ಕರ್ನಾಟಕ

karnataka

ETV Bharat / sports

ಟಿ-20 ಮಾದರಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್​: ಮೊದಲ ಸ್ಥಾನ ಹಂಚಿಕೊಂಡ ಅಮಿತ್​ ಮಿಶ್ರಾ - ಅಮಿತ್ ಮಿಶ್ರಾ ಗರಿಷ್ಠ ಟಿ20 ವಿಕೆಟ್​

ಅಬುಧಾಬಿಯಲ್ಲಿ ನಡೆಯುತ್ತಿರುವ ಐಪಿಎಲ್​ನ 11ನೇ ಪಂದ್ಯದಲ್ಲಿ ಮಿಶ್ರಾ ಡೇವಿಡ್​ ವಾರ್ನರ್​ ಮತ್ತು ಮನೀಷ್ ಪಾಂಡೆ ವಿಕೆಟ್ ಪಡೆಯುವ ಮೂಲಕ 255ನೇ ವಿಕೆಟ್​ ಪಡೆದಿದ್ದಾರೆ.

IPL 2020
ಅಮಿತ್​ ಮಿಶ್ರಾ

By

Published : Sep 29, 2020, 10:33 PM IST

ಅಬುಧಾಬಿ:ಡೆಲ್ಲಿ ಕ್ಯಾಪಿಟಲ್​ ತಂಡದ ಅನುಭವಿ ಸ್ಪಿನ್ನರ್​ ಅಮಿತ್​ ಮಿಶ್ರಾ ಸನ್ ​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್​ ಪಡೆಯುವ ಮೂಲಕ ಟಿ - 20 ಕ್ರಿಕೆಟ್​ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಎಂಬ ದಾಖಲೆಯನ್ನು ಪಿಯೂಷ್ ಚಾವ್ಲಾ ಅವರೊಂದಿಗೆ ಹಂಚಿಕೊಂಡಿದ್ದಾರೆ.

ಅಬುಧಾಬಿಯಲ್ಲಿ ನಡೆಯಿತ್ತಿರುವ ಐಪಿಎಲ್​ನ 11ನೇ ಪಂದ್ಯದಲ್ಲಿ ಮಿಶ್ರಾ ಡೇವಿಡ್​ ವಾರ್ನರ್​ ಮತ್ತು ಮನೀಷ್ ಪಾಂಡೆ ವಿಕೆಟ್ ಪಡೆಯುವ ಮೂಲಕ 255ನೇ ವಿಕೆಟ್​ ಪಡೆದಿದ್ದಾರೆ.

ಅಮಿತ್​ ಮಿಶ್ರಾ 231 ಪಂದ್ಯಗಳಲ್ಲಿ 255 ವಿಕೆಟ್​ ಪಡೆದಿದ್ದರೆ, ಪಿಯೂಷ್ ಚಾವ್ಲಾ 240 ಪಂದ್ಯಗಳಿಂದ 255 ವಿಕೆಟ್ ಪಡೆದಿದ್ದಾರೆ. ಇನ್ನು ಐಪಿಎಲ್​ನಲ್ಲಿ ನೋಡುವುದಾದರೆ ಅಮಿತ್ ಮಿಶ್ರಾ 159 ವಿಕೆಟ್​ಗಳೊಂದಿಗೆ ಗರಿಷ್ಠ ವಿಕೆಟ್​ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಲಸಿತ್​ ಮಾಲಿಂಗ(170). ಮೂರನೇ ಸ್ಥಾನದಲ್ಲಿ 154 ವಿಕೆಟ್ ಪಡೆದಿರುವ ಚಾವ್ಲಾ ಹಾಗೂ ನಾಲ್ಕನೇ ಸ್ಥಾನದಲ್ಲಿ ಹರ್ಭಜನ್ ಸಿಂಗ್(150) ಇದ್ದಾರೆ.

ಒಟ್ಟಾರೆ ಟಿ-20 ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ದಾಖಲೆ ವೆಸ್ಟ್​ ಇಂಡೀಸ್​ ತಂಡದ ಡ್ವೇನ್ ಬ್ರಾವೋ(506) ಹೆಸರಿನಲ್ಲಿದೆ. ಎರಡನೇ ಸ್ಥಾನದಲ್ಲಿ ಲಸಿತ್​ ಮಾಲಿಂಗ(390), 3ನೇ ಸ್ಥಾನದಲ್ಲಿ ನರೈನ್ (386), 4ನೇ ಸ್ಥಾನದಲ್ಲಿ ಇಮ್ರಾನ್​ ತಾಹೀರ್​(380) ಹಾಗೂ ಸೊಹೈಲ್ ತನ್ವೀರ್​(356) ಇದ್ದಾರೆ.

ABOUT THE AUTHOR

...view details