ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ನಲ್ಲಿ ಕ್ವಾಂರಂಟೈನ್​ ಮುಗಿಸಿ ಪಾಕಿಸ್ತಾನ ತಂಡ ಸೇರಿಕೊಂಡ ಮೊಹಮ್ಮದ್​ ಅಮೀರ್​ - pakistan T20 series against England

ಅಮೀರ್​ ಇಂಗ್ಲೆಂಡ್​ನಲ್ಲಿ ಕಡ್ಡಾಯವಾಗಿರುವ 5 ದಿನಗಳ ಕ್ವಾರಂಟೈನ್ ಅವಧಿ​ ಪೂರೈಸಿದ್ದು, ಈ ವೇಳೆ ಎರಡು ಬಾರಿ ಕೋವಿಡ್​ 19 ಪರೀಕ್ಷೆಗೆ ಒಳಗಾಗಿದ್ದರು. ಅದರಲ್ಲಿ ನೆಗೆಟಿವ್​ ವರದಿ ಬಂದ ನಂತರ ಪಾಕಿಸ್ತಾನ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಗುರುವಾರ ಪಿಸಿಬಿ ಮಾಹಿತಿ ನೀಡಿದೆ.

ಮೊಹಮ್ಮದ್​ ಅಮೀರ್​
ಮೊಹಮ್ಮದ್​ ಅಮೀರ್​

By

Published : Jul 30, 2020, 6:49 PM IST

ಡರ್ಬಿ: ಸತತ ಎರಡು ಕೋವಿಡ್​ ಟೆಸ್ಟ್​ ಪೂರೈಸಿ ಇಂಗ್ಲೆಂಡ್​ಗೆ ತೆರಳಿದ್ದ ಮೊಹಮ್ಮದ್​ ಅಮೀರ್​ ಕ್ವಾರಂಟೈನ್​ ಅವಧಿ ಮುಗಿಸಿ ಪಾಕಿಸ್ತಾನ ತಂಡ ಸೇರಿಕೊಂಡಿದ್ದಾರೆ ಎಂದು ಪಿಸಿಬಿ ತಿಳಿಸಿದೆ.

ಅಮೀರ್​ ಇಂಗ್ಲೆಂಡ್​ನಲ್ಲಿ ಕಡ್ಡಾಯವಾಗಿರುವ 5 ದಿನಗಳ ಕ್ವಾರಂಟೈನ್ ಅವಧಿ​ ಪೂರೈಸಿದ್ದು, ಈ ವೇಳೆ ಎರಡು ಬಾರಿ ಕೋವಿಡ್​ 19 ಪರೀಕ್ಷೆಗೆ ಒಳಗಾಗಿದ್ದರು. ಅದರಲ್ಲಿ ನೆಗೆಟಿವ್​ ವರದಿ ಬಂದ ನಂತರ ಪಾಕಿಸ್ತಾನ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಗುರುವಾರ ಪಿಸಿಬಿ ಮಾಹಿತಿ ನೀಡಿದೆ.

"ಅಮೀರ್​ ಲಾಹೋರ್​ನಿಂದ ಜುಲೈ 24 ರಂದು ಹೊರಟರು. ಇಂಗ್ಲೆಂಡ್​ ಸರ್ಕಾರದ ಮಾರ್ಗದರ್ಶನದಂತೆ 5 ದಿನಗಳ ಕ್ವಾರಂಟೈನ್​ ಮುಗಿಸಿದ್ದಾರೆ. ಈ ವೇಳೆ ನಡೆದ 2 ಕೋವಿಡ್​ ಪರೀಕ್ಷೆಯಲ್ಲೂ ನೆಗೆಟಿವ್​ ವರದಿ ಬಂದಿದೆ" ಎಂದು ಪಿಸಿಬಿ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

ಈಗಾಗಲೆ ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ಮೊಹಮ್ಮದ್​ ಅಮೀರ್​ .ಆಗಸ್ಟ್​ 28 ರಿಂದ ಮ್ಯಾಂಚೆಸ್ಟರ್​ನ ಬಯೋಸೆಕ್ಯೂರ್​ ವಾತಾವಣದಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಮತ್ತೊಬ್ಬ ಯುವ ಬೌಲರ್​ ಹ್ಯಾರೀಸ್​ ರಾವುಫ್​ ಕೂಡ ತಮ್ಮ ಎರಡನೇ ಕೋವಿಡ್ ಟೆಸ್ಟ್​ ಮುಗಿಸಿದ್ದು, ಇಂಗ್ಲೆಂಡ್​ ತೆರಳಲು ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಅವರು ವಾರಾಂತ್ಯದಲ್ಲಿ ಇಂಗ್ಲೆಂಡ್​ಗೆ ಪ್ರಯಾಣ ಬೆಳಸಿದ್ದಾರೆ. ಅಲ್ಲಿನ ಪ್ರೋಟೋಕಾಲ್​ಗಳನ್ನು ಮುಗಿದ ನಂತರ ಪಾಕ್​ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಆಗಸ್ಟ್​ 5ರ ರಿಂದ ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ ಮ್ಯಾಂಚೆಸ್ಟರ್​​ನಲ್ಲಿ ತನ್ನ ಮೊದಲ ಪಂದ್ಯವಾಡಲಿದೆ.

ABOUT THE AUTHOR

...view details