೋಷಿಸಿದ ನಂತರ ಬಿಡುಗಡೆಗೊಳಿಸಿರುವುದಕ್ಕೆ ಗೌರವ ಸಲ್ಲಿಸುತ್ತಿದ್ದೇನೆ, ಧನ್ಯವಾದಗಳು ಆರ್‌ಸಿಬಿ" ಎಂದು ಪಾರ್ಥೀವ್ ಪಟೇಲ್ ಟ್ವೀಟ್ ಮಾಡಿದ್ದಾರೆ.