ಕರ್ನಾಟಕ

karnataka

ETV Bharat / sports

ರಾಯುಡು ಅರ್ಧಶತಕದ ಮಿಂಚು ... ಕರ್ನಾಟಕವನ್ನು ಮಣಿಸಿದ ಹೈದರಾಬಾದ್​

ಕರ್ನಾಟಕದ ವಿರುದ್ದ ನಡೆದ ಆಲೂರಿನ ಕೆಎಸ್​ಸಿಎ ಕ್ರೀಡಾಂಗಣದಲ್ಲಿ ನಡೆದ ವಿಜಯ್​ ಹಜಾರೆ ಟ್ರೋಫಿಯಲ್ಲಿ ಹೈದರಾಬಾದ್​ 21 ರನ್​ಗಳ ಜಯ ಸಾಧಿಸಿ ಅಗ್ರಕ್ರಮಾಂಕದ ಕರ್ನಾಟಕ ತಂಡಕ್ಕೆ ಸೋಲುಣಿಸಿದ್ದಾರೆ.

Ambati rayudu

By

Published : Oct 1, 2019, 7:55 PM IST

ಬೆಂಗಳೂರು:ನಿವೃತ್ತಿ ನಿರ್ಧಾರದಿಂದ ಹೊರಬಂದು ದೇಶಿ ಕ್ರಿಕೆಟ್​ನಲ್ಲಿ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಅಂಬಾಟಿ ರಾಯುಡು ಏಕಾಂಗಿ ಹೋರಾಟ ನಡೆಸಿ ತಮ್ಮ ತಂಡವನ್ನು ಗೆಲ್ಲಿಸಿದ್ದಾರೆ.

ಕರ್ನಾಟಕದ ವಿರುದ್ದ ನಡೆದ ಆಲೂರಿನ ಕೆಎಸ್​ಸಿಎ ಕ್ರೀಡಾಂಗಣದಲ್ಲಿ ನಡೆದ ವಿಜಯ್​ ಹಜಾರೆ ಟ್ರೋಫಿಯಲ್ಲಿ ಹೈದರಾಬಾದ್​ 21 ರನ್​ಗಳ ಜಯ ಸಾಧಿಸಿ ಅಗ್ರಕ್ರಮಾಂಕದ ಕರ್ನಾಟಕ ತಂಡಕ್ಕೆ ಸೋಲುಣಿಸಿದ್ದಾರೆ.

ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಹೈದರಾಬಾದ್​ ತಂಡ ಕರ್ನಾಟಕದ ಬೌಲರ್​ಗಳ ಪ್ರಚಂಡ ದಾಳಿಗೆ ಸಿಲುಕಿ ಕೇವಲ 198 ರನ್​ಗಳಿಗೆ ಆಲೌಟ್​ ಆಯಿತು. ಒಂದೆಡೆ ವಿಕೆಟ್​ ಬೀಳುತ್ತಿದ್ದರು ಕ್ರೀಸ್​ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ರಾಯುಡು 111 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 4 ಬೌಂಡರಿ ನೆರವಿನಿಂದ 87 ರನ್​ಗಳಿಸಿದರು.

ಅದ್ಭುತ ಬೌಲಿಂಗ್​ ದಾಳಿ ನಡೆಸಿದ ಮಿಥುನ್​ 2, ಪ್ರಸಿದ್​ ಕೃಷ್ಣ 2, ರೋನಿತ್​ ಮೋರೆ 2, ಕರುಣ್​ ನಾಯರ್​, ಶ್ರೇಯಸ್​ ಗೋಪಾಲ್​ ಹಾಗೂ ಪ್ರವೀಣ್​ ದುಬೆ ತಲಾ ಒಂದು ವಿಕೆಟ್​ ಪಡೆದರು.

199 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಕರ್ನಾಟಕ 45 ಓವರ್​ಗಳಲ್ಲಿ 177 ರನ್​ಗಳಿಗೆ ಆಲೌಟ್​ ಆಗುವ ಮೂಲಕ 21 ರನ್​ಗಳ ಸೋಲನುಭವಿಸಿತು. ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ 60 ಹಾಗೂ ನಾಯಕ ಮನೀಷ್​ ಪಾಂಡೆ 48 ರನ್​ಗಳಿಸಿ ಗೆಲುವಿಗಾಗಿ ಹೋರಾಟ ನಡೆಸದರಾದರೂ ಗೆಲುವಿನ ದಡ ಸೇರುಸುವಲ್ಲಿ ವಿಫಲರಾದರು.

ಹೈದರಾಬಾದ್ ತಂಡ ಪಾರ್ಟ್​ ಟೈಮ್​ ಬೌಲರ್​ ಬವನಕ ಸಂದೀಪ್​ 4 ವಿಕೆಟ್​ ಹಾಗೂ ಸಿರಾಜ್​ 2 ವಿಕೆಟ್​ ಪಡೆದು ಕರ್ನಾಟಕದ ಗೆಲುವಿನ ಆಸೆಗೆ ಕಣ್ಣೀರೆರಚಿದರು.

ಇಂದು ನಡೆದ ಇತರೆ ಪಂದ್ಯಗಳಲ್ಲಿ ಮುಂಬೈ 5 ವಿಕೆಟ್​ಗಳಿಂದ ಸೌರಾಷ್ಟ್ರ ತಂಡವನ್ನು, ತಮಿಳುನಾಡು 74 ರನ್​ಗಳಿಂದ ಬೆಂಗಾಲ್​ ತಂಡವನ್ನು, ಸರ್ವೀಸಸ್​ 5 ವಿಕೆಟ್​ಗಳಿಂದ ರೈಲ್ವೇಸ್​ ತಂಡವನ್ನು, ಗುಜರಾತ್​ 5 ವಿಕೆಟ್​ಗಳಿಂದ ರಾಜಸ್ಥಾನ ತಂಡವನ್ನು, ಚತ್ತಿಸ್​ಗಡ್​ 4 ವಿಕೆಟ್​ಗಳಿಂದ ಸಿಕ್ಕಿಂ ತಂಡವನ್ನು ಮಣಿಸಿವೆ.

ABOUT THE AUTHOR

...view details