ಕರ್ನಾಟಕ

karnataka

ETV Bharat / sports

ಬ್ಯಾಟ್ಸ್​ಮನ್​ ಆಗಿ ಇಷ್ಟಪಡುತ್ತೇನೆ, ಆದರೆ ಮನುಷ್ಯನಾಗಿ ಆತನಲ್ಲಿ ಸಮಸ್ಯೆಯಿದೆ: ಅಫ್ರಿದಿ - Paddy upton

ಒಬ್ಬ ಕ್ರಿಕೆಟಿಗ ಹಾಗು ಒಬ್ಬ ಬ್ಯಾಟ್ಸ್​ಮನ್​ ಆಗಿ ಗಂಭೀರ್​ ಅವರನ್ನು ಯಾವಾಗಲೂ ನಾನು ಇಷ್ಟಪಡುತ್ತೇನೆ. ಆದರೆ ಒಬ್ಬ ಮನುಷ್ಯನಾಗಿ ಅವರಿಗೆ ಸಮಸ್ಯೆ ಇದೆ. ಅವರಿಗೆ ಸರಿಯಾದ ಚಿಕಿತ್ಸೆಯ ಅಗತ್ಯವಿದೆ ಎಂದು ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಟೀಕಿಸಿದ್ದಾರೆ.

ಗೌತಮ್​ ಗಂಭೀರ್​- ಶಾಹೀದ್​ ಅಫ್ರಿದಿ
ಗೌತಮ್​ ಗಂಭೀರ್​- ಶಾಹೀದ್​ ಅಫ್ರಿದಿ

By

Published : Jul 19, 2020, 4:38 PM IST

ಲಾಹೋರ್​:ಗೌತಮ್​ ಗಂಭೀರ್ ಅವ​ರನ್ನು ಒಬ್ಬ ಬ್ಯಾಟ್ಸ್​ಮನ್​ ಆಗಿ ಇಷ್ಟಪಡುತ್ತೇನೆ. ಆದರೆ ಒಬ್ಬ ಮನುಷ್ಯನಾಗಿ ಅವರಲ್ಲಿ ಏನೋ ಸಮಸ್ಯೆಯಿದೆ ಎಂದು ನನಗನ್ನಿಸುತ್ತದೆ ಎಂದು ಹೇಳಿಕೆ ಅಫ್ರಿದಿ ಹೇಳಿದ್ದಾರೆ.

ಒಬ್ಬ ಕ್ರಿಕೆಟಿಗ ಹಾಗು ಒಬ್ಬ ಬ್ಯಾಟ್ಸ್​ಮನ್​ ಆಗಿ ಗಂಭೀರ್​ ಅವರನ್ನು ಯಾವಾಗಲೂ ನಾನು ಇಷ್ಟಪಡುತ್ತೇನೆ. ಆದರೆ ಒಬ್ಬ ಮನುಷ್ಯನಾಗಿ ಅವರಿಗೆ ಸಮಸ್ಯೆಗಳಿವೆ. ಅವರಿಗೆ ಸರಿಯಾದ ಚಿಕಿತ್ಸೆ ನೆರವಿನ ಅಗತ್ಯವಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

​ಭಾರತದ ಫಿಸಿಯೋ ಆಗಿ 2009ರಿಂದ 2011ರವೆರೆಗೆ ಕಾರ್ಯನಿರ್ವಹಿಸುವ ಪ್ಯಾಡಿ ಆ್ಯಪ್ಟನ್ ತಮ್ಮ ಆಟೋ ಬಯೋಗ್ರಫಿಯಲ್ಲಿ ಮಾನಸಿಕ ಕಠಿಣತೆಯ ವಿಚಾರದಲ್ಲಿ ನಾನು ಕೆಲಸ ಮಾಡಿದವರಲ್ಲಿ ಕಂಡ ದುರ್ಬಲ ಮತ್ತು ಅಸುರಕ್ಷಿತ ಮನೋಭಾವವುಳ್ಳ ಜನರಲ್ಲಿ ಆತನೂ (ಗಂಭೀರ್​) ಒಬ್ಬ ಎಂದು ಬರೆದುಕೊಂಡಿದ್ದಾರೆ ಎವರು ಹೇಳಿದ್ದಾರೆ.

ಗಂಭೀರ್​ ಶತಕಗಳಿಸಿದರೂ ಒತ್ತಡಕ್ಕೊಳಗಾಗುತ್ತಿದ್ದರು ಎಂದು ಪ್ಯಾಡಿ ಬರೆದುಕೊಂಡಿದ್ದರು. ಆದರೆ ಇದಕ್ಕೆ ಸರಿಯಾದ ಉತ್ತರ ಕೊಟ್ಟಿದ್ದ ಗಂಭೀರ್​, ನಾನು ನನ್ನ ವೈಯಕ್ತಿಕ ದಾಖಲೆಗಿಂತ ತಂಡದ ಗೆಲುವನ್ನು ಬಯಸುತ್ತಿದ್ದೆ. ಆದ್ದರಿಂದ ನಿಮಗೆ ಹಾಗೆ ಕಂಡಿರಬೇಕು ಎಂದು ತಿರುಗೇಟು ನೀಡಿದ್ದರು.

ಅಫ್ರಿದಿ ಮತ್ತು ಗಂಭೀರ್ ಅವರು ಮೈದಾನದಲ್ಲಿ ಹಲವಾರು ಸಂದರ್ಭಗಳಲ್ಲಿ ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ನಿವೃತ್ತಿಯ ನಂತರವೂ ಸಾಮಾಜಿಕ ಜಾಲಾತಾಣಗಳಲ್ಲಿ ಅವಿರಬ್ಬರ ನಡುವೆ ಕಾದಾಟಗಳು ಸಂಭವಿಸುತ್ತಿರುತ್ತವೆ. ಅಫ್ರಿದಿ ತಮ್ಮ ಆತ್ಮಚರಿತ್ರೆಯಲ್ಲಿ ಗಂಭೀರ್​ ಅವರ ವರ್ತನೆ ಸಮಸ್ಯೆಗಳ ಬಗ್ಗೆ ಬರೆದುಕೊಂಡಿದ್ದರು. ಇದರಿಂದ ಇವರಿಬ್ಬರ ನಡುವೆ ಆಗಾಗ್ಗೆ ವಿಭಿನ್ನ ವಿಚಾರಗಳಲ್ಲಿ ಟ್ವಿಟರ್​ ವಾರ್​ ಸಂಭವಿಸುತ್ತಿರುತ್ತದೆ.

ABOUT THE AUTHOR

...view details